ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಾಲಿ ಫೋಗಟ್ ಶವಪರೀಕ್ಷೆಯಲ್ಲಿ ಗಾಯದ ಗುರುತು: ಇಬ್ಬರು ಸಹಾಯಕರ ಬಂಧನ

|
Google Oneindia Kannada News

ರಾಂಚಿ, ಆಗಸ್ಟ್ 26: ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ದೇಹದ ಮೇಲೆ "ದೇಹದ ಮೇಲೆ ಬಲವಾದ ಪೆಟ್ಟುಗಳು" ಇವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಪಡಿಸಿದ ನಂತರ ಅವರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗೋವಾ ಪೊಲೀಸರು ಅವರ ಇಬ್ಬರು ಸಹಾಯಕರನ್ನು ಗುರುವಾರ ಬಂಧಿಸಿದ್ದಾರೆ.

ಫೋಗಟ್ ಸಾವಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಸಹಚರರು ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ. ಫೋಗಟ್ ಅವರ ಸಹೋದರ ರಿಂಕು ಧಾಕಾ ಅವರು ಬುಧವಾರ ಅಂಜುನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಇಬ್ಬರೂ ಆರೋಪಿಗಳನ್ನು ಹೆಸರಿಸಿದ್ದಾರೆ. ಆಗಸ್ಟ್ 22 ರಂದು ಫೋಗಟ್ ಗೋವಾಕ್ಕೆ ಆಗಮಿಸಿದಾಗ ಸಗ್ವಾನ್ ಮತ್ತು ವಾಸಿ ಅವರ ಜೊತೆಗಿದ್ದರು. ಪೋಗಟ್ ತಂಗಿದ್ದ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಗ್ವಾನ್ ಮತ್ತು ವಾಸಿ ಅವರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋವಾದಿಂದ ಹಿಸಾರ್ ತಲುಪಲಿದೆ ಪಾರ್ಥಿವ ಶರೀರ

ಗೋವಾದಿಂದ ಹಿಸಾರ್ ತಲುಪಲಿದೆ ಪಾರ್ಥಿವ ಶರೀರ

ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸರು ಇದೀಗ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆಗಸ್ಟ್ 25ರಂದು ಸೋನಾಲಿಯ ಮೃತದೇಹವನ್ನು ಆಕೆಯ ಸಹೋದರನಿಗೆ ಹಸ್ತಾಂತರಿಸಲಾಗಿತ್ತು. ಮೃತದೇಹವನ್ನು ಆಗಸ್ಟ್ 26 ರಂದು ಫೋಗಟ್‌ನ ಹಿಸಾಲ್‌ನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ಬಿಜೆಪಿ ನಾಯಕಿ ಅಥವಾ ಬಿಗ್ ಬಾಸ್ 14 ಖ್ಯಾತಿಯ ಸೋನಾಲಿ ಫೋಗಟ್ ಅವರ ಸಹೋದರ ಗೋವಾದಿಂದ ರಾತ್ರಿ 7.15 ಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಹರಿಯಾಣದ ಹಿಸಾರ್ ತಲುಪಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಇಂದು ಆಗಸ್ಟ್ 26 ಹಿಸಾರ್‌ನಲ್ಲಿರುವ ಅವರ ತೋಟದ ಮನೆಯಲ್ಲಿ ನೆರವೇರಿಸಲಾಗುವುದು.

ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ

ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ

ಸೋನಾಲಿ ಫೋಗಟ್ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಹರಿಯಾಣ ಸಿಎಂ ಎಂಎಲ್ ಖಟ್ಟರ್, 'ನಾನು ಗೋವಾ ಸಿಎಂ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆತನ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ. ಒಳಾಂಗಗಳ ಮಾದರಿಗಳನ್ನು ಪರೀಕ್ಷಿಸಲಾಗುವುದು. ಸೋನಾಲಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಕೆಯ ಕುಟುಂಬದವರು ಒತ್ತಾಯಿಸಿದ್ದಾರೆ. ಕುಟುಂಬದವರ ಬೇಡಿಕೆಯನ್ನು ನಾವು ಈಡೇರಿಸುತ್ತೇವೆ, ಅವರ ಬೇಡಿಕೆಯನ್ನು ಲಿಖಿತವಾಗಿ ನಮಗೆ ನೀಡಿದರೆ, ನಂತರ ನಾವು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ' ಎಂದು ಹೇಳಿದರು.

