ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ. 26 ರಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 30: ಬೆಂಗಳೂರಿನಲ್ಲಿ ಫೆಬ್ರವರಿ 26 ರಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಿಸಲಾಗುತ್ತಿದೆ. 50 ದೇಶಗಳ 150 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಇದರಲ್ಲಿ 32 ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದರು.

ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಫೆಬ್ರವರಿ 26 ರಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಂಠೀರವ ಸ್ಟುಡಿಯೋದಲ್ಲಿ ಉದ್ಘಾಟನೆಗೊಳ್ಳಲಿದೆ. ಮಾರ್ಚ್ 4 ರವರೆಗೆ ನಡೆಯುವ ಈ ಉತ್ಸವ ಬೆಂಗಳೂರಿನ ವಿವಿಧ ಮಾಲ್ ಗಳ 11 ಸ್ಕ್ರೀನ್ ನಲ್ಲಿ ನಡೆಯಲಿದೆ ಎಂದರು.

 ಕೊಲ್ಕತ್ತಾ ಚಲನಚಿತ್ರೋತ್ಸವಕ್ಕೆ 'ಕೊಡಗ್ ರ ಸಿಪಾಯಿ’ ಕೊಡವ ಚಿತ್ರ ಕೊಲ್ಕತ್ತಾ ಚಲನಚಿತ್ರೋತ್ಸವಕ್ಕೆ 'ಕೊಡಗ್ ರ ಸಿಪಾಯಿ’ ಕೊಡವ ಚಿತ್ರ

ಬೆಂಗಳೂರಿಗೆ ಸೀಮಿತಗೊಂಡ ಅಕಾಡೆಮಿಯನ್ನು ಇತರ ಜಿಲ್ಲೆಗಳಿಗೆ ತರಲು ಉದ್ದೇಶಿಸಲಾಗಿದೆ. ಐತಿಹಾಸಿಕ ಸ್ಥಳವಾದ ಚಿತ್ರದುರ್ಗ, ಬಿಜಾಪುರ ಮೊದಲಾದ ಸ್ಥಳಗಳಲ್ಲಿ ಲೈಬ್ರರಿ ತೆಗೆಯುವ ಮೂಲಕ ಕನ್ನಡ ಚಲನಚಿತ್ರ ನಡೆದು ಬಂದ ದಾರಿಯ ಇತಿಹಾಸವನ್ನು ತೋರಿಸಲಾಗುವುದು ಎಂದು ಹೇಳಿದರು.

International Film Festival In Bengaluru From February 26th

ಪ್ರಾದೇಶಿಕ ಚಲನಚಿತ್ರೋತ್ಸವಕ್ಕೆ ಅಕಾಡೆಮಿ ಯೋಚನೆ ಮಾಡುತ್ತಿದ್ದು, ಶಿವಮೊಗ್ಗ, ಮಂಗಳೂರು, ಗುಲ್ಬರ್ಗ, ವಿಜಯಪುರ ಮೊದಲಾದ ಪ್ರದೇಶಗಳಲ್ಲಿ ತುಳು, ಕೊಡವ, ಬ್ಯಾರಿ, ಬಂಜಾರ, ಕೊಂಕಣಿ ಭಾಷೆಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಈ ಚಲನಚಿತ್ರೋತ್ಸವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಹೋಗ್ಬೇಕಾ? ನೀವು ಮಾಡ್ಬೇಕಾಗಿದ್ದು ಇಷ್ಟೆಬೆಂಗಳೂರು ಚಲನಚಿತ್ರೋತ್ಸವಕ್ಕೆ ಹೋಗ್ಬೇಕಾ? ನೀವು ಮಾಡ್ಬೇಕಾಗಿದ್ದು ಇಷ್ಟೆ

ಯುವ ಪ್ರತಿಭೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಿ ಐದಾರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು, ಅನಿಮೇಷನ್ ಹಾಗೂ ಇತರೆ ವಿಷಯಗಳ ಕುರಿತು ಶಿಕ್ಷಣ ನೀಡಲಾಗುವುದು. ಪ್ರತಿ ವರ್ಷ ಅಕಾಡೆಮಿ ಸಿನಿಮಾ ಥಿಯೇಟರ್ ಆರಂಭಿಸಲಾಗುವುದು. ಇದಕ್ಕಾಗಿ ಬೆಂಗಳೂರಿನಲ್ಲಿ ಫಿಲಂ ಕಾಂಪ್ಲೆಕ್ಸ್ ತೆರಯುವ ಯೋಜನೆ ಇದೆ. ಜೊತೆಗೆ ಸಿನಿಮಾಗಳನ್ನು ಡಿಜಿಟಲೈಸೇಷನ್ ಮಾಡುವ ಯೋಜನೆಯನ್ನು ಅಕಾಡೆಮಿ ಹಮ್ಮಿಕೊಂಡಿದೆ ಎಂದರು.

ಪ್ರತಿವರ್ಷ ಹುಣಸೂರು ಕೃಷ್ಣಮೂರ್ತಿ, ವಿಷ್ಣುವರ್ದನ್, ಡಾ.ರಾಜ್ ಕುಮಾರ್ ಮೊದಲಾದ ಸಿನಿಮಾ ದಿಗ್ಗಜರ ಹೆಸರಿನಲ್ಲಿ ಚಲನಚಿತ್ರ ಅವಾರ್ಡ್ ಕಾರ್ಯಕ್ರಮವನ್ನು ಆರಂಭಿಸಲಾಗುವುದು, ಈ ವರ್ಷ ಶಿವಮೊಗ್ಗದಲ್ಲಿ ಆರಂಭಿಸಲಾಗುವುದು ಎಂದರು.

ಶಿವಮೊಗ್ಗಕ್ಕೆ ನಾನು 1986 ರಲ್ಲಿ ಹೊಸದಿಗಂತ ಚಿತ್ರದ ಸಮಯದಲ್ಲಿ ಆಗಮಿಸಿದ್ದೆ, ನನಗೆ ಶಿವಮೊಗ್ಗದ ನಂಟು ಉತ್ತಮವಾಗಿದೆ. ನಾನು ಮೂಲತಃ ಧಾರವಾಡದವನು ಎಂದ ಸುನೀಲ್ ಪುರಾಣಿಕ್, ಅಕಾಡೆಮಿ ಅಧ್ಯಕ್ಷನಾಗಿದ್ದು ಸಂತಸ ತಂದಿದೆ ಎಂದರು. ಕಳೆದ 22 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಇದ್ದರೂ ಯಾರು ನನ್ನನ್ನು ಗುರುತಿಸಿರಲಿಲ್ಲ. ಆದರೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದರು.

English summary
International Film Festival to be launched in Bengaluru 150 films from 50 countries will be Screened In Film Festival Said Karnataka Film Academy Chairman Sunil Puranik in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X