ಶಿವಮೊಗ್ಗ: ಭಾರಿ ಮಳೆ ತುಂಗಾ ಜಲಾಶಯ ಭರ್ತಿ

ಶಿವಮೊಗ್ಗ,ಜೂ.21: ತುಂಗಾನದಿಯ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ ಒಳಹರಿವು ಗುರುವಾರ ರಾತ್ರಿಯಿಂದ ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ ಅಣೆಕಟ್ಟೆಯ ಎಂಟು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ.

ಅಣೆಕಟ್ಟೆನ ಗರಿಷ್ಠ ಮಟ್ಟ 588.24 ಅಡಿಯಿದ್ದು, ಈಗ 588.21ಅಡಿ ನೀರು ಸಂಗ್ರಹವಾಗಿದೆ. 3,050 ಕ್ಯೂಸೆಕ್‌ ಒಳಹರಿವು ಜಲಾಶಯಕ್ಕೆ ಬರುತ್ತಿದ್ದು, ಅಣೆಕಟ್ಟೆಯಿಂದ 3,328 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ.

ಶಿವಮೊಗ್ಗದ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹುಲಿಕಲ್‌ನಲ್ಲಿ ಅತ್ಯಧಿಕ 12 ಸೆಂ.ಮೀ ಮಳೆಯಾಗಿದೆ. ಉಳಿದಂತೆ ತೀರ್ಥ‌ಹಳ್ಳಿ, ಲಿಂಗನಮಕ್ಕಿ 4 ಸೆಂ.ಮೀ; ಸಾಗರ, ಹೊಸನಗರ, ಸೊರಬದಲ್ಲಿ 2 ಸೆಂ.ಮೀ ಮಳೆಯಾಗಿದೆ.

ಜಿಲ್ಲೆಯ ಲಿಂಗನಮಕ್ಕಿಯಲ್ಲಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಿದ್ದು, ಈಗ 1746.25 ಅಡಿ ನೀರು ಸಂಗ್ರಹವಾಗಿದೆ. 11,608 ಕ್ಯೂಸೆಕ್‌ ಒಳಹರಿವು ಇದೆ. ಭದ್ರಾ ಜಲಾಶಯದಲ್ಲಿ ಗರಿಷ್ಠ ಮಟ್ಟ 186 ಅಡಿಗಳಿದ್ದು, ಈಗ ಜಲಾಶಯದಲ್ಲಿ 134.10 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 6,582 ಕ್ಯೂಸೆಕ್‌ ಇದೆ.

monsoon rain
ಕೊಡಗಿನಲ್ಲೂ ಭಾರಿ ಮಳೆ:
ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಜೋರಾಗಿದೆ. ಮಳೆಯ ಜತೆ ರಭಸವಾದ ಗಾಳಿ, ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಲಕ್ಷ್ಮಣತೀರ್ಥ, ಬೇತ್ರಿ ನದಿಗಳ ನೀರಿನ ಹರಿವು ಹೆಚ್ಚಾಗಿದೆ.

ಭಾಗಮಂಡಲದಲ್ಲಿ ಕಾವೇರಿ ಬಂದು ಸೇರುವ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಏರಿಕೆಯಾಗಿದ್ದು, ಭಗಂಡೇಶ್ವರ ದೇವಾಲಯದ ಮೆಟ್ಟಿಲವರೆಗೆ ನೀರು ತಲುಪಿದೆ.[ಕರಾವಳಿಯಲ್ಲಿ ಭಾರಿ ಮಳೆ: ಮರ, ವಿದ್ಯುತ್ ಕಂಬ ಧರೆಗೆ]

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕೊಡುಗು ಜಿಲ್ಲೆಯಲ್ಲಿ ಭಾಗಮಂಡಲದಲ್ಲಿ ಅತ್ಯಧಿಕ 7 ಸೆಂಮೀ ಮಳೆಯಾಗಿದೆ. ಉಳಿದಂತೆ ಮಾದಾಪುರ ಮತ್ತು ನಾಪೋಕ್ಲು 5 ಸೆಂ.ಮೀ; ವಿರಾಜಪೇಟೆ, ಸೋಮವಾರಪೇಟೆ 3 ಸೆಂ.ಮೀ; ಮೂರ್ನಾಡ್‌, ಹಾರಂಗಿಯಲ್ಲಿ 1 ಸೆಂ.ಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+