ರಾಜ್ಯದಲ್ಲಿ ಅಮಿತ್ ಶಾ ಮಿಂಚು, ರಾಘವೇಂದ್ರ ಪರ ಪ್ರಚಾರ rally
ಶಿವಮೊಗ್ಗ, ಏಪ್ರಿಲ್ 20: ನಿನ್ನೆ ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಚುಟುಕು ರೋಡ್ ಶೋ ನಡೆಸಿ ಇದೀಗ ಶಿವಮೊಗ್ಗಕ್ಕೆ ತೆರಳುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವಮೊಗ್ಗದ ಭದ್ರಾವತಿಯಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಅವರಿಗೆ ಅಬ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೊತೆಯಾಗಲಿದ್ದಾರೆ.
ಶಿವಮೊಗ್ಗದಲ್ಲಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅಖಾಡ ಪ್ರವೇಶ ಮಾಡಿದ್ದು, ಅವರಿಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಬೆಂಬಲ ನೀಡಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಹುಟ್ಟಿಸಿದೆ. ಹಾಗಾಗಿ ಅಮಿತ್ ಶಾ ಅವರ ಸ್ಟಾರ್ ಪ್ರಚಾರವನ್ನು ಕರೆತರಲಾಗಿದೆ.

ಮೊನ್ನೆಯಷ್ಟೆ ಮೋದಿ ಅವರು ಬಾಗಲಕೋಟೆ, ಚಿಕ್ಕೋಡಿಗಳಲ್ಲಿ ಭಾರಿ ಸಮಾವೇಶಗಳಲ್ಲಿ ಪಾಲ್ಗೊಂಡು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪರ ರಣಕಹಳೆ ಊದಿದ್ದಾರೆ. ಅದನ್ನು ಮುಂದುವರೆಸಲು ಅಮಿತ್ ಶಾ ಆಗಮಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರಚಾರ rally ಮುಗಿಸಿ ಅಮಿತ್ ಶಾ ಅವರು ಕೇರಳಕ್ಕೆ ತೆರಳಲಿದ್ದು, ಅಲ್ಲಿ ಅಲಪುಳ್ಳ ಮತ್ತು ಪಟ್ಟನಮತ್ತಿಟ್ಟ ದಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿ ನಡುವೆ ಜಿದ್ದಾ-ಜಿದ್ದಿನ ಕಣ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದರೆ, ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಅವರು ಸ್ಪರ್ಧಿಸಿದ್ದಾರೆ.












Click it and Unblock the Notifications