• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್ ನಡುವೆ ರಕ್ತ ದಾನ ಮಾಡಿದ ಮಂಗೋಟೆ ಗ್ರಾಮಸ್ಥರು

|

ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲ್ಲೂಕಿನ ಮಂಗೋಟೆ ಗ್ರಾಮದಲ್ಲಿ ಇಂದು (ಮಾರ್ಚ್ 27) ರಕ್ತದಾನ ಶಿಬಿರವನ್ನು ಏರ್ಪಡು ಮಾಡಲಾಗಿತ್ತು. ಕೊರೊನಾ ವೈರಸ್ ಬೀತಿ, ಲಾಕ್ ಡೌನ್ ನಡುವೆಯೂ ಇಲ್ಲಿನ ಗ್ರಾಮಸ್ಥರು ರಕ್ತದಾನ ಮಾಡಿದ್ದಾರೆ.

ರೋಟರಿ ರಕ್ತ ನಿಧಿ ಶಿವಮೊಗ್ಗದ ಇಲ್ಲಿನ ಮನವಿಗೆ ಗ್ರಾಮಸ್ಥರು ಸ್ಪಂದಿಸಿದ್ದಾರೆ. ಕೊರೊನಾ ಬೀತಿ ಹಾಗೂ ಲಾಕ್ ಡೌನ್ ನಿಂದ ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ, ಸದ್ಯ ರಕ್ತದ ಅಗತ್ಯ ತುಂಬ ಇದೆ. ಈ ಕಾರಣ ರೋಟರಿ ರಕ್ತ ನಿಧಿ ಮನವಿ ಮಾಡಿದ್ದು, ಅದರಂತೆ ಗ್ರಾಮಸ್ಥರು ರಕ್ತ ನೀಡಿದ್ದಾರೆ.

ಮನಸೋ ಇಚ್ಛೆ ಓಡಾಡೋರಿಗೆ ಮನೆಯಲ್ಲಿರುವವರ ಸ್ಥಿತಿ ಯಾಕೆ ಅರ್ಥವಾಗಲ್ಲ? ಮನಸೋ ಇಚ್ಛೆ ಓಡಾಡೋರಿಗೆ ಮನೆಯಲ್ಲಿರುವವರ ಸ್ಥಿತಿ ಯಾಕೆ ಅರ್ಥವಾಗಲ್ಲ?

ಲಾಕ್ ಡೌನ್ ನಿಂದ ರೋಗಿಗಳಿಗೆ ರಕ್ತ ನೀಡಲು ಮುಂದೆ ಬರುವ ಜನರ ಸಂಖ್ಯೆ ಇಳಿಕೆಯಾಗಿದೆ. ಡಯಾಲಿಸಿಸ್, ಶಸ್ತ್ರ ಚಿಕಿತ್ಸೆ ಹಾಗೂ ಬಾಣಂತಿಯರ ಚಿಕಿತ್ಸೆಗೆ ರಕ್ತದ ಅವಶ್ಯಗತೆ ತುಂಬ ಇದೆ. ಹೀಗಾಗಿ ಲಾಕ್ ಡೌನ್ ನಡುವೆ ಅನುಮತಿ ಪಡೆದು ರಕ್ತದಾನ ಶಿಬಿರ ಏರ್ಪಾಡು ಮಾಡಲಾಗಿತ್ತು.

ಈ ನಡುವೆ ಕೊರೊನಾ ಮುಂಜಾಗ್ರತೆಯ ಬಗ್ಗೆ ಜನರಿಗೆ ವೈದ್ಯರು ತಿಳಿ ಹೇಳಿದರು. ಪರೀಕ್ಷೆ ನಡೆಸಿ ರಕ್ತ ಪಡೆದರು. ಸಾಮಾಜಿಕ ಅಂತರದಲ್ಲಿರಲು ತಿಳಿಸಿದರು. ರಕ್ತ ನೀಡಿದವರಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಿದರು.

ಗ್ರಾಮಸ್ಥ ಎಮ್ ಎಸ್ ಜಗದೀಶ್ ನೇತೃತ್ವದಲ್ಲಿ ಈ ರಕ್ತದಾನ ಶಿಬಿರ ನಡೆದಿದೆ. 65ಕ್ಕೂ ಹೆಚ್ಚು ಗ್ರಾಮಸ್ಥರು ರಕ್ತದಾನ ಮಾಡಿದ್ದಾರೆ. ವರ್ಷಕ್ಕೊಮ್ಮೆ ಈ ಗ್ರಾಮದಿಂದ ರಕ್ತದಾನವನ್ನು ಮಾಡಲಾಗುತ್ತದೆ.

English summary
Lack Down: Blood donation camp held in Mangote, bhadravathi taluk, shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X