ಶಿವಮೊಗ್ಗದಲ್ಲಿ ರೌಡಿಶೀಟರ್ ಗಿರಿ ಕೊಲೆ ಪ್ರಕರಣ; 6 ಆರೋಪಿಗಳ ಬಂಧನ
ಶಿವಮೊಗ್ಗ, ಫೆಬ್ರವರಿ 07: ನಿನ್ನೆ ರೌಡಿ ಶೀಟರ್ ಹಂದಿ ಅಣ್ಣಿ ತಮ್ಮ ಗಿರಿ ಕೊಲೆಗೆ ಸಂಬಂಧಿಸಿದಂತೆ ತುಂಗಾ ನಗರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ ಸಂಜೆ ನಡೆದ ಗಿರಿ ಕೊಲೆಯಲ್ಲಿ ಹಜ್ರು, ಶೋಯೆಬ್ ಹಾಗೂ ಸಲ್ಮಾನ್ ಎಂಬುವರು ಸೇರಿದಂತೆ 10 ಜನರು ಭಾಗಿಯಾಗಿದ್ದರು. ಇದರಲ್ಲಿ 6 ಜನರನ್ನ ಬಂಧಿಸಲಾಗಿದೆ ಎಂದು ಎಸ್ಪಿ.ಕೆ.ಎಂ.ಶಾಂತರಾಜು ಮಾಹಿತಿ ನೀಡಿದರು. ತೂರುಬಿಲ್ಲೆ ವಿಚಾರದಲ್ಲಿ ಗಿರಿ ಮತ್ತು ಅಜ್ರು ತಂಡದ ನಡುವೆ ವಾಗ್ವಾದವಾಗಿದ್ದು, ಗಿರಿ ಕೊಲೆಯಲ್ಲಿ ಅಂತ್ಯವಾಗಿತ್ತು. ಗಿರಿ ಶಿವಮೊಗ್ಗ ಗೋಪಾಳದ ಸಿದ್ದೇಶ್ವರ ಸರ್ಕಲ್ ಬಳಿ ನಿಂತಿದ್ದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಮನಸೋಇಚ್ಛೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು.

ತುಂಗಾ ನಗರ ಠಾಣೆ ಪೊಲೀಸರು ಆರು ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications