• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋಗ್‌ಫಾಲ್ಸ್‌ ಸಮೀಪದಲ್ಲಿರುವ ಬ್ರಿಟಿಷ್ ಬಂಗ್ಲೆಗೆ ಅಪಾಯ, ಎಷ್ಟು ಸತ್ಯ?

|

ಶಿವಮೊಗ್ಗ, ಆಗಸ್ಟ್ 10: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಸಮೀಪದಲ್ಲಿರುವ ಬ್ರಿಟಿಷ್ ಬಂಗಲೆ ಕುಸಿಯುವ ಹಂತದಲ್ಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ ಅದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲಿದೆ.

ಕೆಪಿಸಿ ನಿವೃತ್ತ ಎಂಜಿನಿಯರ್ ಗಜಾನನ ಭಟ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ ಈಗಾಗಲೇ ರಾಜಾ ಜಲಪಾತದ ಪಕ್ಕದಲ್ಲಿ ಕುಸಿದಿರುವ ಒಂದಿಷ್ಟು ಮಣ್ಣನ್ನು ತೋರಿಸಿ, ಬ್ರಿಟಿಷ್ ಬಂಗಲೆ ಅಪಾಯಕ್ಕೆ ಸಿಲುಕಿದೆ, ಎರಡು ದಿನ ಮಳೆ ಹೀಗೇ ಮುಂದುವರೆದರೆ ಐತಿಹಾಸಿಕ ಬ್ರಿಟಿಷ್ ಬಂಗಲೆ ಕಣಿವೆಯ ತಳ ಸೇರುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಶಿವಮೊಗ್ಗದಲ್ಲಿ ಮಳೆಯಿಂದ ಎಲ್ಲೆಲ್ಲಿ ಏನೇನಾಯ್ತು?; ತಕ್ಷಣವೇ ಪರಿಹಾರಕ್ಕೆ ಸೂಚನೆ

ಆದರೆ ಈಗ ಪ್ರಕಟವಾಗಿರುವ ಫೋಟೋ ಎದುರಿನಿಂದ ಅಂದರೆ ಮೈಸೂರು ಬಂಗ್ಲೆಯ ಕಡೆಯಿಂದ ತೆಗೆದದ್ದು. ಅಂದರೆ ಕಣಿವೆಯ ಎಡಗಡೆಯಿಂದ ತೆಗೆದದ್ದು.

ಜಲಪಾತದ ಬಳಿಯ ಕಣಿವೆಯ ಅಗಲವೇ 2030 ಅಡಿ. ಅದರಿಂದ ಈ ಬದಿಗೆ ಅಂದರೆ ಅಷ್ಟು ದೂರದಿಂದ ತೆಗೆದ ಚಿತ್ರದಲ್ಲಿ ಬ್ರಿಟಿಷ್ ಬಂಗ್ಲೆ ಮಣ್ಣು‌ ಕುಸಿದ ಜಾಗದ ಪಕ್ಕದಲ್ಲೇ ಇರುವಂತೆ ಕಂಡರೂ ವಾಸ್ತವದಲ್ಲಿ ಮಣ್ಣು ಕುಸಿದ ಜಾಗಕ್ಕೂ ಬಂಗ್ಲೆಗೂ ಕನಿಷ್ಠ ಮೂವತ್ತು ಮೂವತ್ತೈದು ಅಡಿಗಳ ಅಂತರವಾದರೂ ಇದ್ದೀತು.

ನಾನೂ ಪ್ರಸ್ತುತ ಕುಸಿತದ ಸ್ಥಳದ ಬಳಿ ಹೋಗಿ ಕಣ್ಣಾರೆ ಕಾಣದಿರುವ ಪ್ರಯುಕ್ತ ಇಲ್ಲಿ ಪ್ರಕಟವಾಗುತ್ತಿರುವ ಫೋಟೋವನ್ನು ನೋಡಿ ಹೇಳುತ್ತಿರುವುದು. ಮಾತ್ರ. ಬ್ರಿಟಿಷ್ ಬಂಗ್ಲೆ ಕಟ್ಟಡದ ಬಳಿಯ ಚಿತ್ರ ತೋರಿಸದೇ ಅಪಾಯದ ದುಂಧುಬಿ ಊದುತ್ತಿದ್ದಾರೆ. ಆದರೆ ಬ್ರಿಟಿಷ್ ಬಂಗ್ಲೆ ಇರುವುದು ಈಗ ಕಾಣುತ್ತಿರುವ ಕಟ್ಟಡದ ಹಿಂದೆ.

