• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪರೂಪದ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ: ಡೀಲರ್ ಗಳ ಬಂಧನ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಅಕ್ಟೋಬರ್ 13: ಅಪರೂಪದಲ್ಲೆ ಅಪರೂಪವಾದ ನಕ್ಷತ್ರ ಆಮೆಯನ್ನು 5 ಲಕ್ಷ ರುಪಾಯಿಗೆ ಮಾರಾಟ ಮಾಡಲು ಯತ್ನಿಸಿದ ಡೀಲರ್ ಗಳ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಅಪರೂಪದ ನಕ್ಷತ್ರ ಆಮೆ ಮಾರಲು ಐದು ಲಕ್ಷ ರುಪಾಯಿ ಡೀಲ್ ಕುದುರಿಸಿಕೊಂಡು ಬಂದ ಚಿತ್ರದುರ್ಗದ ಖತರ್ನಾಕ್ ಮಹಿಳೆ ತನ್ನ ಸಹಚರರೊಂದಿಗೆ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದಿದ್ದಾಳೆ.

ಮೈಸೂರಿನಲ್ಲಿ ಅಪರೂಪದ ಶ್ವೇತ ವರ್ಣದ ಗೂಬೆ ಪತ್ತೆ: ಇದು ಮನೆಯಲ್ಲಿದ್ದರೆ ಅದೃಷ್ಟವಂತೆ!

ಒಟ್ಟು ನಾಲ್ವರು ಆರೋಪಿಗಳನ್ನು ಶಿವಮೊಗ್ಗ ವನ್ಯಜೀವಿ ವಿಭಾಗ, ಶಂಕರಘಟ್ಟ ಅರಣ್ಯ ವಲಯ, ಶಿವಮೊಗ್ಗ ಫಾರೆಸ್ಟ್ ಮೊಬೈಲ್ ಸ್ಕ್ವಾಡ್ ಜಂಟಿ ಕಾರ್ಯಾಚರಣೆಯಲ್ಲಿ ಪುರದಾಳು-ಗಾಡಿಕೊಪ್ಪ ಮಾರ್ಗದಲ್ಲಿ ಬಂಧಿಸಿದ್ದಾರೆ.

ಆರೋಪಿಗಳು ಆಂಧ್ರಪ್ರದೇಶ ರಾಜ್ಯದ ಅನಂತಪುರಂನ ಯರ್ರಿಸ್ವಾಮಿ, ಶಬ್ಬೀರ ಬಾಷಾ, ರಾಯಚೂರಿನ ಮುರಳೀಧರ್ ಹಾಗೂ ಚಿತ್ರದುರ್ಗದ ಮಧ್ಯವರ್ತಿ ಪದ್ಮಾವತಿ ಎಂದು ಗುರುತಿಸಲಾಗಿದೆ.

ಆಮೆಯನ್ನು ಅನಂತಪುರಂನಿಂದ ತಂದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದು, ಶಿವಮೊಗ್ಗದಲ್ಲಿ ಯಾರು ಖರೀದಿಸಲು ಮುಂದಾಗಿದ್ದರು ಎಂಬುದು ತನಿಖೆಯಿಂದ ತಿಳಿಯಲಿದೆ.

ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರದೀಪ್ ಹಾಲಭಾವಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಾಗರ ಅರಣ್ಯ ಸಂಚಾರಿದಳದ ಪಿಎಸ್ಐ ಮಲ್ಲಿಕಾರ್ಜುನ, DRFO ಅಂಥೋನಿ ರೇಗೊ, ಕೃಪಸಾಗರ್, ಅರಣ್ಯ ಸಂರಕ್ಷಕರಾದ ಸಲೀಮ್, ರಮೇಶ್,ರಂಜಿತಾ, ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗಳಾದ ರಂಗನಾಥ್, ಗಣೇಶ್, ರತ್ನಾಕರ್ ವಿಶ್ವನಾಥ್, ಪುಷ್ಪಾ ಫಿಲೋಮಿನಾ ಸಿಕ್ವೇರಾ ಇದ್ದರು.

English summary
Police have arrested dealers who tried to sell a rare star turtle for Rs 5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X