ಭದ್ರಾ ನದಿಯ ತಡೆಗೋಡೆ ಕುಸಿತ ಜನರಲ್ಲಿ ಸೃಷ್ಟಿಸಿದೆ ಆತಂಕ

ಶಿವಮೊಗ್ಗ, ಆಗಸ್ಟ್.16: ಭದ್ರಾ ನದಿಯ ತಡೆಗೋಡೆ ಕುಸಿದು ಇದೀಗ ಭಾರೀ ಅತಂಕ ಸೃಷ್ಟಿಯಾಗಿದೆ. ಭದ್ರಾ ಜಲಾಶಯದಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ.

ತಡೆಗೋಡೆ ಕುಸಿದ ವಿಚಾರ ತಿಳಿಯುತ್ತಿದ್ದಂತೆ, ನೀರಾವರಿ ಇಲಾಖೆ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ತಡೆಕೋಡೆ ಕುಸಿದ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Barrier of the Bhadra river has collapsed

ತಡೆಗೋಡೆ ಕುಸಿದಿರುವುದರಿಂದ, ಭದ್ರಾ ಜಲಾಶಯದ ಮುಂಭಾಗದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೂ ಕಂಟಕವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಭದ್ರಾ ಅಣೆಕಟ್ಟೆಗೆ ಸಂಜೆ ವೇಳೆ ಸುಮಾರು 45 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಷ್ಟೇ ಪ್ರಮಾಣದ ನೀರನ್ನು ಸಹ ಹೊರ ಬಿಡಲಾಗುತ್ತಿದೆ.

Barrier of the Bhadra river has collapsed

ಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಕಳೆದೆರಡು ದಿನದಿಂದ ಗಂಟೆ ಗಂಟೆಗೂ, ನೀರಿನ ಒಳಹರಿವು ಮತ್ತು ಹೊರಹರಿವಿನಲ್ಲಿ ಏರಿಕೆ ಆಗುತ್ತಿದೆ. ನೀರಿನ ರಭಸ ಮತ್ತು ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+