ಶಿವಮೊಗ್ಗದಲ್ಲಿ ಪೈಲ್ವಾನ್ ಚಿತ್ರ ನೋಡಲು ಬಂದವರಿಗೆ ಅನ್ನ ಸಂತರ್ಪಣೆ!
ಶಿವಮೊಗ್ಗ, ಸೆಪ್ಟೆಂಬರ್ 14: ಶಿವಮೊಗ್ಗ ನಗರದ ವೀರಭದ್ರ ಚಲನಚಿತ್ರಮಂದಿರದಲ್ಲಿ ಪೈಲ್ವಾನ್ ಚಿತ್ರ ಬಿಡುಗಡೆಯಾಗಿದ್ದು, ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಅಕಾಡೆಮಿ ಜಿಲ್ಲಾ ಘಟಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿತು.
ಗುರುವಾರ ರಾಜ್ಯದ್ಯಂತ ಪೈಲ್ವಾನ್ ಚಿತ್ರ ಬಿಡುಗಡೆಯಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಅಭಿಮಾನಿಗಳು ಚಲನಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಥಿಯೇಟರ್ ಬಳಿ ಅನ್ನ ಸಂತರ್ಪಣೆ ಮಾಡಿದರು.

ನಟ ಸುದೀಪ್ ಅಭಿನಯದ ಹಾಗೂ ಬಹುನಿರೀಕ್ಷಿತ ಚಲನಚಿತ್ರ ಪೈಲ್ವಾನ್ ಬಿಡುಗಡೆ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಟ ಸುದೀಪ್ ತಂದೆ ಸಂಜೀವ್ ಅವರು ನಗರಕ್ಕೆ ಆಗಮಿಸಿ ವೀರಭದ್ರ ಚಲನಚಿತ್ರ ಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆ ಇತ್ತು. ಆದರೆ ಅವರು ಕಾರಣಾಂತರದಿಂದ ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಅಕಾಡೆಮಿ ಜಿಲ್ಲಾಧ್ಯಕ್ಷ ರಾಜೀವ್ ರಾಯ್ಕರ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ ನಡೆದಿದೆ.
ಡೊಳ್ಳು ವಾದ್ಯಗಳ ಮೂಲಕ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಅನ್ನ ಸಂತರ್ಪಣೆ ನಡೆಸಲಾಯಿತು.












Click it and Unblock the Notifications