Guarantee Schemes: "ರಾಜ್ಯದಲ್ಲಿ ಐದು ಗ್ಯಾರಂಟಿಗಳ ಬದಲು ಜನರಿಗೆ ದುಡಿಯುವ ಗ್ಯಾರಂಟಿ ನೀಡಿ"
Guarantee Schemes: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕುರಿತು ಮಾತನಾಡಿದ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಅವರು ಈ ಗ್ಯಾರಂಟಿಗಳಿಗಿಂತ ಜನರಿಗೆ ದುಡಿಯುವ ಗ್ಯಾರಂಟಿ ನೀಡಬೇಕಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಅವರು ತರಳಬಾಳು ಹುಣ್ಣಿಮೆ ಮಹೋತ್ಸವ -2026ರ ಮೊದಲ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜನರಿಗೆ ದುಡಿಯುವ ಕೆಲಸದ ಗ್ಯಾರಂಟಿ ಬೇಕು. ದುಡಿಮೆ ಗ್ಯಾರಂಟಿ ಕೊಟ್ಟರೆ, ಅದಕ್ಕಿಂತ ಬೇರೆ ಯಾವುದು ಬೇಡ ಎಂದರು.

1923ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಇಲ್ಲಿನ ವಿ.ಎಸ್.ಎನ್.ಎಲ್. ಕಾರ್ಖಾನೆ ಆರಂಭಿ ಸಲಾಗಿತ್ತು. ರಾಜಪ್ರಭುತ್ವದಲ್ಲಿ ಸ್ಥಾಪನೆಯಾದ ಇಲ್ಲಿನ ಕಾರ್ಖಾನೆ, ಈಗ ಪ್ರಜಾಪ್ರಭುತ್ವದಲ್ಲಿ ಹಾಳು ಹಂಪೆ ಆಗಿರುವುದು ಶೋಚನೀಯ. ಎಂಮದು ಹೇಳಿದರು.
ಕೇಂದ್ರ ಸರ್ಕಾರದ ಈ ಜಾಗದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿದೆ. ಈ ಹಿಂದೆ ಇಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಕಸದ ರಾಶಿ ಇತ್ತು. ಈಗ ಕಸ ತೆರವುಗೊಳಿಸಲಾಗಿದೆ. ಮತ್ತೆ ಇಲ್ಲಿ ಕಸ ಬೀಳದಂತೆ ಇಲ್ಲಿನ 100 - 150 ಹೆಕ್ಟೇರ್ ಪ್ರದೇಶಕ್ಕೆ ಬೇಲಿ ಅಳವಡಿಕೆ ಮಾಡಬೇಕು ಎಂದು ಶ್ರೀಗಳು ವೇದಿಕೆಯ ಮೇಲಿದ್ದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೂಚಿಸಿದರು.
ಇಂದಿನ ತರಳಬಾಳು ಹುಣ್ಣಿಮೆಗೆ ಸಿರಿಗೆರೆಯಿಂದ ಇಲ್ಲಿಗೆ ಬರುವಾಗ ಯುವಕರು ಬೈಕ್‌ಗಳಲ್ಲಿ ಮೆರವಣಿಗೆ ಮೇಲೆ ಬಂದರು. ಆಗ ರಾಷ್ಟ್ರಕವಿ ಕುವೆಂಪು ಅವರ ಹಿಂದೆ ಒಬ್ಬ ಗುರು ಇದ್ದ, ಮುಂದೆ ಒಂದು ಗುರಿ ಇತ್ತು, ಸಾಗುತ್ತಿತ್ತು ರಣಧೀರರ ದಂಡು ಎಂಬ ವಾಣಿ ನೆನಪಿಗೆ ಬಂದಿತು ಎಂದು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಹಾಗೂ ಸದಸ್ಯ ಗೋವಿಂದ ಕಾರಜೋಳ, ಶಾಸಕರಾದ ಬಿ.ಪಿ. ಹರೀಶ್, ಎಂ.ಚಂದ್ರಪ್ಪ, ಶಿವಗಂಗಾ ಬಸವರಾಜ್, ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇನ್ನೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಜನವರಿ 24ರ ಶನಿವಾರದಿಂದ ಫೆಬ್ರವರಿ 1ರ ವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮತ್ತು ಸರ್ವಧರ್ಮ ಸಮ್ಮೇಳನ ನಡೆಯಲಿದೆ.












Click it and Unblock the Notifications