ರಾಮಚಂದ್ರಾಪುರ ಮಠದ ಕೃಷ್ಣಾರ್ಪಣಕ್ಕೆ ಬಂದ ಮೋದಿ ಪತ್ನಿ

ಶಿವಮೊಗ್ಗ, ಮಾರ್ಚ್ 04: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಾಪುರ ಮಠಕ್ಕೆ ಪ್ರಧಾನಿ ನರೇಂದ್ರ‌ಮೋದಿ ಪತ್ನಿ ಜಶೋದಾ ಬೆನ್ ಇಂದು ಭೇಟಿ ನೀಡಿದರು.

ರಾಮಚಂದ್ರಾಪುರ ಮಠದ ಆವರಣದಲ್ಲಿ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಕೃಷ್ಣಾರ್ಪಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಅವರು ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದರು.

ಮಠಕ್ಕೆ ಆಗಮಿಸಿದ ಜಶೋದಾ ಬೆನ್ ಮೋದಿ ನೇರವಾಗಿ ಗೋವರ್ಧನಗಿರಿಗೆ ತೆರಳಿ ಗೋಪಾಲಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದರು. ಬಳಿಕ ಕೃಷ್ಣಾರ್ಪಣ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ಮಾತನಾಡಿದರು.

Modi Wife Jashoda Ben Came Ramachandrapura Math For Krishnarpana

"ಶ್ರೀರಾಘವೇಶ್ವರ ಸ್ವಾಮೀಜಿಯಲ್ಲಿ ನಾನು ಆದಿ ಶಂಕರಾಚಾರ್ಯರನ್ನು ಕಂಡೆ" ಎನ್ನುತ್ತಾ ಶಂಕರಾಚಾರ್ಯರ ಕಾಲಿಗೆ ಮೊಸಳೆ ಕಚ್ಚಿದ ಕಥೆಯನ್ನು ನೆನಪಿಸಿಕೊಂಡರು ಅವರು. ಸಾಧು ಸಂತರ ಬಗ್ಗೆ ಅಪಾರ ಗೌರವವಿರುವುದರಿಂದ ದೇಶದ ಉದ್ದಲಕ್ಕೆ ತೆರಳಿ ಸಾಧುಸಂತರ ಭೇಟಿ ಮಾಡುತ್ತಿದ್ದೇನೆ" ಎಂದು ಹೇಳಿದರು.

ಇದೇ ಸಂದರ್ಭ, ಭೇಟಿ ಪಡಾವೋ ಭೇಟಿ ಬಚಾವೋ ಬಗ್ಗೆ ಕರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+