ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ; ಮೊದಲ ದಿನ ಭೇಟಿ ಕೊಟ್ಟವರೆಷ್ಟು?
ಶಿವಮೊಗ್ಗ,
ಜೂನ್ 29: ಕೋವಿಡ್ ಲಾಕ್‌ಡೌನ್, ವಾರಾಂತ್ಯದ ಕರ್ಫ್ಯೂ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಪ್ರವಾಸಿ ತಾಣಗಳತ್ತ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದೆ. id="toptextpromo"> id='are-slot-1' class='oiad oi-axt oiadv'>ವಿಶ್ವವಿಖ್ಯಾತ
ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತವಾಗಿದ್ದು, ಮೊದಲ ದಿನ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಜೋಗಕ್ಕೆ ಬಂದಿದ್ದರು. ರಾಜ, ರಾಣಿ, ರೊರರ್, ರಾಕೆಟ್ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. ಜೋಗ ಜಲಪಾತ ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಈಗ ಕೋವಿಡ್ ಸೋಂಕಿನ ಕಾರಣ ರಾಜ್ಯ ಸರ್ಕಾರ ವಿಧಿಸಿರುವ ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕಿದೆ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಆಗಾಗ ಸೂಚನೆಯನ್ನು ನೀಡಲಾಗುತ್ತಿದೆ. id='are-slot-2' class='oiad oi-axt oiadv'>
ಜೋಗಕ್ಕೆ ದೂರದೂರುಗಳಿಂದ ಪ್ರವಾಸಿಗರು
ಮೊದಲ ದಿನ 991 ಪ್ರವಾಸಿಗರು ಜೋಗ ಜಲಪಾತಕ್ಕೆ ಭೇಟಿ ಕೊಟ್ಟಿದ್ದಾರೆ. 150 ವಾಹನಗಳು ಜೋಗದ ಗೇಟಿನೊಳಗೆ ಪ್ರವೇಶ ಪಡೆದಿದ್ದವು. ಹಾಗಾಗಿ ಸೋಮವಾರ ಒಂದೆ ದಿನ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ 20 ಸಾವಿರದಷ್ಟು ಆದಾಯ ಬಂದಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಜೋಗ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ.

ತ್ಯಾವರೇಕೊಪ್ಪ ಸಫಾರಿ ಓಪನ್
ತ್ಯಾವರೇಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸೋಮವಾರ 206 ಮಂದಿ ಭೇಟಿ ಕೊಟ್ಟಿದ್ದರು. ಎರಡು ತಿಂಗಳು ಲಾಕ್‌ಡೌನ್ ಇದ್ದಿದ್ದರಿಂದ ತ್ಯಾವರೇಕೊಪ್ಪ ಸಿಂಹಧಾಮವು ಬಂದ್ ಆಗಿತ್ತು. ಹಲವು ಪ್ರಾಣಿ, ಪಕ್ಷಿಗಳನ್ನು ಒಟ್ಟಿಗೆ ಕಾಣಲು ಅವಕಾಶವಿರುವುದರಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಮಂಗಳವಾರ ಸಿಂಹಧಾಮಕ್ಕೆ ರಜೆ ಇರುತ್ತಿತ್ತು. ಆದರೆ ವೀಕೆಂಡ್ ಕರ್ಫ್ಯೂ ಮುಗಿಯುವವರೆಗೆ ಮಂಗಳವಾರದ ರಜೆಯನ್ನು ನಿರ್ಬಂಧಿಸಲಾಗಿದೆ. ಪ್ರತಿ ಮಂಗಳವಾರವು ಸಿಂಹಧಾಮ ಪ್ರವಾಸಿಗರಿಗೆ ಮುಕ್ತವಿರಲಿದೆ.

ರಾಷ್ಟ್ರಕವಿ ಮನೆಗೆ ನೂರು ಮಂದಿ
ಸೋಮವಾರದಿಂದ ತೀರ್ಥಹಳ್ಳಿಯ ಕುಪ್ಪಳಿಯ ಕವಿಮನೆ, ಕವಿಶೈಲವೂ ಪ್ರವಾಸಿಗರಿಗೆ ಮುಕ್ತವಾಗಿದೆ. ಕುಪ್ಪಳಿ ಕವಿಮನೆಗೆ ಮೊದಲ ದಿನ 100 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಇದರ ಜೊತೆಗೆ ತೀರ್ಥಹಳ್ಳಿಯ ಆಗುಂಬೆ, ಕುಂದಾದ್ರಿ ಬೆಟ್ಟಕ್ಕೂ ಪ್ರವಾಸಿಗರು ಆಗಮಿಸಿದ್ದರು. ಆದರೆ ಟೂರಿಸ್ಟ್‌ಗಳ ಸಂಖ್ಯೆ ಕಡಿಮೆ ಎಂದು ಅಂದಾಜಿಸಲಾಗಿದೆ.

ವೀಕೆಂಡ್‌ನಲ್ಲಿ ಎಲ್ಲವೂ ಬಂದ್
"ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವೂ ಬಂದ್ ಆಗಲಿವೆ. ಸರ್ಕಾರದ ಸೂಚನೆ ಮೇರೆಗೆ ಜೋಗ ಸೇರಿದಂತೆ ಎಲ್ಲ ಟೂರಿಸ್ಟ್ ಸ್ಪಾಟ್‌ಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗುತ್ತದೆ,'' ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications