ದುಬೈನಿಂದ ಶಿವಮೊಗ್ಗಕ್ಕೆ ಬರಲಿವೆ ಪೊಲೀಸರ ಬಳಿ ಮೊಬೈಲ್!

ಶಿವಮೊಗ್ಗ, ಡಿಸೆಂಬರ್ 10 : ಪೊಲೀಸರಿಂದ ಕದ್ದ ಮೊಬೈಲ್‌ಗಳು ಈಗ ದುಬೈನಲ್ಲಿವೆ. ಮಾಲೀಕರನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗಿದ್ದು, ಕೋರಿಯರ್ ಮೂಲಕ ಅವರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರ ಕೈ ಸೇರಲಿವೆ.

ಅಚ್ಚರಿಯಾದರೂ ಇದು ಸತ್ಯ. ಕದ್ದ ಮೊಬೈಲ್ ವಾಪಸ್ ಸಿಗುವ ಉದಾಹರಣೆಗಳು ಬಹಳ ವಿರಳ. ಆದರೆ, ಇಲ್ಲಿ ಕಳುವಾಗಿದ್ದ 23 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಈ ಪೋನ್‌ಗಳು ಪೊಲೀಸರಿಗೆ ಸೇರಿದ್ದು ಎಂಬುದು ವಿಶೇಷ.

ಪೊಲೀಸರು ಉಳಿದುಕೊಂಡಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿ 23 ಮೊಬೈಲ್ ಕದ್ದಿದ್ದ ತಮಿಳುನಾಡು ಮೂಲದ ಕಾರ್ತಿಕ್‌ನನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದರು. ಆರೋಪಿಯಿಂದ 13 ಮೊಬೈಲ್ ವಶಕ್ಕೆ ಪಡೆಯಲಾಗಿತ್ತು.

Police To Receive Stolen Mobile From Dubai

ಉಳಿದ ಮೊಬೈಲ್‌ಗಳು ದುಬೈ ಸೇರಿವೆ, ಅಲ್ಲಿನ ಮಾಲೀಕರನ್ನು ಪತ್ತೆ ಹಚ್ಚಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಮೊಬೈಲ್‌ಗಳು ಕೋರಿಯರ್ ಮೂಲಕ ದೊಡ್ಡಪೇಟೆ ಠಾಣೆ ಪೊಲೀಸರ ಕೈ ಸೇರಲಿವೆ. ಬಳಿಕ ಅವುಗಳನ್ನು ಸಂಬಂಧಪಟ್ಟ ಪೊಲೀಸರಿಗೆ ನೀಡಲಾಗುತ್ತದೆ.

ಏನಿದು ಘಟನೆ? : 2018ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಿತು. ಈ ಸಂದರ್ಭದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ಕರೆಸಲಾಗಿತ್ತು. ನಗರದ ಭಾರತೀಯ ಸಮುದಾಯ ಭವನದಲ್ಲಿ ಪೊಲೀಸರು ವಾಸ್ತವ್ಯ ಹೂಡಿದ್ದರು.

ಸಮುದಾಯ ಭವನಕ್ಕೆ ನುಗ್ಗಿದ್ದ ಆರೋಪಿ ಕಾರ್ತಿಕ್ 23 ಪೊಲೀಸರ ಮೊಬೈಲ್ ದೋಚಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನವೆಂಬರ್ 9ರಂದು ಕಾರ್ತಿಕ್ ಬಂಧಿಸಿ 13 ಮೊಬೈಲ್ ವಶಕ್ಕೆ ಪಡೆದಿದ್ದರು.

ಉಳಿದ ಫೋನ್‌ಗಳು ದುಬೈನಲ್ಲಿದ್ದು ಅಲ್ಲಿಂದ ಶಿವಮೊಗ್ಗಕ್ಕೆ ಬರಲಿವೆ. ಐಷಾರಾಮಿ ಜೀವನ ಸಾಗಿಸಲು ಕಾರ್ತಿಕ್ ಮೊಬೈಲ್ ಕದ್ದು ಮಾರುತ್ತಿದ್ದ. ಪೊಲೀಸರ ಮೊಬೈಲ್ ಕದ್ದು, ಈಗ ಜೈಲು ಸೇರಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+