ಶಿವಮೊಗ್ಗದಲ್ಲಿ ಬಸ್, ಆಟೋಗಳಿಗೆ ದುಷ್ಕರ್ಮಿಗಳಿಂದ ಬೆಂಕಿ
ಶಿವಮೊಗ್ಗ, ಡಿಸೆಂಬರ್. 12 : ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಸೋಮವಾರ ತಡರಾತ್ರಿ ಶಿವಮೊಗ್ಗದ ಎಂಆರ್‌ಎಎಸ್ ಸರ್ಕಲ್ ಬಳಿಯ ಜ್ಯೋತಿನಗರದ 2 ತಿರುವಿನಲ್ಲಿ ಪ್ರಕಾಶ್ ಎಂಬುವರಿಗೆ ಸೇರಿದ ಬಸ್ಸು ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಬಸ್ ಬಾನೆಟ್‌ಗೆ ಹಾನಿಯಾಗಿದೆ. ಬಸ್ಸಿನ ಟಯರ್‌ಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು ಅದು ಫಲ ನೀಡಿಲ್ಲ. ಬಸ್ ಮಾಲೀಕರಿಗೆ ಸೇರಿದ ಸ್ವಿಫ್ಟ್ ಕಾರು ಹಾಗೂ ಅದೇ ಹಾದಿಯ ತಿರುವಿನ ಓಣಿಯಲ್ಲಿ ನಿಲ್ಲಿಸಿದ್ದ ಆಟೋಗಳಿಗೂ ಬೆಂಕಿ ಹಚ್ಚಲಾಗಿದೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಟೋಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಈ ಹಿಂದೆ ಈ ಭಾಗದಲ್ಲಿ ಇಂತಹ ಕೃತ್ಯ ಗಳು ನಡೆದಿಲ್ಲ. ಮಾಲೀಕರಿಗೆ ಬೇರೆಯವರ ಮೇಲೆ ಅನುಮಾನ ಕೂಡ ಇಲ್ಲ. ಬೆಂಕಿ ಇಟ್ಟ ಕಿಡಿಗೇಡಿಗಳು ಯಾರು? ಎಂದು ತುಂಗಾ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications