Shivamogga Riot: 'ಕಾಂಗ್ರೆಸ್ ಜಿಹಾದಿಗಳಿಗೆ ಶರಣಾಗಿದೆ, ಸಿದ್ದರಾಮಯ್ಯ ತಲೆ ಮರಿಸಿಕೊಂಡಿದ್ದಾರೆ'- ಬಿಜೆಪಿ ಟ್ವೀಟ್
ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದಾಗಿ ಶಿವಮೊಗ್ಗ ಕೋಮಸೂಕ್ಷ್ಮ ನಗರವಾಗಿದೆ. ಭಾನುವಾರ ನಡೆದ ಈ ಘಟನೆಯ ಬಗ್ಗೆ ಬಿಜೆಪಿ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದೆ. ಈ ಬಗ್ಗೆ ಎಕ್ಸ್ (ಟ್ವೀಟ್)ನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದೆ.
''ಜಿಹಾದಿಗಳು ಶಿವಮೊಗ್ಗದ ಬೀದಿಗಳಲ್ಲಿ ಕತ್ತಿ ಮತ್ತು ಆಯುಧಗಳನ್ನು ಝಳಪಿಸುತ್ತಾ 'ಸೆಕ್ಯುಲರ್' ಆಗಿ ಓಡಾಡುತ್ತಾರೆ. ಸಿದ್ದರಾಮಯ್ಯ ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಯಾವುದೇ ಕ್ರಮದ ಭಯವಿಲ್ಲದೆ ಹಿಂದೂಗಳನ್ನು ಭಯಭೀತಗೊಳಿಸಲು ಜಿಹಾದಿ ಸಂಘಟನೆಗಳು ಅಡಗಿ ಕುಳಿತಿವೆ. ಕಾಂಗ್ರೆಸ್ ಜಿಹಾದಿಗಳಿಗೆ ಶರಣಾಗಿದೆ'' ಎಂದು ಬಿಜೆಪಿ ಎಕ್ಸ್ (ಟ್ವೀಟ್)ನಲ್ಲಿ ಬರೆದಿದೆ.

ಜೊತೆಗೆ 'ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಿಹಾದಿ ಸರ್ಕಾರವಲ್ಲದೆ ಬೇರೇನೂ ಅಲ್ಲ ಎಂಬುದು ದುರದೃಷ್ಟಕರ' ಎಂದು ಬಿಜೆಪಿ ಎಕ್ಸ್ (ಟ್ವೀಟ್)ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದೆ. ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಿಂದೂಗಳಿಗೆ ಯಾವುದೇ ರಕ್ಷಣೆ ಇಲ್ಲ ಎಂದು ಬಿಜೆಪಿ ದೂರಿದೆ.
Jihadis run amok on the streets of Shivamogga, brandishing swords & weapons, while 'secular' @siddaramaiah has gone into hiding.
— BJP Karnataka (@BJP4Karnataka) October 2, 2023
With @INCKarnataka govt back in power, Jihadi organisations have emerged from hiding to terrorise Hindus with no fear of action. INC has surrendered… pic.twitter.com/0AI01VZ8GX
ಶಿವಮೊಗ್ಗದಲ್ಲಿ ಆಗಿದ್ದೇನು?
ಭಾನುವಾರ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಭಾನುವಾರ ಸಂಜೆ ರಾಗಿಗುಡ್ಡದಲ್ಲಿರುವ ಶನೇಶ್ವರ ದೇವಸ್ಥಾನ ಮತ್ತು ಅದರ ಸಮೀಪ ಕಲ್ಲುತೂರಾಟ ನಡೆಸಲಾಗಿದ್ದು, ಗಾಯಗೊಂಡಿದ್ದ ಐವರನ್ನು ಪೊಲೀಸರು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಸಹ ಗಾಯಗೊಂಡಿದ್ದಾರೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಪೊಲೀಸರು 144ಸೆಕ್ಷನ್ ಜಾರಿಗೊಳಿಸಿದ್ದು ಮೂವತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿ ಆಕ್ರೋಶಿತರು ಅನ್ಯ ಕೋಮಿನ ಪ್ರದೇಶಗಳಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ತಡರಾತ್ರಿಯಲ್ಲಿ ರಬಸದಿಂದ ಬಂದ ಕಲ್ಲುಗಳಿಂದಾಗಿ ಮನೆ ಬಾಗಿಲು ಕಿಟಕಿಗಳ ಗಾಜುಗಳು ಒಡೆದುಹೋಗಿ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡ ಬಳಿಯ ಶಾಂತಿನಗರದಿಂದ ಹೊರಟ ಈದ್ ಮಿಲಾದ್ ಮೆರವಣಿಗೆ ಹೊರಟು ಎಂಟನೇ ಕ್ರಾಸ್ ತಲುಪಿದಾಗ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಮುಸ್ಲಿಮರು ಆರೋಪಿಸಿದ್ದಾರೆ. ಈ ವೇಲೆ ಉದ್ರಿಕ್ತರ ಒಂದು ಗುಂಪು ಸಮೀಪದ ಅನ್ಯ ಕೋಮಿನವರು ವಾಸವಿರುವ ಪ್ರದೇಶಗಳಿಗೆ ನುಗ್ಗಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಕೆಲವೊಂದು ಮನೆಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಗಲಾಟೆಗೆ ಕಾರಣವೇನು?
ಹಿಂದೂ ಸಂಘಟನಾ ಮಹಾಮಂಡಳಿ ಗಣಪತಿಯ ವಿಸರ್ಜನಾ ಪೂರ್ವ ಉತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆ ಒಂದೇ ದಿನ ಬಂದಿದ್ದರಿಂದ ಗೊಂದಲಗಳನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶಾಂತಿಸಭೆಯಲ್ಲಿ ಅಕ್ಟೋಬರ್ ಒಂದರನ್ನು ಈದ್ ಮಿಲಾದ್ ಮೆರವಣಿಗೆ ನಡೆಸಲು ಸೂಚನೆ ನೀಡಿತ್ತು. ಅದರಂತೆ, ಭಾನುವಾರ ನಗರವನ್ನು ಮೆರವಣಿಗೋಸ್ಕರ ಅಲಂಕರಿಸಲಾಗಿತ್ತು. ಈ ವೇಳೆ, ರಾಗಿಗುಡ್ಡದ ಮುಖ್ಯರಸ್ತೆಯಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿದ್ದು, ಅವರ ಕಾಲಡಿಯಲ್ಲಿ ಕೇಸರಿ ಬಣ್ನದ ಪಗಡೆ ತೊಟ್ಟ ವ್ಯಕ್ತಿ ಮಲಗಿರುವ ಚಿತ್ರ ಬಳಸಲಾಗಿತ್ತು.
ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು. ತಕ್ಷಣ ಎಸ್‌ಪಿ ನೇತೃತ್ವದಲ್ಲಿ ಆ ಭಾಗಕ್ಕೆ ಬಳಿ ಬಣ್ಣ ಬಳಿಯಲಾಗಿತ್ತು. ಕೆಲವೇ ಗಂಟೆಗಳಲ್ಲಿ ಆ ಬಿಳಿ ಬಣ್ಣದ ಮೇಲೆ 'ಟಿಪ್ಪು ಶೇರ್' ಎಂದು ಕೆಂಪು ಬಣ್ಣದಲ್ಲಿ ಬರೆಯಲಾಗಿತ್ತು. ಈ ಎಲ್ಲ ಬೆಳವಣಿಗಳ ನಡುವೆಯೇ ಕಲ್ಲುತೂರಾಟ ನಡೆದಿದೆ.












Click it and Unblock the Notifications