• search
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋಗ ಜಲಪಾತದಲ್ಲಿ ಸಿಲುಕಿದ ಕರಾಳ ಅನುಭವ ಹಂಚಿಕೊಂಡ ಕೋತಿರಾಮ

|
   ಕೋತಿ ರಾಮ ಜೋಗದಲ್ಲಿ ಜೀವಂತವಾಗಿ ಪತ್ತೆ | ಇಲ್ಲಿದೆ ಅವರು ಹಂಚಿಕೊಂಡ ಕರಾಳ ಅನುಭವ | Oneindia Kannada

   ಶಿವಮೊಗ್ಗ, ಫೆಬ್ರವರಿ 28 : ಬೆಂಗಳೂರಿನ ಯುವಕನ ಬರೆದಿಟ್ಟ ಡೆತ್ ನೋಟ್ ನೋಡಿ ಅವನನ್ನು ಶೋಧಿಸಲು ಜೋತಿರಾಜ್ ಜೋಗ ಜಲಪಾತಕ್ಕೆ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಕೂಡ ನಾಪತ್ತೆಯಾಗಿದ್ದರು.

   ಅದೃಷ್ಟವಶಾತ್ 'ಕರ್ನಾಟಕದ ಸ್ಪೈಡರ್ ಮ್ಯಾನ್' ಎಂದೇ ಖ್ಯಾತರಾಗಿರುವ ಜೋತಿರಾಜ್ ಅವರು ಬದುಕಿಬಂದಿದ್ದಾರೆ. ಆದರೆ, ಆ ರಾತ್ರಿ ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.

   ಅದೆಷ್ಟು ಬಾರಿ ಜೋಗದ ಗುಂಡಿಯೊಳಗೆ ಇಳಿದಿದ್ದಾರೋ ಜೋತಿರಾಜ್ ಅವರು. ಯಾರನ್ನೇ ಆಗಲಿ ಪಾರು ಮಾಡಲು ಅಥವಾ ರಕ್ಷಣೆಗೆ ಇಳಿಯಲು ಎಂದೂ ಜೋತಿರಾಜ್ ಅವರು ಹಿಂಜರಿಯುವುದಿಲ್ಲ. ಹಿಂದೆ ಒಂದು ಬಾರಿ ಯಾರನ್ನೋ ರಕ್ಷಿಸಲು ಹೋಗಿ ಬೆನ್ನು ಮೂಳೆಯನ್ನು ಜೋತಿರಾಜ್ ಮುರಿದುಕೊಂಡಿದ್ದರು.

   ಈ ಬಾರಿ ಕೂಡ ಸಾಹಸಕ್ಕೆ ಅಣಿಯಾದ ಜೋತಿರಾಜ್, ಜೋಗಕ್ಕೆ ಹೋಗುವ ಮೊದಲು, ಯಾರು ಕೂಡ ಆತ್ಮಹತ್ಯೆಯಂಥ ಹೀನ ಕೃತ್ಯಕ್ಕೆ ಇಳಿಯಬಾರದು ಎಂದು ಮನವಿ ಮಾಡಿಕೊಂಡಿದ್ದರು. ಅವರ ಕಳಕಳಿಗೆ ಧನ್ಯವಾದಗಳು.

   ನೀರಿನೊಳಗೆ ಒಂದು ಇಡೀ ರಾತ್ರಿ ಕಳೆದಿದ್ದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...

   ಡೆತ್ ನೋಟ್ ಬರದಿಟ್ಟು ನಾಪತ್ತೆಯಾದವನ ಹುಡುಕಾಟ

   ಡೆತ್ ನೋಟ್ ಬರದಿಟ್ಟು ನಾಪತ್ತೆಯಾದವನ ಹುಡುಕಾಟ

   ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕ ಬರೆದಿಟ್ಟಿದ್ದ ಡೆತ್ ನೋಟ್ ದೊರೆತ ಹಿನ್ನೆಲೆಯಲ್ಲಿ ಆತನ ಶೋಧಕ್ಕಾಗಿ ಮಂಗಳವಾರ ಮಧ್ಯಾಹ್ನ ಜೋಗ ಜಲಪಾತದ ಆಳಕ್ಕೆ ಹೋಗಿ ಹುಡುಕುವ ಸಂದರ್ಭ ಒದಗಿ ಬಂತು. ಮೇಲಿಂದ ಹುಡುಕಿದೆ ಎಲ್ಲೂ ಕಾಣಲಿಲ್ಲ. 300 ಅಡಿ ಮೇಲಿನಿಂದ ಬಂಡೆಗಳನ್ನು ಹುಡುಕಿದಾಗ ಕೂಡ ಯಾವ ಸಂಕೇತವೂ ದೊರೆಯಲಿಲ್ಲ. ಹಾಗಾಗಿ ನೀರಿನಾಳಕ್ಕೆ ಹೋಗಬೇಕಾಯಿತು.

   ಕಲ್ಲುಸಂದಿಯಲ್ಲಿರಬಹುದೆ ಎಂದು ಇಣುಕಿದಾಗ...

   ಕಲ್ಲುಸಂದಿಯಲ್ಲಿರಬಹುದೆ ಎಂದು ಇಣುಕಿದಾಗ...

