Shivamogga News: ಅಡಿಕೆ ತೂಕದಲ್ಲಿ ಮೋಸ: ಗಣೇಶ ವಿಸರ್ಜನೆ ವೇಳೆ ವಿದೇಶಿ ಪ್ರವಾಸಿಗರ ಡ್ಯಾನ್ಸ್- ಹೆಬ್ಬಾವು ಸೆರೆ
ಶಿವಮೊಗ್ಗ ಸೆಪ್ಟೆಂಬರ್ 13: ರೈತರಿಂದ ಅಡಿಕೆ ಖರೀದಿಸುವಾಗ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಯೊಬ್ಬನಿಗೆ ಗ್ರಾಮಸ್ಥರು ದಂಡ ಹಾಕಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರೈತರಿಂದ ಅಡಿಕೆ ಖರೀದಿಸುವಾಗ ತೂಕದಲ್ಲಿ ವ್ಯಾಪಾರಿಯೊಬ್ಬ ಮೋಸ ಮಾಡಿದ್ದಾನೆ. ಮೋಸ ಮಾಡಿದ ವ್ಯಾಪಾರಿಗೆ ಗ್ರಾಮಸ್ಥರು 20 ಲಕ್ಷ ರೂ. ದಂಡ ಹಾಕಿ ಪಾಠ ಕಲಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ವ್ಯಾಪಾರಿಯೊಬ್ಬ ಪ್ರತಿ ಕ್ವಿಂಟಾಲ್‌ಗೆ 3 ಕೆ.ಜಿ ಅಡಿಕೆ ಮೋಸ ಮಾಡಲಾಗಿದೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ತಟ್ಟೆಹಳ್ಳಿಯವನಾಗಿ ವರ್ತಕ ದಿಲೀಪ್ ಎಂಬಾತನಿಂದ ಮೋಸ ಆಗಿರುವ ಆರೋಪ ಕೇಳಿ ಬಂದಿದೆ.

ಈತ ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಮೋಸ ಮಾಡಿದ್ದಾನೆ. ಈತನಿಂದ ದಂಡ ವಸೂಲಿ ಮಾಡಿದ ಗ್ರಾಮಸ್ಥರು ಗ್ರಾಮದ ದೇವಾಲಯಕ್ಕೆ ಕೊಟ್ಟಿದ್ದಾರೆ.
ಶಿವಮೊಗ್ಗ: ಗಣೇಶ ವಿಸರ್ಜನೆ ವೇಳೆ ವಿದೇಶಿ ಪ್ರವಾಸಿಗರ ಡ್ಯಾನ್ಸ್
ವಿದೇಶಿ ಪ್ರವಾಸಿಗರು ಗಣೇಶ ವಿಸರ್ಜನೆ ವೇಳೆ ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಹೋಬಳಿಯ ಗಿಣಿವಾರ ಗ್ರಾಮದಲ್ಲಿ ಗಣೇಶ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ.

ಸಾಗರ ಪ್ರವಾಸಕ್ಕೆ ವಿದೇಶಿ ಪ್ರಜೆಗಳು ಆಗಮಿಸಿದ್ದರು. ಈ ವೇಳೆ ವಿಸರ್ಜನೆ ಮೆರವಣಿಗೆ ವೇಳೆ ಸ್ಥಳೀಯರ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಗಿಣಿವಾರ ಗ್ರಾಮದಿಂದ ಸಾಗರ ಸಿಗಂದೂರು ರಸ್ತೆಗೆ ಬರುತ್ತಿದ್ದಂತೆ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರು ಭಾಗವಹಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಶಿವಮೊಗ್ಗ: ಗ್ರಾಮಕ್ಕೆ ಆಗಮಿಸಿದ ಹೆಬ್ಬಾವು ಸೆರೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಹತೊಳಲು ಕೈಮರದಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ಗುರುವಾರ ಕೈಮರದ ಪೆಟ್ರೋಲ್ ಬಂಕ್ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಹೆಬ್ಬಾವು ಸೆರೆ ಹಿಡಿದ ಹೊಳೆಹೊನ್ನೂರು ಸಿಪಿಐ ಲಕ್ಷ್ಮಪತಿ ಹಾಗೂ ಸ್ಥಳೀಯರು ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವು ಕಂಡು ಗಾಬರಿಯಾಗಿದ್ದ ಸ್ಥಳೀಯರು ಅದನ್ನು ಸೆರೆ ಹಿಡಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಮುಸ್ಲಿಂ ಬಾಂಧವರಿಂದ ಗಣೇಶ ಮೂರ್ತಿಗೆ ಮಾಲಾರ್ಪಣೆ
ಶಿವಮೊಗ್ಗ ನಗರದ ಇಮಾಮ್ ಬಡ ಏರಿಯಾದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮುಸ್ಲಿಂ ಬಾಂಧವರಿಂದ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಲಾಗಿದೆ. ಸ್ನೇಹ ಜ್ಯೋತಿ ಗೆಳೆಯರ ಬಳಗದವರು ಪ್ರತಿಷ್ಟಾಪನೆ ಮಾಡಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ಮಸೀದಿ ಹತ್ತಿರ ಬರುತ್ತಿದ್ದಂತೆ ಮಸೀದಿ ಅಧ್ಯಕ್ಷ ಮುನೀರ್ ಅಹಮ್ಮದ್ ಮಾಲಾರ್ಪಣೆ ಮಾಡಿದ್ದಾರೆ. ಹೀಗೆ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ ಮುಸ್ಲಿಂ ಬಾಂಧವರು ಕೋಮು ಸೌಹಾರ್ದತೆ ಮರೆದಿದ್ದಾರೆ.












Click it and Unblock the Notifications