ಮಂಡ್ಯ ಗಲಭೆ: 'ರಾಜ್ಯ ಸರ್ಕಾರ ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುತ್ತಿದೆ'
ಶಿವಮೊಗ್ಗ ಸೆಪ್ಟೆಂಬರ್ 12: ಮಂಡ್ಯ ನಾಗಮಂಗಲ ಗಲಾಟೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ವಿರುದ್ಧ ವಿಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಮಂಡ್ಯ ಗಲಭೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ದೂರಲಾಗುತ್ತಿದೆ. ಈ ಬಗ್ಗೆ ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಶಾಸಕ ಚನ್ನಬಸಪ್ಪ, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇಡೀ ಹಿಂದೂ ಸಮಾಜವನ್ನ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ. ಹಿಂದೂ ಸಮಾಜದ ಮೇಲೆ ಸರ್ಕಾರವೇ ಗದಪ್ರಹಾರ ಮಾಡ್ತಿದೆ. ಸರ್ಕಾರ ನಡೆದುಕೊಳ್ಳುವ ರೀತಿ ಸರಿ ಇಲ್ಲ ಎಂದು ಕಿಡಿ ಕಾರಿದರು.

ಹಿಂದೂ ಸಮಾಜದ ಮೇಲೆ ಸರ್ಕಾರನೇ ಈ ರೀತಿ ಗದಪ್ರಹಾರ ಮಾಡ್ತಿದೆ. ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುವ ಕೆಲಸ ಸರ್ಕಾರ ಮಾಡ್ತಿದೆ. ನಾಗಮಂಗಲ ಗಲಾಟೆ ನೋಡಿದ್ರೆ ಭಯ ಆಗುತ್ತದೆ. ಆದರೆ ಹಿಂದೂಗಳು ಭಯಪಡುವುದಿಲ್ಲ. ನಾಗಮಂಗಲ ಮಸೀದಿಯಿಂದ ತಲವಾರ ಬರುತ್ತದೆ. ಈ ರೀತಿಯ ಭಯ ವಾತಾವರಣ ಸೃಷ್ಟಿ ಮಾಡಿ, ಹಿಂದೂ ಸಮಾಜವನ್ನ ಕಗ್ಗೊಲೆ ಮಾಡಬಿಡ್ತಿವಿ ಅಂತಾ ಎದುರಿಸುತ್ತಿದ್ರೆ. ಇಲ್ಲಿ ಯಾರು ಎದುರುವುದಿಲ್ಲ.
ಆ ಕಾರ್ಯ ಮಾಡಬಾರದು ಅನ್ನೊ ತರಾ ಯೋಚನೆ ಮಾಡೋದು ನಮ್ಮ ಹಿಂದೂ ಸಮಾಜ. ಹಿಂದೂ ದೇವತೆಗಳ ಕೈಯಲ್ಲಿ ಇರೋದು ಆಯುಧಗಳು. ಅದು ದುಷ್ಟರ ಸಂಹಾರಕ್ಕೆ ಆಯುಧಗಳು ಇರೋದು. ಸಂಯಮ ಅರ್ಥ ಮಾಡ್ಕೋಬೇಕು. ಮತ್ತೊಮ್ಮೆ ಈ ರೀತಿ ಘಟನೆ ಮರುಕಳಿಸಿದ್ರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸಾಧ್ಯ ಇಲ್ಲದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗುತ್ತದೆ.

