• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಜರಂಗದಳ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಸಂತೋಷ್ ಗುರೂಜಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 08: ಈಚೆಗೆ ಶಿವಮೊಗ್ಗದಲ್ಲಿ ಬಜರಂಗದಳದ ಸಹ ಸಂಚಾಲಕ ನಾಗೇಶ್ ಮೇಲೆ ಹಲ್ಲೆ ನಡೆದಿದ್ದು, ಮಂಗಳವಾರ ಬೆಜ್ಜವಳ್ಳಿ ಸಂತೋಷ ಗುರೂಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಡಿ.3ರಂದು ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲೆ ಹಲ್ಲೆ ನಡೆದಿತ್ತು. ಈ ಕುರಿತು ಕೋಮುಗಲಭೆ ಉಂಟಾಗಿದ್ದು, ಜಿಲ್ಲೆಯಲ್ಲಿ ಡಿ.7ರವರೆಗೂ ನಿಷೇಧಾಜ್ಞೆ ಹೇರಲಾಗಿತ್ತು. ಮಂಗಳವಾರ ಸಂತೋಷ್ ಗುರೂಜಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಆರೋಗ್ಯ ವಿಚಾರಿಸಿದರು.

ಶಿವಮೊಗ್ಗದಲ್ಲಿ ಕೋಮು ಗಲಭೆ; ಆಸ್ಪತ್ರೆಗೆ ಸಂಸದ, ಸಚಿವರ ಭೇಟಿಶಿವಮೊಗ್ಗದಲ್ಲಿ ಕೋಮು ಗಲಭೆ; ಆಸ್ಪತ್ರೆಗೆ ಸಂಸದ, ಸಚಿವರ ಭೇಟಿ

ಈ ಸಂದರ್ಭ ಮಾತನಾಡಿದ ಅವರು, "ದೇಶದ ಹೊರಗಿನ ಶತ್ರುಗಳನ್ನು, ಉಗ್ರರನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಆಂತರಿಕ ಉಗ್ರವಾದ ಹೆಚ್ಚಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ" ಎಂದರು.


ಬೆಂಗಳೂರಿನಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ ಘಟನೆಗಳನ್ನು ನೋಡಿದ್ದೇವೆ. ಆದರೆ ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಮಲೆನಾಡಿನ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಪರ್ಯಾಸ. ಕೇಂದ್ರ ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರದಲ್ಲಿದ್ದು, ಕೇಸರಿ ಶಾಸಕರು ಸಂಸದರು ಇರುವ ಜಿಲ್ಲೆಯಲ್ಲಿ ಈ ತರಹದ ಪುಂಡಾಟಿಕೆ ನಡೆಯುತ್ತದೆ ಎಂದರೆ ಯಾರಿಗೂ ಹೆದರಿಕೆ ಇಲ್ಲ ಎಂದರ್ಥ ಎಂದರು.

ಈ ಒಂದು‌ ಘಟನೆ ಸಮಾಜ ತಲೆ‌ ತಗ್ಗಿಸುವಂತೆ ಮಾಡಿದೆ. ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದರು.

English summary
Bejjavalli santosh guruji visited hospital and inquired abotu bajarangadal activist nagesh health, who was assaulted recently in shivamogga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X