ಶಿವಮೊಗ್ಗ; ತುಂಗಾ ನದಿಗೆ ಮತ್ತೊಂದು ಸೇತುವೆ, 20 ಕೋಟಿ ವೆಚ್ಚ

ಶಿವಮೊಗ್ಗ, ಫೆಬ್ರವರಿ 09; ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಶಿವಮೊಗ್ಗದಲ್ಲಿ ತುಂಗಾ ನದಿಗೆ ಅಡ್ಡಲಾಗಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ.

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. ಈಗಾಗಲೇ ಇಲ್ಲಿ ಒಂದು ಸೇತುವೆ ಇದೆ. ಆದರೆ, ವಾಹನ ದಟ್ಟಣೆ, ಭವಿಷ್ಯದ ದೃಷ್ಟಿಯಿಂದ ಮತ್ತೊಂದು ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

"ತುಂಗಾ ನದಿಗೆ ಮತ್ತೊಂದು ಸೇತುವೆ ನಿರ್ಮಾಣಕ್ಕೆ 20 ಕೋಟಿ ರೂ. ಬಿಡುಗಡೆ ಮಾಡಲು ಕ್ಲಿಯರೆನ್ಸ್ ಸಿಕ್ಕಿದೆ. ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತದೆ. ಭವಿಷ್ಯದ ಸಂಚಾರ ದಟ್ಟಣೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಸೇತುವೆ ನಿರ್ಮಾಣವಾಗಲಿದೆ" ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

Shivamogga Another Bridge For Tunga River In City

"ಬೈಪಾಸ್ ರಸ್ತೆಯಲ್ಲಿ ಈಗ ಇರುವ ಸೇತುವೆಯ ಯಾವ ಭಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅಂತಿಮ ಹಂತದ ರೂಪುರೇಷ ಸಿದ್ಧವಾದ ಬಳಿಕ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ತುಂಗಾ ನದಿಗೆ ಶಿವಮೊಗ್ಗದಲ್ಲಿ ಈಗ ಮೂರು ಸೇತುವೆಗಳಿವೆ. ನಗರದೊಳಗೆ ಒಂದು ಹಳೇ ಸೇತುವೆ, ಮತ್ತೊಂದು ಸೇತುವೆ ಇದೆ. ನಗರದ ಹೊರಗಿನ ಬೈಪಾಸ್ ರಸ್ತೆಯಲ್ಲಿಯೂ ಒಂದು ಸೇತುವೆ ಇದೆ. ಈಗ ಇಲ್ಲಿಯೇ ಮತ್ತೊಂದು ಸೇತುವೆ ನಿರ್ಮಿಸಲು ತೀರ್ಮಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+