ಈ ಫೋಟೋದಲ್ಲಿ ಎದುರು ಕಾಣುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ವ್ಯೂ ಪಾಯಿಂಟ್ ಎಂದು ಆ ಕಟ್ಟಡವನ್ನು ಮುಂದೆ ಮುಂದಕ್ಕೆ ವಿಸ್ತರಣೆ ಮಾಡಿದ ಕಟ್ಟಡ. ಈಗ ಅಕಸ್ಮಾತ್ ಕಾಣುತ್ತಿರುವ ಕಟ್ಟಡ ಕುಸಿಯುವ ಹಂತಕ್ಕೆ ಬಂದಿದೆ.

ಎಂದಾದರೂ ಅದು ಮೂಲ ಬ್ರಿಟಿಷ್ ಬಂಗ್ಲೆಯಂತೂ ಅಲ್ಲ, ನಮ್ಮವರು ದುರಾಸೆಯಿಂದ ಇತ್ತೀಚೆಗೆ ವಿಸ್ತರಣೆ ಮಾಡಿ, ಅಡ್ಡಾದಿಡ್ಡಿ ಕಟ್ಟಿದ ಅವಿವೇಕದ ಕಟ್ಟಡವಷ್ಟೇ. ನನ್ನ ಅನುಭವವನ್ನೇ ಆಧರಿಸಿ ಹೇಳುವುದಾದರೆ ಅದೂ ಸಾಧ್ಯವಿಲ್ಲ.

ಯಾಕೆಂದರೆ ಆ ಪರ್ವತ ಶಿಲಾಮಯ. ಅಲ್ಲಿರುವುದು ಮಣ್ಣಿನ ತೆಳು ಪದರ. ಇದೀಗ ಮಣ್ಣಿನ ತೆಳು ಪದರ ಜಾರಿ, ಉದುರಿ ಬಿದ್ದಿರಬಹುದೇ ಹೊರತು ಶಿಲೆಯ ಮೇಲಿರಬಹುದಾದ ಇಡೀ ಕಟ್ಟಡ ಉರುಳಿ ಬೀಳಲಿದೆ ಎಂಬುದನ್ನು ಮನಸ್ಸು ಒಪ್ಪುತ್ತಿಲ್ಲ.

ಹಾಗೆಂದು ನನ್ನ ಊಹೆಯೂ ಅಂತಿಮವಲ್ಲ. ಯಾವುದಕ್ಕೂ ಸತ್ಯ ನಿರ್ಧಾರ ಆಗಬೇಕಿರುವುದು ಸಮರ್ಪಕವಾದ ಪರಿವೀಕ್ಷಣೆ ಮತ್ತು ಪರೀಕ್ಷೆಗಳಿಂದ. ಅಧಿಕಾರಿಗಳು ಅದನ್ನು ಪರೀಕ್ಷಿಸಿ ಹೇಳುವ ತನಕ ಈ ಆತಂಕ ಕೇವಲ ಊಹಾಪೋಹ. ಹಾಗೆಂದು ಅದಕ್ಕೆ ಕೆಲವು ರಕ್ಷಣಾತ್ಮಕ ಕಾಮಗಾರಿಗಳ ಅಗತ್ಯ ಉಂಟಾಗಿರಬಹುದು ಎಂಬುದನ್ನು ನಾನೂ ಒಪ್ಪುತ್ತೇನೆ.

