Arecanut Price: ಶಿವಮೊಗ್ಗ ಜಿಲ್ಲೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಬರೋಬ್ಬರಿ 97,440 ರೂಪಾಯಿ
Arecanut Price: ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿದೆ. ಹಾಗಾದ್ರೆ, ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು (ಫೆಬ್ರವರಿ 20) ಯಾವ ಅಡಿಕೆ ಎಷ್ಟು ಧಾರಣೆ (ಕ್ವಿಂಟಾಲ್‌ಗಳಲ್ಲಿ) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ. ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕು ಎಂದು ನಿರ್ಧರಿಸುತ್ತಾರೆ. ಯಾಕಂದ್ರೆ, ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ, ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 52,059 ರೂಪಾಯಿ
* ಗರಿಷ್ಠ - 97,440 ರೂಪಾಯಿ
ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 54,579 ರೂಪಾಯಿ
* ಗರಿಷ್ಠ - 66,369 ರೂಪಾಯಿ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 48,099 ರೂಪಾಯಿ
* ಗರಿಷ್ಠ - 56,559 ರೂಪಾಯಿ
ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 20,009 ರೂಪಾಯಿ
* ಗರಿಷ್ಠ - 42,069 ರೂಪಾಯಿ
ಭದ್ರಾವತಿಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 11,000 ರೂಪಾಯಿ
* ಗರಿಷ್ಠ - 13,000 ರೂಪಾಯಿ
ಶಿಕಾರಿಪುರದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 35,800 ರೂಪಾಯಿ
* ಗರಿಷ್ಠ - 54,819 ರೂಪಾಯಿ
ಸಾಗರದಲ್ಲಿ ಕೆಂಪುಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 17,229 ರೂಪಾಯಿ
* ಗರಿಷ್ಠ - 41,469 ರೂಪಾಯಿ
ಸಾಗರದಲ್ಲಿ ಕೋಕ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 14,199 ರೂಪಾಯಿ
* ಗರಿಷ್ಠ - 35,399 ರೂಪಾಯಿ
ಸಾಗರದಲ್ಲಿ ಚಾಲಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 22,129 ರೂಪಾಯಿ
* ಗರಿಷ್ಠ - 45,332 ರೂಪಾಯಿ
ಸಾಗರದಲ್ಲಿ ಬಿಳೆ ಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 20,527 ರೂಪಾಯಿ
* ಗರಿಷ್ಠ - 35,399 ರೂಪಾಯಿ
ಸಾಗರದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 40,599 ರೂಪಾಯಿ
* ಗರಿಷ್ಠ - 56,199 ರೂಪಾಯಿ
ಸಾಗರದಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 10,202 ರೂಪಾಯಿ
* ಗರಿಷ್ಠ - 24,600 ರೂಪಾಯಿ
ಒಟ್ಟಿನಲ್ಲಿ ಹೇಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲವೆಡೆ ಅಡಿಕೆ ಧಾರಣೆ ಇಳಿಕೆಯತ್ತ ಹೊರಟಿದ್ದು, ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಏರಿಕೆಯತ್ತ ಸಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ. ಇನ್ನೇನು ಇದೀಗ ಬೇಸಿಗೆ ಆರಂಭದ ಸಮಯವಾಗಿದ್ದು, ಗಿಡಗಳನ್ನು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ದಾರಿಯನ್ನು ಕಂಡುಕೊಂಡಿದ್ದು, ಪ್ರತಿ ಗಿಡಕ್ಕೂ ಸುಣ್ಣ ಬಳಿದು ಗರಿ ಕಟ್ಟುವ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲದಿದ್ದರೆ, ಸೂರ್ಯನ ಶಾಖಕ್ಕೆ ಬುಡದಲ್ಲಿ ಬಿರುಕು ಬಿಡುವ ಸಾಧ್ಯತೆ ಇರುತ್ತದೆ.












Click it and Unblock the Notifications