ಶಿವಮೊಗ್ಗದಲ್ಲಿ ಮೋದಿ ಮೇಲೆ ರಾಹುಲ್ ವಾಕ್ ಪ್ರಹಾರ

Recommended Video

      ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಭಾಷಣ ಮೋದಿ ಮೇಲೆ ವಾಕ್ ಪ್ರಹಾರ ಜೋರು | Oneindia Kannada

      ಶಿವಮೊಗ್ಗ, ಏಪ್ರಿಲ್ 03 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಿವಮೊಗ್ಗ ನಗರದಲ್ಲಿ ಮಂಗಳವಾರ ರೋಡ್ ಶೋ ನಡೆಸಿದರು. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಅವರು ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ.

      ಶಿವಮೊಗ್ಗ ಬಸ್ ನಿಲ್ದಾಣದಿಂದ ಗೋಪಿ ಸರ್ಕಲ್ ತನಕ ರಾಹುಲ್ ಗಾಂಧಿ ರೋಡ್ ಶೋ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಂತಾದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      Rahul Gandhi address Janashirvada Yatre rally

      ರೋಡ್ ಶೋ ಬಳಿಕ ಗೋಪಿ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

      ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

      ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

      * ನಾಲ್ಕು ವರ್ಷದ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ, ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂ. ಹಣ ಹಾಕುವ ಭರವಸೆ ನೀಡಿದ್ದರು.

      * ಭಾರತ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಹೇಳಿದ್ದರು. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಿದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆಗ ಅವರು ವೇದಿಕೆಯಲ್ಲಿ ಅಕ್ಕಪಕ್ಕ ಯಾರಿದ್ದಾರೆ? ಎಂದು ನೋಡುವುದಿಲ್ಲ.

      * ನರೇಂದ್ರ ಮೋದಿ ಅವರ ವೇದಿಯಲ್ಲಿ ಯಡಿಯೂರಪ್ಪ ಇರುತ್ತಾರೆ. ಜೈಲಿಗೆ ಹೋಗಿ ಬಂದ ಸಚಿವರು ಇರುತ್ತಾರೆ. ಭ್ರಷ್ಟಾಚಾರದ ವಿಚಾರ ಮಾತಾಡುವಾಗ ಅಕ್ಕ-ಪಕ್ಕದಲ್ಲಿ ಯಾರಿದ್ದಾರೆ? ಎಂದು ಒಮ್ಮೆ ನೋಡಿ, ಇಲ್ಲವೇ ಅವರನ್ನು ವೇದಿಕೆಯಿಂದ ಕೆಳಗಿಳಿಸಿ.

      * ಕೇಂದ್ರ ಸರ್ಕಾರದ ಒದೊಂದೇ ಹಗರಣಗಳು ಈಗ ಹೊರಬರುತ್ತಿವೆ. ನರೇಂದ್ರ ಮೋದಿ ಅವರ ಆಪ್ತ, ಅಮಿತ್ ಶಾ ಅವರ ಪುತ್ರ ಜೈ ಶಾ ಮೂರು ತಿಂಗಳಿನಲ್ಲಿ 50 ಸಾವಿರ ರೂ. ಹೂಡಿಕೆ ಮಾಡಿ. 80 ಕೋಟಿ ಲಾಭ ಪಡೆದುಕೊಂಡಿದ್ದಾರೆ.

      * ನರೇಂದ್ರ ಮೋದಿ ಅವರು ಈ ಬಗ್ಗೆ ಯಾವುದೇ ಮಾತು ಹೇಳುವುದಿಲ್ಲ. ರಫೆಲ್ ಯುದ್ಧ ವಿಮಾನದ ಒಪ್ಪಂದವನ್ನು ಸ್ವತಃ ನರೇಂದ್ರ ಮೋದಿ ಅವರು ಮುರಿದರು. ಕರ್ನಾಟಕ ಎಚ್‌ಎಎಲ್‌ನಿಂದ ಒಪ್ಪಂದವನ್ನು ಕಸಿದುಕೊಂಡು ಸ್ನೇಹಿತರಿಗೆ ನೀಡಿದರು.

      * ನೀರವ್ ಮೋದಿ ಅವರು ದೇಶದ ಜನರ 30 ಸಾವಿರ ಕೋಟಿ ಹಣ ತೆಗೆದುಕೊಂಡು ಪರಾರಿಯಾದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪುತ್ರಿ ನೀರವ್ ಮೋದಿ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಮೋದಿ ಈ ವಿಚಾರದಲ್ಲಿ ಮೌನವಾಗಿದ್ದಾರೆ.

