ಗೆಲುವು ಬಿಜೆಪಿಗೇ ಎಂದು ಸಾಕ್ಷಿ ಕೊಟ್ಟ ಯಡಿಯೂರಪ್ಪ!

Recommended Video

      ಬಿಜೆಪಿಗೆ ಈ ಬಾರಿ ಗೆಲುವು ನಿಶ್ಚಿತ ಎಂದ ಬಿ ಎಸ್ ಯಡಿಯೂರಪ್ಪ | Lok Sabha Elections 2019 | Oneindia Kananda

      ಶಿವಮೊಗ್ಗ, ಏಪ್ರಿಲ್ 20: "ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಅಪವಿತ್ರ ಮೈತ್ರಿ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಅವರಿಗೆ ಬಿಜೆಪಿಯನ್ನು ಅಧಿಕಾರದಲ್ಲಿ ನೋಡುವಾಸೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಸಮಾವೇಶದಲ್ಲಿ ನೆರೆದಿದ್ದ ಜನಸ್ತೋಮದ ಚಿತ್ರವೇ ಅದಕ್ಕೆ ಸಾಕ್ಷಿ ಎಂದು ಆ ಚಿತ್ರಗಳನ್ನು ಯಡಿಯೂರಪ್ಪ ಟ್ವೀಟಿಸಿದ್ದಾರೆ.

      ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಶಿವಮೊಗ್ಗದಲ್ಲಿ ಶನಿವಾರ ಅಮಿತ್ ಶಾ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಕೇವಲ ಮೂರೇ ಮೂರು ನಿಮಿಷ ಮಾತನಾಡಿದ ಅಮಿತ್ ಶಾ, 'ಉರಿ ಬಿಸಿಲಿನಲ್ಲಿ ನೀವು ಬಂದಿರುವುದು ಸಂತಸ ತಂದಿದೆ, ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ, ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿಯವರನ್ನು ಗೆಲ್ಲಿಸಲೇಬೇಕಿದೆ' ಎಂದರು.

      People of Karnataka decided to root out JDS-Congress alliance: BSY

      ಈ ಸಮಾವೇಶವನ್ನು ಯಶಸ್ವಿ ಎಂದು ಕರೆದ ಯಡಿಯೂರಪ್ಪ, "ಕಾಂಗ್ರೆಸ್ -ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಬುಡಸಮೇತ ಕಿತ್ತೆಸೆಯಲು ಜನ ಮನಸ್ಸು ಮಾಡಿದ್ದಾರೆ ಎಂಬುದಕ್ಕೆ ಜನರು ಈ ಪರಿ ನೆರೆದಿರುವುದೇ ಸಾಕ್ಷಿ ಎಂದಿದ್ದಾರೆ."

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+