Arecanut Price Today: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ?: ಇಲ್ಲಿದೆ ಫೆಬ್ರವರಿ 27ರ ದರಪಟ್ಟಿ
Arecanut Price: ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿದೆ. ಹಾಗಾದ್ರೆ, ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು (ಫೆಬ್ರವರಿ 27) ಯಾವ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ. ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕು ಎಂದು ನಿರ್ಧರಿಸುತ್ತಾರೆ. ಯಾಕಂದ್ರೆ, ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ, ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ. ಹಾಗಾದ್ರೆ ಇಂದು ಎಲ್ಲಿ ಹಾಗೂ ಯಾವ ಅಡಿಕೆ ದಾರಣೆ ಎಷ್ಟಿದೆ ಎಂದು ಇಲ್ಲಿ ಕಣ್ಣಾಡಿಸಿ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 61,500 ರೂಪಾಯಿ
* ಗರಿಷ್ಠ - 95,050 ರೂಪಾಯಿ
ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 54,119 ರೂಪಾಯಿ
* ಗರಿಷ್ಠ - 65,609 ರೂಪಾಯಿ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 48,199 ರೂಪಾಯಿ
* ಗರಿಷ್ಠ - 56,359 ರೂಪಾಯಿ
ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 20,199 ರೂಪಾಯಿ
* ಗರಿಷ್ಠ - 39,599 ರೂಪಾಯಿ
ಭದ್ರಾವತಿಯಲ್ಲಿ ಚೂರು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 11,600 ರೂಪಾಯಿ
* ಗರಿಷ್ಠ - 20,000 ರೂಪಾಯಿ
ಭದ್ರಾವತಿಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 11,000 ರೂಪಾಯಿ
* ಗರಿಷ್ಠ - 11,000 ರೂಪಾಯಿ
ಫೆಬ್ರವರಿ 26ರಂದು ದರ ಎಲ್ಲೆಲ್ಲಿ ಎಷ್ಟಿದೆ?
ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 57,700 ರೂಪಾಯಿ
* ಗರಿಷ್ಠ - 95,310 ರೂಪಾಯಿ
ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,810 ರೂಪಾಯಿ
* ಗರಿಷ್ಠ - 6,6200 ರೂಪಾಯಿ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 48,109 ರೂಪಾಯಿ
* ಗರಿಷ್ಠ - 58,109 ರೂಪಾಯಿ
ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 19,900 ರೂಪಾಯಿ
* ಗರಿಷ್ಠ - 43,069 ರೂಪಾಯಿ
ಭದ್ರಾವತಿಯಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 27,700 ರೂಪಾಯಿ
* ಗರಿಷ್ಠ - 27,778 ರೂಪಾಯಿ
ಭದ್ರಾವತಿಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 11,000 ರೂಪಾಯಿ
* ಗರಿಷ್ಠ - 13,000 ರೂಪಾಯಿ
ಇನ್ನೇನು ಇದೀಗ ಬೇಸಿಗೆ ಆರಂಭದ ಸಮಯವಾಗಿದ್ದು, ಗಿಡಗಳನ್ನು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ರಕ್ಷಣೆ ದಾರಿಯನ್ನು ಕಂಡುಕೊಂಡಿದ್ದು, ಪ್ರತಿ ಗಿಡಕ್ಕೂ ಸುಣ್ಣ ಬಳಿದು ಗರಿ ಕಟ್ಟುವ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲದಿದ್ದರೆ, ಸೂರ್ಯನ ಶಾಖಕ್ಕೆ ಬುಡದಲ್ಲಿ ಬಿರುಕು ಬಿಟ್ಟು ಹಾಳಾಗುವ ಸಾಧ್ಯತೆ ಇರುತ್ತದೆ.












Click it and Unblock the Notifications