Get Updates
Get notified of breaking news, exclusive insights, and must-see stories!

ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ನರ್ಸ್‌ಗೆ 3 ಲಕ್ಷ ರೂ. ವಂಚನೆ

ಶಿವಮೊಗ್ಗ, ಮಾರ್ಚ್ 16: ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ಮೂರು ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಹುಮಾನಕ್ಕೆ ಮೊಬೈಲ್ ನಂಬರ್ ಆಯ್ಕೆಯಾಗಿದೆ ಎಂದು ಪತ್ರ ಕಳುಹಿಸಿ, ವಂಚಿಸಲಾಗಿದೆ.

ಶಿವಮೊಗ್ಗದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವನಿತಾ (29) ಎಂಬುವವರನ್ನು ವಂಚಿಸಲಾಗಿದ್ದು, ದೆಹಲಿಯ ನಾಪ್ಟಾಲ್ ಆನ್ಲೈನ್ ಶಾಪಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವನಿತಾ ಅವರಿಗೆ ಬಹುಮಾನ ಬಂದಿದೆ ಎಂದು ಪತ್ರ ಕಳುಹಿಸಲಾಗಿತ್ತು. 12.50 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿದ್ದೀರ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಇದನ್ನು ನಂಬಿದ ವನಿತಾ, ಪತ್ರದಲ್ಲಿ ಇದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು.

12.50 ಲಕ್ಷ ರೂ. ಬಹುಮಾನ ನೀಡಲು ಕೆಲವು ಚಾರ್ಜಸ್‌ಗಳಿವೆ, ಎನ್ಒಸಿ ಬೇಕಿದೆ ಎಂದು ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ವನಿತಾ, ಹಂತ ಹಂತವಾಗಿ ಮೂರು ಲಕ್ಷ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ, ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Shivamogga: Rs 3 Lakh Fraud To Nurse In The Name Of Naaptol Online Shopping Limited

ಎಚ್ಚರ ವಹಿಸಿ

ಬಹುಮಾನದ ಆಸೆ ಹುಟ್ಟಿಸಿ ಹಣ ಪಡೆದುಕೊಂಡು ವಂಚಿಸುವ ದೊಡ್ಡ ಜಾಲವೇ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ, ಸೈಬರ್ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ. ಅಧಿಕೃತ ಸಂಸ್ಥೆಗಳಾದರೆ, ಬಹುಮಾನ ಬಂದಿದ್ದರೆ ಮಾಹಿತಿ ನೀಡಿ, ಬಹುಮಾನವನ್ನು ವಿತರಿಸುತ್ತವೆ. ಬಹುಮಾನಕ್ಕಾಗಿ ಚಾರ್ಜ್ ಎಂದು ಹಣ ಪಡೆಯುವುದಿಲ್ಲ. ಇಂತಹ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+