ಆಗಸ್ಟ್ 22 ರಂದು ಗೋವಾಗೆ ಪ್ರಯಾಣ

ಆಗಸ್ಟ್ 22 ರಂದು ಗೋವಾಗೆ ಪ್ರಯಾಣ

ಸೋನಾಲಿ ಫೋಗಟ್ ಆಗಸ್ಟ್ 23 ರಂದು ಕೊನೆಯುಸಿರೆಳೆದರು. ಅವರು ಗೋವಾದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಸೋನಾಲಿ ತನ್ನ ಕೆಲವು ಸಿಬ್ಬಂದಿಯೊಂದಿಗೆ ಆಗಸ್ಟ್ 22 ರಂದು ಗೋವಾಗೆ ಪ್ರಯಾಣ ಬೆಳೆಸಿದ್ದರು. ನಟಿ ಆಗಸ್ಟ್ 24 ರವರೆಗೆ ಅಲ್ಲಿಯೇ ಇರಬೇಕಿತ್ತು. ಆಗಸ್ಟ್ 22 ರ ರಾತ್ರಿ ಪಾರ್ಟಿಗೆ ಹೋಗಿದ್ದರು ಮತ್ತು ಮರುದಿನ ಮನೆಗೆ ಮರಳಿದರು. ಗಂಟೆಗಳ ನಂತರ, ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಸಿಬ್ಬಂದಿ ವಿರುದ್ಧ ದೂರು

ಸಿಬ್ಬಂದಿ ವಿರುದ್ಧ ದೂರು

ನಟಿಯ ಸಹೋದರ ರಿಂಕು ಢಾಕಾ ನೀಡಿರುವ ದೂರಿನಲ್ಲಿ, ಆಗಸ್ಟ್ 23 ರಂದು ಸಾಯುವ ಕೆಲವು ಗಂಟೆಗಳ ಮೊದಲು ಫೋಗಟ್ ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು ಎಂದು ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ ಸೋನಾಲಿ ತನ್ನ ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು ಎಂದು ಅವರು ಹೇಳಿದ್ದಾರೆ. "ಸಾಂಗ್ವಾನ್ ತನಗೆ ಕೆಲವು ಅಮಲು ಪದಾರ್ಥಗಳನ್ನು ಬೆರೆಸಿದ ಆಹಾರವನ್ನು ನೀಡಿದ್ದಾನೆ, ತನ್ನ ಮೇಲೆ ಅತ್ಯಾಚಾರ ಮತ್ತು ವಿಡಿಯೋವನ್ನು ಮಾಡಿದ್ದಾನೆ. ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಅವಳು (ಸೋನಾಲಿ) ಹೇಳಿದ್ದಾಳೆ" ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.

ಫೋನ್ ಕರೆಯಲ್ಲಿ ಸೊನಾಲಿ ಹೇಳಿದ್ದೇನು?

ಫೋನ್ ಕರೆಯಲ್ಲಿ ಸೊನಾಲಿ ಹೇಳಿದ್ದೇನು?

ಕುಟುಂಬಸ್ಥರೊಂದಿಗೆ ಫೋನ್ ಕರೆಯಲ್ಲಿ ಮಾತನಾಡುವಾಗ ಸೋನಾಲಿ ಅವರ ರಾಜಕೀಯ ಮತ್ತು ನಟನಾ ವೃತ್ತಿಯನ್ನು ನಾಶಪಡಿಸುವುದಾಗಿ ಸಾಂಗ್ವಾನ್ ಬೆದರಿಕೆ ಹಾಕಿದ್ದಾರೆ. ಆಕೆಯ ಫೋನ್‌ಗಳು, ಆಸ್ತಿ ದಾಖಲೆಗಳು, ಎಟಿಎಂ ಕಾರ್ಡ್‌ಗಳು ಮತ್ತು ಮನೆಯ ಕೀಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ಹರಿಯಾಣ ಬಿಜೆಪಿ ನಾಯಕಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಿದ್ದ ನಟಿ ಸೋನಾಲಿ ಫೋಗಟ್ ಅವರನ್ನು ಸೋಮವಾರ ತಡರಾತ್ರಿ ಗೋವಾದ ಆಸ್ಪತ್ರೆಗೆ ಕರೆದೊಯ್ದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಪ್ರಾಥಮಿಕ ವರದಿಗಳು ಸೋನಾಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ. ಆದರೆ, ಅವರ ಕುಟುಂಬ ಸದಸ್ಯರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದರು. 'ನನ್ನ ತಾಯಿಗೆ ನ್ಯಾಯ ಸಿಗಬೇಕು' ಎಂದ ಸೋನಾಲಿ ಫೋಗಟ್ ಅವರ 15 ವರ್ಷದ ಮಗಳು ಕೂಡ ಆಗ್ರಹಿಸಿದ್ದರು. ಸೋನಾಲಿ ಕಳೆದ 15 ವರ್ಷಗಳಿಂದ ಬಿಜೆಪಿ ನಾಯಕಿಯಾಗಿದ್ದರು. ಆಕೆಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವಂತೆ ನಾವು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಆಕೆಯ ಸಹೋದರ ಹೇಳಿದರು.

English summary
Goa police on Thursday arrested two of Haryana BJP leader Sonali Phogat's aides for their alleged involvement in her murder after a post-mortem revealed that she had "multiple blunt force injuries" on her body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X