      * ಲಕ್ಷಾಂತರ ಕೋಟಿ ಹಣವನ್ನು ಉದ್ಯಮಿಗಳಿಗೆ ನರೇಂದ್ರ ಮೋದಿ ನೀಡಿದ್ದಾರೆ. ಆದರೆ, ರೈತರ ಸಾಲವನ್ನು ಮನ್ನಾ ಮಾಡಿ ಎಂದು ದೇಶದ ರೈತರು ಮನವಿ ಮಾಡಿದರೆ ಮೋದಿ ಅವರು ಕೇಳಿಸಿಕೊಳ್ಳುವುದಿಲ್ಲ.

      * ನರೇಂದ್ರ ಮೋದಿ ಅವರು ಈ ಬಗ್ಗೆ ಯಾವುದೇ ಮಾತು ಹೇಳುವುದಿಲ್ಲ. ರಫೆಲ್ ಯುದ್ಧ ವಿಮಾನದ ಒಪ್ಪಂದವನ್ನು ಸ್ವತಃ ನರೇಂದ್ರ ಮೋದಿ ಅವರು ಮುರಿದರು. ಕರ್ನಾಟಕ ಎಚ್‌ಎಎಲ್‌ನಿಂದ ಒಪ್ಪಂದವನ್ನು ಕಸಿದುಕೊಂಡು ಸ್ನೇಹಿತರಿಗೆ ನೀಡಿದರು.

      * ಸಿದ್ದರಾಮಯ್ಯ ಅವರ ಬಳಿ ನಾನು ರೈತರ ಸಾಲ ಮನ್ನಾ ಮಾಡಲು ಸಾಧ್ಯವೇ? ಎಂದು ಕೇಳಿದೆ. ಕೇವಲ 10 ದಿನದಲ್ಲಿ ಸಿದ್ದರಾಮಯ್ಯ ಅವರು 8000 ಕೋಟಿ ಸಾಲವನ್ನು ಮನ್ನಾ ಮಾಡಿದರು.

      * ನರೇಂದ್ರ ಮೋದಿ ಅವರು ದೇಶದ 2 ಕೋಟಿ ಜನರಿಗೆ ಉದ್ಯೋವನ್ನು ನೀಡುವ ಭರವಸೆ ಕೊಟ್ಟಿದ್ದರು. ಸರ್ಕಾರ 4 ವರ್ಷಗಳನ್ನು ಪೂರೈಸಿದೆ, ಎಷ್ಟು ಜನರಿಗೆ ಉದ್ಯೋಗವನ್ನು ನೀಡಲಾಗಿದೆ ಎಂದು ಮೋದಿ ಅವರು ದೇಶದ ಜನರಿಗೆ ಉತ್ತರ ನೀಡಲಿ.

      *ಪರೀಕ್ಷಾ ಸಮಯದಲ್ಲಿ ಹೇಗೆ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಮಕ್ಕಳು ಪರೀಕ್ಷೆಗೆ ಹೋದರೆ ಪೇಪರ್ ಲೀಕ್ ಆಗಿದೆ ಎಂದು ಮೋದಿ ಸರ್ಕಾರ ಹೇಳಿತು. ಸರ್ಕಾರ ಪೇಪರ್ ಲೀಕ್ ತಡೆಯಲು ವಿಫಲವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆಗೆ ಸಿದ್ಧವಾಗಬೇಕಾದ ಅನಿವಾರ್ಯತೆ ಎದುರಾಗಿದೆ.

      * ಒಂದು ಕಡೆ ಪ್ರಶ್ನೆ ಪರೀಕ್ಷೆ ಮತ್ತೊಂದು ಕಡೆ ಚುನಾವಣಾ ದಿನಾಂಕಗಳು ಲೀಕ್ ಆಗುತ್ತವೆ. ನರೇಂದ್ರ ಮೋದಿ ಅವರಿಂದ ನಾವು ಭಾಷಣ ಮಾಡುವುದನ್ನು ಮಾತ್ರ ಕಲಿಯಬೇಕು. ಸುಳ್ಳು ಭಾಷಣವನ್ನು ಅವರು ಮಾಡುತ್ತಾರೆ.

      * ನೋಟುಗಳ ನಿಷೇಧದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವಿಜಯ್ ಮಲ್ಯ, ನೀರವ್ ಮೋದಿ ಬ್ಯಾಂಕ್‌ಗೆ ವಂಚನೆ ಮಾಡಿ, ಜನರ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+