ಇದು ಅಕ್ಷಮ್ಯ ಅಪರಾಧ. ಈ ರೀತಿ ಕೃತ್ಯವನ್ನ ಗಂಭೀರ ತೆಗೆದುಕೊಳ್ಳಬೇಕು. ಹಿಂದೂ ಸಮಾಜವನ್ನ ಸರ್ಕಾರ ಕ್ಷಮೆ ಕೇಳಬೇಕು. ರಕ್ಷಣೆ ಇಲಾಖೆ ಕೈ ಕಟ್ಟಿ ಕೂರೂದು ಸರಿಯಲ್ಲ. ಪರಮೇಶ್ವರ್ ಅವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ಆಗ್ರಹಿಸಿದರು.
ಹಾಸನದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿಕೆ
ಹಾಸನದಲ್ಲಿ ಡಿಸಿ ಕಛೇರಿ ಆವರಣದಲ್ಲಿ ಸಂಸದರ ಕಛೇರಿ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದ ಸಹಕಾರ ಸಚಿವ ಕೆಎನ್ ರಾಜಣ್ಣ, ಹಾಸನದಲ್ಲಿ ಇಂದು ಗಣಪತಿ ವಿಸರ್ಜನೆ ಇದೆ. ನಿನ್ನೆ ನಾಗಮಂಗಲದಲ್ಲಿ ಅಹಿತಕತ ಘಟನೆ ನಡೆದಿದೆ. ಹಾಗಾಗಿ ಇಂದು ಅದಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಾಸನ ಎಂದರೆ ಶಾಂತಿಗೆ ಹೆಸರಾದ ಜಿಲ್ಲೆ. ಸುಸಂಸ್ಕೃತರು ವಿದ್ಯಾವಂತರು ಇರೊ ಜಿಲ್ಲೆ ಹಾಸನ. ಹಾಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇನೆ ಎಂದರು.
ಸೆಪ್ಟೆಂಬರ್ 15ರಂದು 114 ಕಿಲೋಮೀಟರ್ ಮಾನವ ಸರಪಳಿ ಆಯೋಜನೆ ಮಾಡಲು ಕ್ರಮ ವಹಿಸಲಾಗಿದೆ. ದೇವಾಲಯ ಐತಿಹಾಸಿಕ ತಾಣಗಳಲ್ಲಿ ಕೂಡ ಮಾನವ ಸರಪಳಿ ಮಾಡಿ ಸಂವಿದಾನದ ಪೀಠಿಗೆ ಓದೋ ಕಾರ್ಯಕ್ರಮ ಕೂಡ ಮಾಡಲಾಗುತ್ತೆ. ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗು ವಿದ್ಯಾರ್ಥಿಗಳು ಸಾರ್ವಜನಿಕರು ಸಹಕಾರ ನೀಡಿ ಎಂದು ಸಚಿವರು ಮನವಿ ಮಾಡಿದರು.
ಇದೇ ವೇಳೆ ನಾಗಮಂಗಲ ಘಟನೆ ಬಗ್ಗೆ ಸಚಿವರು ಮಾತನಾಡಿದರು. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಯಾರು ಕೃತ್ಯ ಮಾಡಿದಾರೆ ಎನ್ನೋದನ್ನ ಈಗ ಪತ್ತೆ ಹಚ್ಚಬೇಕು. ಹಾಗಾಗಿ ಪೊಲೀಸರು ಈ ಬಗ್ಗೆ ದಾಖಲೆ ಸಮೇತ ಕಂಡು ಹಿಡಿಯುತ್ತಾರೆ. ಯಾರೇ ತಪ್ಪಿತಸ್ತರಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ಅಸಹಾಯಕರು ಹಾಗು ದೌರ್ಜನ್ಯಕ್ಕೆ ಒಳಗಾದವರಿಗೆ ಸರ್ಕಾರ ರಕ್ಷಣೆ ಕೊಡಲಿದೆ. ವಿರೋದ ಪಕ್ಷಗಳು ಟೀಕೆಮಾಡೋದೆ ಅವರ ಕೆಲಸ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಕೂಡ ಇಂತಹ ಘಟನೆ ನಡೆದಿದ್ದವು ಆದರೆ ಅದು ದೊಡ್ಡದಾಗುತ್ತಿತ್ತಾ? ಎಂದು ಮರುಪ್ರಶ್ನೆ ಮಾಡಿದರು.












Click it and Unblock the Notifications