ಶಿವಮೊಗ್ಗದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ಅದ್ದೂರಿ ಸೆಟ್ ಸಿದ್ಧ
ಶಿವಮೊಗ್ಗ, ಆಗಸ್ಟ್.24: ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಅಪೂರ್ಣಗೊಂಡಿರುವ ಕಟ್ಟಡದಲ್ಲಿ 'ಡೈಮಂಡ್ ಕ್ರಾಸ್' ಸಿನಿಮಾದ ಕ್ಲೈಮಾಕ್ಸ್ ಸೀನ್ ಶೂಟಿಂಗ್ ಗೆ ಸೆಟ್ ಏರುತ್ತಿದೆ.
ಕಳೆದ ಎರಡುವರೆ ವರ್ಷದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಕೊನೆ ಹಂತಕ್ಕೆ ಬಂದು ತಲುಪಿದೆ. ಕ್ಲೈಮ್ಯಾಕ್ಸ್ ಸೀನಿಗಾಗಿ ಇಲ್ಲಿ ನೂತನವಾಗಿ ಕಟ್ಟಲಾಗುತ್ತಿರುವ ಪಿಡಬ್ಲ್ಯೂಡಿ ಕಚೇರಿಯಲ್ಲಿ ಸದ್ದಿಲ್ಲದೆ ಸೆಟ್ ಏರುತ್ತಿದೆ.
ಸಿನಿಮಾ ತಂಡ ಆ.24 ರಿಂದ ಸೆ.5 ರ ವರೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಶೂಟಿಂಗ್ ಗಾಗಿ ಅನುಮತಿ ಪಡೆದುಕೊಂಡಿದೆ. ಫೈಟಿಂಗ್ ಸೀನಿಗಾಗಿ ಅದ್ದೂರಿಯಾಗಿ ಸೆಟ್ ಸಿದ್ಧಗೊಳಿಸಲಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ಅವರ ಬ್ಯಾನರ್ ನಲ್ಲಿ ನಡೆಯುತ್ತಿರುವ 'ಡೈಮಂಡ್ ಕ್ರಾಸ್' ಸಿನಿಮಾ ಒಂದು ಥ್ರಿಲ್ಲರ್ ಮೂವಿಯಾಗಿದೆ. ದಾವಣಗೆರೆಯ ಅಣ್ಣಪ್ಪ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇವರಲ್ಲಿ ಒಂದು ವಿಶೇಷವಿದೆ. ಇವರು ಮಾರ್ಷಲ್ ಆರ್ಟ್ ನಲ್ಲಿ ಪ್ರವೀಣರು.
ಈ ವಿದ್ಯೆಯನ್ನು ಇವರು ಗುರು ಇಲ್ಲದೆ ಕಲಿತಿರುವುದು ವಿಶೇಷವಾಗಿದೆ. ಮಾರ್ಷಲ್ ಆರ್ಟ್ ಅನ್ನು ಇವರು ಕಲಿತ ರೀತಿಯೇ ವಿಭಿನ್ನ. ಟಿವಿಗಳಲ್ಲಿ, ಯೂಟ್ಯೂಬ್ ಗಳಲ್ಲಿ ನೋಡುತ್ತಾ ಕಲಿತ ಇವರು ಇಂದು ಆ ವಿದ್ಯೆಯನ್ನ ಕರಗತಗೊಳಿಸಿಕೊಂಡು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ.
ಥೈಲ್ಯಾಂಡ್ ನ ಟೋನಿ ಜಾ ಅವರ ಸಿನಿಮಾಗಳನ್ನು ನೋಡಿ ಪ್ರೇರೇಪಿತರಾದವರು ನಮ್ಮ ದಾವಣಗೆರೆಯ ಅಣ್ಣಪ್ಪ.

ಸಿನಿಮಾದ ನಾಯಕ ನಟಿಯಾಗಿ ರೂಪಿಕ ಅವರು ಅಭಿನಯಿಸುತ್ತಿದ್ದರೆ, ಚಿತ್ರದ ನಿರ್ದೇಶನವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಅಳಿಯ ಹಾಗು ನಾಗತಿಹಳ್ಳಿ ಚಂದ್ರಶೇಖರ್ ಅವರ ಹತ್ತಾರು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ರಾಮ್ ದೀಪ ನಿರ್ವಹಿಸುತ್ತಿದ್ದಾರೆ.












Click it and Unblock the Notifications