   ಒಂದೊಂದು ಕಲ್ಲು ಸಂದಿಗಳನ್ನೂ ಬಿಡದೆ ಹುಡುಕಿದ್ದೇನೆ. ಹೇಗಾದರೂ ಮಾಡಿ ಅವನ ದೇಹವನ್ನು ಹುಡುಕಲೇ ಬೇಕು ಎಂದು ಸಾಕಷ್ಟು ಕಷ್ಟಪಟ್ಟೆ, ನಂತರ ಸುಮಾರು 15 ಅಡಿ ಇರುವ ಕಲ್ಲುಸಂದಿಯಲ್ಲೇನಾದರೂ ಬಿದ್ದಿರಬಹುದು ಎಂದು ಭಾವಿಸಿ ಅಲ್ಲಿ ತೆರಳಿದಾಗ ಕಾಲು ಜಾರಿ ನಾನು ಆ ಕಲ್ಲಿನಡಿಯಲ್ಲಿ ಸಿಲುಕಿದೆ. ಆ ಕಲ್ಲಿನಲ್ಲಿ ಪಾಚಿ ಕಟ್ಟಿದ್ದ ಕಾರಣ ಎದ್ದೇಳಲು ಸಾಧ್ಯವಾಗಲಿಲ್ಲ.

   ರಾತ್ರಿಯಿಡೀ ಅಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ

   ರಾತ್ರಿಯಿಡೀ ಅಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ

   ಮನೆಯವರು, ತಮ್ಮ ತಂಡದವರು ಭಯಭೀತರಾಗುತ್ತಾರೆ ಎಂದು ಮೇಲೇಳಲು ಪ್ರಯತ್ನಿಸಿದೆ ಸಾಧ್ಯವಾಗಲಿಲ್ಲ. ಸಾಕಷ್ಟು ಪೆಟ್ಟು ಕೂಡ ಬಿದ್ದಿತ್ತು. ಕೂಗಿಕೊಂಡರೂ ಸಹಾಯಕ್ಕೆ ಯಾರೂ ಇರಲಿಲ್ಲ. ಇನ್ನೇನು ರಾತ್ರಿಯಾಯಿತು, ಬೇರೆ ದಾರಿ ಕಾಣದೆ ಅಲ್ಲಿಯೇ ಕಳೆಯಬೇಕಾದ ಪರಿಸ್ಥಿತಿಯೂ ಎದುರಾಯಿತು. ಬೆಳಗ್ಗೆಯವರೆಗೂ ನೀರಿನಲ್ಲಿಯೇ ನಿಂತಿದ್ದೆ.

   ಹುಡುಕಲು ಹೋದ ವ್ಯಕ್ತಿ ಬದುಕಿದರೆ ಇನ್ನೂ ಸಂತೋಷ

   ಹುಡುಕಲು ಹೋದ ವ್ಯಕ್ತಿ ಬದುಕಿದರೆ ಇನ್ನೂ ಸಂತೋಷ

   ರಾತ್ರಿ ಎಲ್ಲಾ ತುಂಬಾ ಕಷ್ಟ ಅನುಭವಿಸಿದೆ. ಯಾವ ಕಡೆಯಿಂದಲೂ ಮೇಲೆ ಹತ್ತಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಬೇರೆ ಕಲ್ಲೊಂದನ್ನು ತೆಗೆದುಕೊಂಡು ಇನ್ನೊಂದು ಕಲ್ಲಿಗೆ ಬಡಿಯುತ್ತಾ ಪಾಚಿ ತೆಗೆದು ಜಾರದಂತೆ ನೋಡಿಕೊಳ್ಳುತ್ತಾ ಸ್ವಲ್ಪ ಮೇಲೆ ಬಂದೆ. ನಂತರ ಪೊಲೀಸರು, ಸ್ನೇಹಿತರು ಎಲ್ಲರೂ ಸೇರಿ ನನಗೆ ಮೇಲೆ ಬರಲು ಸಹಾಯ ಮಾಡಿದ್ದಾರೆ. ನಾನು ಹುಡುಕಲು ಹೋಗಿದ್ದ ವ್ಯಕ್ತಿ ಬದುಕಿದ್ದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ತಾವು ಜೋಗ ಜಲಪಾತದಲ್ಲಿ ಕಳೆದ ಕರಾಳ ರಾತ್ರಿ ಅನುಭವವನ್ನು ಜನರ ಮುಂದಿಟ್ಟಿದ್ದಾರೆ.

   ಜೋಗ ಜಲಪಾತದ ಬಂಡೆಗಳ ನಡುವೆ ಸಿಲುಕಿದ್ದ ಕೋತಿರಾಮನ ರಕ್ಷಣೆ

   ಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಶಿವಮೊಗ್ಗ ಸುದ್ದಿಗಳುView All

   English summary
   Kothirama alias Jothiraj recalls his horrible experience when he had gone to Jog Falls on 27th night in search of young man from Bengaluru, who had allegedly committed suicide by jumping from Jog. Jothiraj had to spent entire night in the water, as there no one to rescue him. He said if young man from Bengaluru comes out safe, he will be more than happy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more