ಆದರೆ ಕೆಳಗೆ ಉದುರಿರುವ ಮಣ್ಣಿನ ತೆಳು ಪದರವನ್ನಷ್ಟೇ ತೋರಿಸಿ ಎರಡು ಮೂರು ದಿನಗಳಲ್ಲಿ ಇಡೀ ಬ್ರಿಟಿಷ್ ಬಂಗ್ಲೆ ಕಣಿವೆಯ ತಳ ಕಾಣಲಿದೆ ಎಂಬ ಭಯಾತಂಕ ಹುಟ್ಟು ಹಾಕುವುದು ಆತುರದ ನಿರ್ಧಾರ ಎಂಬ ಅಪ್ರಿಯ ಸತ್ಯವನ್ನು ಹೇಳಲೇಬೇಕಿದೆ. ನಿಜ, ಒಂದಿಷ್ಟು ತೊಂದರೆ ಉಂಟಾಗಿದೆ. ಆದರೆ, ಪರೀಕ್ಷೆ, ಪರಿವೀಕ್ಷಣೆಗಳ ಮೊದಲೇ ಈ ಪರಿಯ ಊಹೆ, ಆತಂಕ ಎಷ್ಟು ಸರಿಯೋ ಗೊತ್ತಿಲ್ಲ.

ಇದನ್ನೇಕೆ ಬ್ರಿಟಿಷ್ ಬಂಗ್ಲೆ ಎಂದು ಕರೆಯಲಾಗುತ್ತಿದೆ!?

ಜೋಗ ಜಲಪಾತ ಹೊರಜಗತ್ತಿಗೆ ಪರಿಚಯವಾಗಿದ್ದು 1830 ರ ದಶಕದಲ್ಲಿ.‌ ಅದೂ ಕಾರವಾರದ ಬ್ರಿಟಿಷ್ ಪೋರ್ಟ್ ಆಫೀಸರ್ಸ್ ಮತ್ತು ಸೈನ್ಯಾಧಿಕಾರಿಗಳ ಮೂಲಕ. ಅದರ ಸೌಂದರ್ಯಕ್ಕೆ ಮಾರು ಹೋದ ಬ್ರಿಟಿಷರು 1830ರ ದಶಕದ ಅಂತ್ಯದಲ್ಲಿ ಮೊದಲು ಇಲ್ಲೊಂದು ಬಂಗ್ಲೆ ಕಟ್ಟಿದರು. ಅದನ್ನು ಮುಂದೆ ಓಲ್ಡ್ ಬ್ರಿಟಿಷ್ ಬಂಗ್ಲೆ ಎನ್ನಲಾಗುತ್ತಿತ್ತು.

ಅದಾಗಿ ಕೆಲವೇ ವರ್ಷಗಳಲ್ಲಿ (1942?) ಹಳೆಯ ಬಂಗ್ಲೆಯ ಮುಂದೆ ಹೊಸದೊಂದು ಬಂಗ್ಲೆ ಕಟ್ಟಿ, ಹಳೆಯ ಬಂಗ್ಲೆಯನ್ನು ಕೆಡವಲಾಯಿತು. ಈ ಹೊಸ ಬಂಗ್ಲೆಯನ್ನೇ ನಾವು ಬ್ರಿಟಿಷ್ ಬಂಗ್ಲೆ ಎಂದು ಕರೆಯುವುದು.

ಯಾಕೆಂದರೆ ಶರಾವತಿಯ ಬಲದಂಡೆ ಆಗ ಬ್ರಿಟಿಷರ ನೇರ ಆಡಳಿತದಲ್ಲಿದ್ದ ಬಾಂಬೇ ಪ್ರಾವಿನ್ಸಿಗೆ ಸೇರಿತ್ತು. ಅದಕ್ಕೇ ಇದನ್ನು ಬಾಂಬೇ ಟಿ ಬಿ, (ಬಂಗ್ಲೆ) ಎಂದೂ ಕರೆಯುತ್ತಾರೆ. 1856ರಲ್ಲಿ ಜೋಗಜಲಪಾತವನ್ನು ಅಳೆಯಲು ನಿಯೋಜಿತನಾದ ಕ್ಯಾಪ್ಟನ್ ಗ್ರೇ ತಾನು ಈ ಬಂಗ್ಲೆಯ ಬದಿಯಿಂದ ಜೋಗ ಜಲಪಾತವನ್ನು ಅಳೆದ ಬಗೆಯನ್ನು ತನ್ನ ಮಾತಿನಲ್ಲೇ ಬಲು ಸೊಗಸಾಗಿ ವರ್ಣಿಸಿದ್ದಾನೆ.

English summary
British Bungalow Near Jogfalls Is In Danger Is It true, Here are some information about British Bungalow present Situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X