ಪ್ರಜ್ವಲ್ ರೇವಣ್ಣ ಅವರಿಗೆ ಅಪಘಾತ ಏನು ಆಗಿಲ್ಲ : ಜೆಡಿಎಸ್
ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಪುತ್ರ ಹಾಗೂ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಕಾರು ಹಾಗೂ ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಆಗುಂಬೆಯ ಹೊಸಗದ್ದೆ ಬಳಿ ನಡೆದಿದೆ
ಆಗುಂಬೆ, ಜೂನ್ 09: ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ, ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ 'ಕಾರು' ಅಪಘಾತಕ್ಕೀಡಾಗಿದೆ.
ಪ್ರಜ್ವಲ್ ರೇವಣ್ಣ ಅವರ ಪಜೆರೋ ವಾಹನ ಹಾಗೂ ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಆದರೆ, ಪ್ರಜ್ವಲ್ ರೇವಣ್ಣ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರಲಿಲ್ಲ ಎಂಬ ಸುದ್ದಿಯನ್ನು ಜೆಡಿಎಸ್ ಮೂಲಗಳು ಖಚಿತಪಡಿಸಿವೆ.
[ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ]

ಈ ಮುಂಚೆ ಕಾರಿನಲ್ಲಿ ಪ್ರಜ್ವಲ್ ಅವರು ಪ್ರಯಾಣಿಸುತ್ತಿದ್ದರು ಎಂದು ಸುದ್ದಿ ಹಬ್ಬಿತ್ತು. ಆದರೆ, ಈಗ ಅಪಘಾತಕ್ಕೀಡಾದ ಸ್ಥಳವನ್ನು ಪರಿಶೀಲಿಸಿರುವ ಆಗುಂಬೆ ಠಾಣೆ ಪೊಲೀಸರು ಒನ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ.

ಆಗುಂಬೆಯ ಘಾಟಿ ಸಮೀಪದ ಹೊಸಗದ್ದೆ ಬಳಿಯ ಬಿದರಗೋಡು ಬಳಿ ಈ ಅಪಘಾತ ಸಂಭವಿಸಿದ್ದು, ಪ್ರಜ್ವಲ್ ಅವರ ಸೋದರ ಸಂಬಂಧಿಗಳು ಹಾಗೂ ಕಾರಿನ ಚಾಲಕ ವಾಹನದಲ್ಲಿದ್ದರು.

ಆಗುಂಬೆಯಿಂದ ಶೃಂಗೇರಿಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಮುಂದೆ ಸಾಗಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿಲ್ಲ












Click it and Unblock the Notifications