Bhadra Dam: ಭದ್ರಾ ಜಲಾಶಯದ ಒಳಹರಿವು ಒಂದೇ ದಿನ 6,000 ಕ್ಯೂಸೆಕ್ ಹೆಚ್ಚಳ-ನೀರಿನ ಮಟ್ಟದ ವಿವರ ಇಲ್ಲಿದೆ
Bhadra Dam: ಇದೀಗ ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಈ ಭಾಗದಲ್ಲಿನ ಸಣ್ಣ-ಪುಟ್ಟ ಜಲಾಮೂಲಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಹಾಗಾದರೆ ಜಲಾಶಯದಲ್ಲಿ ಇಂದು (ಜೂನ್ 29) ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಮಲೆನಾಡಿನ ಚಿಕ್ಕಮಗಳೂರು & ಶಿವಮೊಗ್ಗ ಜಿಲ್ಲೆಗಳಲ್ಲಿ ಸತತವಾಗಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಭದ್ರಾ ಜಲಾಶಯದ ಒಳ ಹರಿವು 2,000-8,000 ಕ್ಯೂಸೆಕ್‌ವರೆಗೆ ದಿಢೀರ್ ಏರಿಕೆ ಆಗಿದೆ. ಇದರಿಂದ ಇಲ್ಲಿನ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿ ಆಗಿದೆ. ಇಂದಿನ (ಜೂನ್ 29) ನೀರಿನ ಮಟ್ಟ 122.3 ಅಡಿಯಷ್ಟಿದೆ. ಒಳ ಹರಿವು 8,655 ಕ್ಯೂಸೆಕ್‌ವರೆಗೂ ದಿಢೀರ್ ಏರಿಕೆಯಾಗಿದೆ. ಮಾಹಿತಿ ಇಲ್ಲಿದೆ ನೋಡಿ.
ಭದ್ರಾ ಜಲಾಶಯ ನೀರಿನ ಮಟ್ಟ
* ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
* ಗರಿಷ್ಠ : 186 ಅಡಿ
* ಇಂದಿನ ಮಟ್ಟ: 122.3 ಅಡಿ
* ಒಳ ಹರಿವು : 8,655 ಕ್ಯೂಸೆಕ್
* ಹೊರ ಹರಿವು : 345 ಕ್ಯೂಸೆಕ್
ಮೂರ್ನಾಲ್ಕು ದಿನದಿಂದ ಹಿನ್ನೀರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಜಲಾಶಯದ ಒಳ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜೂನ್ 28 ರಂದು ಡ್ಯಾಂ ಒಳ ಹರಿವು 2,276 ಕ್ಯೂಸೆಕ್ ಇದ್ದರೆ, ಇಂದು (ಜೂನ್ 29) 8 ಸಾವಿರ ಕ್ಯೂಸೆಕ್‌ವರೆಗೂ ಏರಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೂನ್ 28ರಂದು ನೀರಿನ ಮಟ್ಟದ ವಿವರ
* ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
* ಗರಿಷ್ಠ ನೀರಿನ ಮಟ್ಟ: 186 ಅಡಿ
* ಇಂದಿನ ಮಟ್ಟ: 120 ಅಡಿ
* ಒಳ ಹರಿವು: 2,276 ಕ್ಯೂಸೆಕ್
* ಹೊರ ಹರಿವು: 343 ಕ್ಯೂಸೆಕ್












Click it and Unblock the Notifications