Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಿಜಿಸಿಎಯಿಂದ 20 ಲಕ್ಷ ದಂಡ!
ಶಿವಮೊಗ್ಗ ಅಕ್ಟೋಬರ್ 1: ಶಿವಮೊಗ್ಗ ಏರ್‌ಪೋರ್ಟ್ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಐಐಡಿಸಿ) ನಾಗರಿಕ ವಿಮಾಯಾನ ನಿರ್ದೇಶನಾಲಯ (ಡಿಜಿಸಿಎ) ದಂಡ ವಿಧಿಸಿದೆ. ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣ ಆಗಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ದಂಡ ವಿಧಿಸಲಾಗಿದೆ.
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಡಿಜಿಸಿಎ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ. ಜುಲೈ ತಿಂಗಳಲ್ಲಿ ಡಿಜಿಸಿಎ ಅಧಿಕಾರಿಗಳು ತಪಾಸಣೆಗೆ ಆಗಮಿಸಿದ್ದರು. ಈ ವೇಳೆ ರನ್ ವೇ ಸೇರಿದಂತೆ ಅನೇಕ ಸುರಕ್ಷತೆ ಕ್ರಮಗಳನ್ನು ಅನುಸರಿಸದೇ ಇರುವುದು ಕಂಡು ಬಂದಿದೆ. ತಪಾಸಣೆ ಬಳಿಕ ಡಿಜಿಸಿಎ ಅಧಿಕಾರಿಗಳು ನ್ಯೂನತೆ ಕುರಿತು ಉತ್ತರ ನೀಡುವಂತೆ ಆಗಸ್ಟ್ 1ರಂದು ನೋಟಿಸ್ ನೀಡಿದ್ದರು.

ನೋಟೀಸ್‌ಗೆ ಉತ್ತರಿಸದ ಬೆನ್ನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸೂಕ್ತವಾದ ರೀತಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಕೆಎಸ್‌ಐಐಡಿಸಿಗೆ ಡಿಜಿಸಿಎ ಅಧಿಕಾರಿಗಳು ದಂಡ ಹಾಕಿದ್ದಾರೆ. 30 ದಿನದೊಳಗೆ ದಂಡ ಪಾವತಿಸುವಂತೆ ಸೂಚನೆ ಕೂಡ ನೀಡಲಾಗಿದೆ.
ವಿಮಾನ ನಿಲ್ದಾಣದ ಪರವಾನಗಿಯನ್ನು ನಾಗರಿಕ ವಿಮಾಯಾನ ನಿರ್ದೇಶನಾಲಯ (ಡಿಜಿಸಿಎ) ಇನ್ನೊಂದು ತಿಂಗಳು ನಿಸ್ತರಣೆ ಮಾಡಿದೆ. ನಿಲ್ದಾಣದಲ್ಲಿ ಕೆಲ ಮೂಲಸೌಕರ್ಯಗಳ ಕೊರತೆ ಇರುವುದನ್ನು ಡಿಜಿಸಿಎ ಸೆ.23ರವರೆಗೆ ವಿಮಾನಗಳ ಹಾರಾಟಕ್ಕೆ ಅವಕಾಶವನ್ನು ನೀಡಿತ್ತು. ಅದನ್ನು ಒಂದು ತಿಂಗಳವರೆಗೆ ವಿಸ್ತರಣೆ ಮಾಡಿದೆ.
ಸ್ಪೈಸ್‌ಜೆಟ್ ಸೇವೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸಂಸ್ಥೆ ಎರಡು ನಗರಗಳಿಗೆ ಸಂಪರ್ಕ ಕಲ್ಪಿಸುವುದು ದೃಢಪಟ್ಟಿದ್ದು, 20 ದಿನ ಮೊದಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯು ಚೆನೈ ಮತ್ತು ಹೈದರಾಬಾದ್ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುತ್ತಿದೆ. ಹೊಸ ವಿಮಾನದ ಸಂಚಾರವು ಅಕ್ಟೋಬರ್ 10ರಿಂದ ಪ್ರಾರಂಭವಾಗಲಿದೆ. ಒಂದೇ ವಿಮಾನವು ಎರಡು ನಗರಗಳಿಗೆ ಸಂಪರ್ಕ ಸಾಧಿಸಲಿದೆ. ಇದರ ಪ್ರಯಾಣ ದರ 4,123 ರೂಪಾಯಿಯಿಂದ ಆರಂಭವಾಗಲಿದೆ. ಇನ್ನೂ ಶಿವಮೊಗ್ಗ-ಹೈದರಾಬಾದ್ ನಡುವಿನ ಪ್ರಯಾಣ ದರ 2,299 ರೂಪಾಯಿ ಇದೆ.
'ವಿಮಾನ ಹಾರಾಟಕ್ಕೆ ಡಿಜಿಸಿಎ ಕೇವಲ ಒಂದು ತಿಂಗಳಿಗೆ ಪರವಾನಗಿ ನವೀಕರಣ ಮಾಡಿರುವುದು ನಿಜ. ಅದು ನಿಗದಿಪಡಿಸಿರುವ ಮಾನದಂಡದ ಅನ್ವಯ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಹಾಗೂ ಭದ್ರತಾ ಸವಲತ್ತುಗಳನ್ನು ಕಲ್ಪಿಸುವಂತೆ ಮೂಲಸೌಕರ್ಯ ಅಭಿವರದ್ಧಿ ಇಲಾಖೆಯ ಕಾರ್ಯದರ್ಶಿಯನ್ನು ಈತ್ತೀಚೆಗೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರು ಸಮಸ್ಯೆ ಪರಿಹರಿಸಲು ಮುಂದಾಗುವ ವಿಶ್ವಾಸವಿದೆ' ಎಮದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪರವಾನಗಿ ವಿಸ್ತರಣೆಗೆ ಡಿಜಿಸಿಎ ಗಮನಿಸಿದ ಸಮಸ್ಯೆಗಳು ಚಿಕ್ಕದಾಗಿವೆ. ಅದಕ್ಕೆ ಬಹಳ ಹಣ ವ್ಯಯಿಸಬೇಕಿಲ್ಲ. ಕೆಎಸ್‌ಐಐಡಿಸಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದಲ್ಲಿ ಸಮಸ್ಯೆ ಈ ಹಂತದಲ್ಲಿಯೇ ಪರಿಹಾರವಾಗಲಿದೆ. ನಿರ್ಲಕ್ಷ್ಯ ವಹಿಸುವುದು ಸಲ್ಲ ಎಂದು ಹೇಳಿದರು.












Click it and Unblock the Notifications