''ನಳಿನ್ ಕುಮಾರ್ ಕಟೀಲಿಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ..''
ಶಿವಮೊಗ್ಗ, ಅ 22: ಉಪ ಚುನಾವಣೆಯ ಪ್ರಚಾರದ ದಿಕ್ಕು ದಿನದಿಂದ ದಿನಕ್ಕೆ ಹಾದಿ ತಪ್ಪುತ್ತಿದೆ. ಬಿಜೆಪಿಯವರು ಆರಂಭಿಸಿದ ವೈಯಕ್ತಿಕ ವಾಗ್ದಾಳಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಒಂದು ದಿನದ ಹಿಂದೆ ಬಿಜೆಪಿಯ ಸಾಮಾಜಿಕ ಜಾಲತಾಣದ ಘಟಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ದ್ವಿಪತ್ನಿ ವಿಚಾರದ ಬಗ್ಗೆ ಟ್ವೀಟ್ ಮಾಡಿತ್ತು. ಇದಕ್ಕೆ, ಎಚ್ಡಿಕೆ ಪ್ರತಿಕ್ರಿಯೆ ನೀಡುತ್ತಾ, "ಬಿಜೆಪಿಯವರು ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅವರ ಇತಿಹಾಸವನ್ನು ಹೊರಗೆಳೆಯಬೇಕಾಗುತ್ತದೆ"ಎನ್ನುವ ಎಚ್ಚರಿಕೆಯನ್ನು ನೀಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಅವರ ವಿರುದ್ದ ತೀರಾ ಕೆಳಮಟ್ಟದ ಮಾತನ್ನು ಪ್ರಯೋಗಿಸಿದ್ದಾರೆ.
ಆ ರಮೇಶಾ.. ರಮೇಶ್ ಜಾರಕಿಹೊಳಿ ಅಂತ ಒಬ್ಬ ಇದ್ದಲ್ವಾ, ಗೊತ್ತಲ್ವಾ.. ಅದೇ ಮಂಚದ ಜಾರಕಿಹೊಳಿ"ಎಂದು ರಮೇಶ್ ಜಾರಕಿಹೊಳಿಯವರನ್ನು ಏಕವಚನದಲ್ಲಿ ಸಂಬೋಧಿಸಿದ ಡಿ.ಕೆ.ಶಿವಕುಮಾರ್, ಸಿಡಿ ವಿಚಾರವನ್ನು ಮತ್ತೆ ಹಾನಗಲ್ ಚುನಾವಣಾ ಪ್ರಚಾರ ಸಭೆಯಲ್ಲಿ ಕೆದಕಿದ್ದರು. ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದೇನು? (ಇದ್ದದ್ದು ಇದ್ದ ಹಾಗೆ)

ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಬಿಜೆಪಿಯಲ್ಲಿ ಇದ್ದಾರೆ
"ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ನಳಿನ್ ಕುಮಾರ್ ಕಟೀಲ್ ಹಗುರವಾಗಿ ಮಾತನಾಡಿ, ನಾಲಗೆಯನ್ನು ಹೊರಹಾಕಿದ್ದಾರೆ. ಇದನ್ನು ನಾನು ಖಂಡನೆ ಮಾಡುತ್ತೇನೆ, ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದವರು, ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದವರು ಬಿಜೆಪಿಯಲ್ಲಿ ಇದ್ದಾರೆ. ರೇಪ್ ಕೇಸಿನಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಮಂತ್ರಿಗಳು ಇರುವುದು ಬಿಜೆಪಿಯಲ್ಲಿ"ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

ನಳಿನ್ ಕಟೀಲ್ ಗೆ ಸೀರೆ ಉಡಿಸಿದರೆ ಹೆಣ್ಣು ಅಲ್ಲಾ ಗಂಡೂ ಅಲ್ಲಾ
"ಇಂತಹ ಪವಿತ್ರ ಬಿಜೆಪಿಯ ನಾಯಕರನ್ನು ಬಿಟ್ಟು ಆ ಕಟೀಲ್ ನಮ್ಮ ನಾಯಕನ ಬಗ್ಗೆ ಮಾತನಾಡಿದ್ದಾನೆ. ಇವನು ಸೀರೆ ಉಡಿಸಿದರೆ ಹೆಣ್ಣು ಅಲ್ಲಾ ಗಂಡೂ ಅಲ್ಲಾ ಎನ್ನುವ ಮಾತನ್ನು ಹೇಳಬೇಕಾಗುತ್ತದೆ. ಅವನು ಹೆಣ್ಣೋ, ಗಂಡೋ ಎನ್ನುವುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ರಾಜ್ಯಾಧ್ಯಕ್ಷರಾಗಿ ಅವರಿಗೆ ನಾಚಿಕೆಯಾಗಬೇಕು, ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ"ಎಂದು ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

ಬೇಳೂರು ಗೋಪಾಲಕೃಷ್ಣ ವಿವಾದಕಾರಿ ಹೇಳಿಕೆ
"ಬಿಜೆಪಿಯಲ್ಲೇ ಕೊಳೆತು ನಾರುತ್ತಿದೆ, ಅದನ್ನು ನೋಡುವುದು ಬಿಟ್ಟು, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಖಂಡಿಸಬೇಕಾಗುತ್ತದೆ. ಅವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಅತ್ಯಾಚಾರಿಗಳನ್ನು ಮಗ್ಗುಲಲ್ಲೇ ಇಟ್ಟುಕೊಂಡು ನಮ್ಮ ನಾಯಕರ ಬಗ್ಗೆ ಮಾತನಾಡಲು ಬರುತ್ತಾರೆ"ಎನ್ನುವ ವಿವಾದಕಾರಿ ಮಾತನ್ನು ಬೇಳೂರು ಗೋಪಾಲಕೃಷ್ಣ ಆಡಿರುವುದು ಶಿವಮೊಗ್ಗ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತಾ ವರದಿಗಳು ಹೇಳಿವೆ
"ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತಾ ವರದಿಗಳು ಹೇಳಿವೆ. ಕಾಂಗ್ರೆಸ್ ಅಧ್ಯಕ್ಷರ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಪರ್ಸಂಟೇಜ್ ಸಂವಾದ ಮಾಡಿರುವ ಉಗ್ರಪ್ಪ ಅವರು ಜೀವಮಾನದಲ್ಲಿಯೇ ಪಿಸು ಮಾತು ಆಡಿದವರಲ್ಲ. ಅವರು ಉಗ್ರವಾಗಿಯೇ ಮಾತನಾಡುವವರು. ಈ ಪಿಸುಮಾತಿನ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ" ಎನ್ನುವ ಹೇಳಿಕೆಯನ್ನು ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ನೀಡಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications