ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ 1600 ಬಸ್‌ಗಳ ಮೂಲಕ ಜನರನ್ನು ಕರೆತಂದಿದ್ದ ಬಿಜೆಪಿ: ಆರ್‌ಟಿಐ
ಬೆಂಗಳೂರು, ಏಪ್ರಿಲ್ 07: ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ನೂತನ ವಿಮಾನ ನಿಲ್ದಾಣಕ್ಕೆ ನೂರಾರು ಬಸ್‌ಗಳ ಮೂಲಕ ಜನರನ್ನು ಕರೆತರಲಾಗಿತ್ತು ಎಂಬ ಸತ್ಯ ಬಹಿರಂಗೊಂಡಿದೆ.
ಹೌದು, ಫೆಬ್ರವರಿ 27 ರಂದು ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ವೇಳೆ ಭರಪೂರ ಜನರು ಸಮಾರಂಭಕ್ಕೆ ಹರಿದು ಬಂದಿದ್ದರು. ಸದ್ಯ ಅವರೆನ್ನೆಲ್ಲ ಬಿಜೆಪಿ ಪಕ್ಷವೇ ಸುಮಾರು 1600 ಬಸ್‌ಗಳಲ್ಲಿ ಕರೆ ತಂದಿರುವ ಸತ್ಯ (ಮಾಹಿತಿ ಹಕ್ಕು ಅರ್ಜಿ) ಆರ್‌ಟಿಐ ಮೂಲಕ ತಿಳಿದು ಬಂದಿದೆ.

ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆಂದೆ ಬಿಜೆಪಿಯು ಜಿಲ್ಲೆಯ ಮೂಲೆ ಮೂಲೆಗಳಿಂದ ಜನರನ್ನು ಕರೆತಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಆರ್‌ಟಿಐ ಅರ್ಜಿಗೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಬೆಂಗಳೂರು ವೈರ್ ವರದಿ ಮಾಡಿದೆ.
ಅರ್ಜಿದಾರರು ಆರ್‌ಟಿಐ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ವಿವಿಧ ಜಿಲ್ಲೆಗಳ ಜನರನ್ನು ಕರೆತರಲು ಎಷ್ಟು ಕೆಎಸ್‌ಆರ್‌ಟಿಸಿ ಬಸ್ ಬಳಸಲಾಗಿತ್ತು, ಎಷ್ಟು ಹಣ, ಎಂಬೆಲ್ಲ ಮಾಹಿತಿ ಕೋರಿ ಆರ್‌ಟಿಐ ಸಲ್ಲಿಸಿದ್ದರು.
ಒಪ್ಪಂದದ ಮೇರೆಗೆ ಬಸ್ ಬುಕ್
ಈ ಅರ್ಜಿಗೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಅಧಿಕಾರಿಗಳು ನೀಡಿದ ಉತ್ತರದಿಂದ ಸತ್ಯಾಂಶ ಬಯಲಾಗಿದೆ. ಅಧಿಕಾರಿಗಳು, ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕಾಗಿ ಜನರನ್ನು ಕರೆ ತರಲು ಕೆಎಸ್‌ಆರ್‌ಟಿಸಿ ನಿಗಮದ 1600 ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಬುಕ್ ಆಗಿದ್ದವು. ಅದಕ್ಕಾಗಿ ಶಿವಮೊಗ್ಗ ಕಾರ್ಯಪಾಲಕ ಇಂಜಿನಿಯರ್ 3.93 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮೆಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಬಹುನಿರೀಕ್ಷಿತ ವಿಮಾನ ನಿಲ್ದಾಣವನ್ನು ಬಿಜೆಪಿ ಸರ್ಕಾರ ಒಟ್ಟು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಅಂದು ಕರ್ನಾಟಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಒಟ್ಟು 3600 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ/ ಯೋಜನೆಗಳಿಗೆ ಅವರು ಚಾಲನೆ ನೀಡಿದ್ದರು.
ಹರ್ಷ ವ್ಯಕ್ತಪಡಿಸಿದ್ದ ಬಿ.ಎಸ್ ಯಡಿಯೂರಪ್ಪ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡಬೇಕೆಂಬ ಆಗ್ರಹವು ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿ.ಎಸ್ ಯಡಿಯೂರಪ್ಪ ಅವರು ತಾವೇ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಸೂಚಿಸಿದ್ದರು. ಅದರಂತೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಈ ವಿಮಾನ ನಿಲ್ದಾಣದ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ, ಬಿ.ಎಸ್.ಯಡಿಯೂರಪ್ಪ ಅವರ ಕನಸು ಕುರಿತು ಮಾತನಾಡಿದರು. ಬಳಿಕ ಯಡಿಯೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗಳು ಆಗಮಿಸಿದ್ದು ಸಂತೋಷವಾಗಿದೆ. ಈ ಹಿಂದೆಯೇ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡೋಣ ಎಂದು ಅವರು ಹೇಳಿದ್ದರು. ಅಂದು ನೀಡಿದ ಮಾತಿನಂತೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಮಲೆನಾಡಿನಲ್ಲಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುತ್ತಿರುವು ಸಂತಸ ತಂದಿದೆ ಎಂದು ಹೇಳಿದ್ದರು
ಉದ್ಘಾಟನೆಗೂ ಮುನ್ನ ಶಿವಮೊಗ್ಗ ವಿಮಾನ ನಿಲ್ದಾಣದ ಒಳಗೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಆಂಗ್ಲ ಭಾಷೆಯ ನಾಮಫಲಕಗಳನ್ನೇ ಹಾಕಲಾಗಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು.












Click it and Unblock the Notifications