ಶಿವಮೊಗ್ಗ; ಬೈಪಾಸ್ ನಲ್ಲಿ ವಾಹನ ದಟ್ಟಣೆ ತಪ್ಪಿಸಲು ಮತ್ತೊಂದು ನೂತನ ಸೇತುವೆ ನಿರ್ಮಾಣ

ಶಿವಮೊಗ್ಗ, ಸೆಪ್ಟೆಂಬರ್ 30: ನಗರದ ಬೈಪಾಸ್ ರಸ್ತೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಈಗಿರುವ ಹೊಸ ಸೇತುವೆ ಪಕ್ಕದಲ್ಲಿ ಮತ್ತೊಂದು ನೂತನ ಸೇತುವೆ ನಿರ್ಮಾಣವಾಗಲಿದ್ದು, ಶೀಘ್ರವೇ ಅದರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಬೈಪಾಸ್ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ಮಾಡಲಾಗಿದ್ದು, ವಾಹನ ದಟ್ಟಣೆ ತಪ್ಪಿಸಲು ಹಾಲಿ ಇರುವ ಸೇತುವೆ ಪಕ್ಕದಲ್ಲಿ ಮತ್ತೊಂದು ದ್ವಿಪಥದ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 35 ಕೋಟಿ ರೂ.ಗಳ ಕಾಮಗಾರಿಯ ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡಿದ್ದು ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

Shivamogga: Another New Bridge Construction To Avoid Traffic Congestion In Bypass

ನೂತನ ಸೇತುವೆಯ ವಿವರ ಹೀಗಿದೆ:
ಸೇತುವೆಯ ಓಟ್ಟು ಉದ್ದ ರಸ್ತೆ ಸೇರಿದಂತೆ-290 ಮೀಟರ್
ಸೇತುವೆಯ ಕಟ್ಟಡದ ಉದ್ದ-272 ಮೀಟರ್
ಆರ್‌ಸಿಸಿ ಗರ್ಡರ್ ಸೇತುವೆ
ತಳಪಾಯ ಓಪನ್ ಫೌಂಡೇಷನ್
16 ಸಂಖ್ಯೆಯ 17 ಮೀಟರ್ ಸ್ಪಾನ್‌ನ ಪಿಲ್ಲರ್ ಗಳು
ನದಿಯ ತಳದ ಅಗಲ 200 ಮೀಟರ್ ನದಿಯಲ್ಲಿ ನೀರಿನ ಹರಿವು 4883 ಕ್ಯುಮೆಕ್ಸ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+