Shivamogga Airport : ಶಿವಮೊಗ್ಗ ನಿಲ್ದಾಣದ ಒಳಗೆ ಕನ್ನಡ ಭಾಷೆಯ ನಿರ್ಲಕ್ಷ್ಯ, ಕನ್ನಡಿಗರ ಆಕ್ರೋಶ

ಮಲೆನಾಡಿನ ಭಾಗದಲ್ಲಿ ರಾಜ್ಯ ಸರ್ಕಾರದಿಂದ ಹೊಸ ವಿಮಾನ ನಿಲ್ದಾಣವು ಲೋಕಾರ್ಪಣೆಗೆ ಸಿದ್ಧವಾಗಿದೆ. ಆದರೆ ಈ ವಿಮಾನ ನಿಲ್ದಾಣದ ಒಳಗಡೆ ಕನ್ನಡ ಕಣ್ಮರೆಯಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಫೆಬ್ರವರಿ 20: ಮಲೆನಾಡಿನ ಭಾಗದಲ್ಲಿ ರಾಜ್ಯ ಸರ್ಕಾರದಿಂದ ಹೊಸ ವಿಮಾನ ನಿಲ್ದಾಣವು ಲೋಕಾರ್ಪಣೆಗೆ ಸಿದ್ಧವಾಗಿದೆ. ಆದರೆ ಈ ವಿಮಾನ ನಿಲ್ದಾಣದ ಒಳಗಡೆ ಕನ್ನಡ ಕಣ್ಮರೆಯಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣವಾದ ವಿಮಾನ ನಿಲ್ದಾಣವು ಕೆಲವೇ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿದೆ. ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ಕಾಳಜಿ ವಹಿಸಿ ಈ ನಿಲ್ದಾಣ ಸ್ಥಾಪಿಸಿದೆ ಎನ್ನಲಾಗಿದೆ. ಆದರೆ ಈ ವಿಮಾನ ನಿಲ್ದಾಣ ಕನ್ನಡ ಭಾಷೆ ವಿಚಾರದಲ್ಲಿ ರಾಜ್ಯ ಸರ್ಕಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

Kannadigas Outraged after lack of Kannada display boards at Shivamogga Airport

ಹೌದು, ಕನ್ನಡ ನೆಲದಲ್ಲಿ ನಿರ್ಮಾಣವಾದ ಈ ವಿಮಾನ ನಿಲ್ದಾಣದ ಒಳಗಡೆ ಕನ್ನಡ ನಾಮಫಲಕಗಳು ಒಂದೂ ಇಲ್ಲ ಎಂಬುದೇ ಬೇಸರದ ಸಂಗತಿ. ಈ ಕುರಿತು ನೆಟ್ಟಿಗರು ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲು ನಿರ್ಧರಿಸಲಾಗಿದೆ. ಇಂತಹ ರಾಷ್ಟ್ರಕವಿ ಅವರ ಹೆಸರಿರುವ ವಿಮಾನ ನಿಲ್ದಾಣದಲ್ಲಿ ಕನ್ನಡ ನಾಮ ಫಲಕವೇ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಲಾಗಿದೆ.

ಆದ್ದರಿಂದ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಸಿಗಬೇಕು. ಕನ್ನಡ ಭಾಷೆ ಈ ನೆಲ್ಲದಲೇ ಇಂತಹ ಸಂಗತಿಗಳ ಮೂಲಕ ಅಪಮಾನ ಸಲ್ಲದು. ಶಿವಮೊಗ್ಗ ವಿಮಾನ ನಿಲ್ದಾಣಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಕನ್ನಡಿಗರು ಆಗ್ರಹಿಸಿದ್ದಾರೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು ನಿಲುವು ಹಾಗೂ ರಾಜ್ಯ ಸರ್ಕಾರ ಏನನ್ನು? ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

Kannadigas Outraged after lack of Kannada display boards at Shivamogga Airport

ಕನ್ನಡಿಗರ ಬೇಸರ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವನ್ನು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಪ್ರತಿನಿಧಿಸಿದ್ದರು. ಇಲ್ಲಿಗೆ ವಿಮಾನ ನಿಲ್ದಾಣ ಆಗಬೇಕು ಎಂದವರಲ್ಲಿ ಅವರೇ ಮೊದಲಿಗರು. ಹೀಗಾಗಿ ನಿಲ್ದಾಣ ಸಿದ್ಧವಾಗುತ್ತಿದ್ದಂತೆ 'ಯಡಿಯೂರಪ್ಪ' ಅವರ ಹೆಸರು ಇಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ವಿಚಾರ ಭಾರಿ ಚರ್ಚೆಯು ಆಗಿತ್ತು.

ಆದರೆ ಇತ್ತೀಚಗಷ್ಟೇ ಈ ಎಲ್ಲ ಚರ್ಚೆಗೂ ಸ್ವತಃ ತೆರೆ ಎಳೆದ ಯಡಿಯೂರಪ್ಪ ಅವರು ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲು ನಿರ್ಧರಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು. ಈಗ ಕುವೆಂಪು ಅವರ ಹೆಸರೇ ಅಂತಿಮ ಎನ್ನಲಾಗಿದ್ದು, ಅವರ ಹೆಸರಿನ ವಿಮಾನ ನಿಲ್ದಾಣದಲ್ಲಿ ಕನ್ನಡ ಇಲ್ಲದಿರುವುದಕ್ಕೆ ಕನ್ನಡಿಗರು ಅಸಮಾಧಾನ, ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+