Breaking: ಸಿಬಿಐ ಅಧಿಕಾರಿಗಳು ಎಂದು 35 ಲಕ್ಷ ದೋಚಿದ ದರೋಡೆಕೋರರು

ರಾಂಚಿ, ಆಗಸ್ಟ್ 18: ಬ್ಯಾಂಕ್ ಮೇಲೆ ದಾಳಿ ನಡೆಸಲು ಬಂಧಿರುವ ಸಿಬಿಐ (ಕೇಂದ್ರ ತನಿಖಾ ದಳ) ಅಧಿಕಾರಿಗಳು ಎಂದು ಹೇಳಿ ದರೋಡೆಕೋರರು 35 ಲಕ್ಷ ದೋಚಿರುವ ಘಟನೆ ಜಾರ್ಖಂಡ್‌ನ ಜಮ್‌ಶೆಡ್‌ಪುರದ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ.

ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಗುರುವಾರ ಜಮ್‌ಶೆಡ್‌ಪುರದ ಬ್ಯಾಂಕ್ ಆಫ್ ಇಂಡಿಯಾದ ಮಂಗೋ ಶಾಖೆಯಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರನ್ನು ಗನ್ ಪಾಯಿಂಟ್‌ನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು ಸುಮಾರು ₹ 30 ರಿಂದ 35 ಲಕ್ಷವನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖವಾಡ ಧರಿಸಿದ್ದ ದರೋಡೆಕೋರರು ತಮ್ಮ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬ್ಯಾಕ್‌ನಲ್ಲಿದ್ದ ಗ್ರಾಹಕರು ಹೇಳಿದರು. ಅವರು ಸಿಬಿಐ (ಕೇಂದ್ರ ತನಿಖಾ ದಳ) ಅಧಿಕಾರಿಗಳು ಎಂದು ಹೇಳಿ ಎಲ್ಲರಿಗೂ ನೆಲದ ಮೇಲೆ ಬಗ್ಗಿ ನಿಲ್ಲಲು ಹೇಳಿದರು. ನಿರಾಕರಿಸಿದವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ ಎಂದು ತಿಳಿಸಿದ್ದಾರೆ.

Robbers Tell They’re From CBI, Loot ₹35 Lakh From Bank In Jharkhand

"ನಾನು ಇಲ್ಲಿಗೆ ತಲುಪಿದಾಗ, ಅವರವರ ಸ್ಥಳದಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಕಾಣಲಿಲ್ಲ. ಗೇಟಿನಲ್ಲಿ ನಿಂತಿದ್ದ ಇಬ್ಬರು ದರೋಡೆಕೋರರು ನನ್ನನ್ನು ಒಳಗೆ ಕುಳಿತುಕೊಳ್ಳುವಂತೆ ಹೇಳಿ ನನ್ನ ಮೊಬೈಲ್ ಕೇಳಿದರು. ನಾನು ನಿರಾಕರಿಸಿದಾಗ, ಅವರು ರಿವಾಲ್ವರ್ ಅನ್ನು ಹೊರತೆಗೆದು ನಾವು ಬ್ಯಾಂಕ್‌ನಲ್ಲಿ ದಾಳಿ ನಡೆಸುತ್ತಿರುವ ಸಿಬಿಐನಿಂದ ಬಂದವರು ಎಂದು ಹೇಳಿದರು" ಎಂದು ಪ್ರತ್ಯಕ್ಷದರ್ಶಿ ಸುಮನ್ ದೇವಿ ಹೇಳಿದ್ದಾರೆ.

ಇನ್ನೊಬ್ಬ ಪ್ರತ್ಯಕ್ಷದರ್ಶಿ "ನಾವು ವಿರೋಧಿಸುತ್ತಿದ್ದಂತೆ, ಅವರು ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು. ಆಗ ನಮಗೆ ಅರಿವಾಯಿತು, ಏನೋ ತಪ್ಪಾಗಿದೆ ಎಂದು. ನಂತರ, ಅವರು ತಮ್ಮ ಬ್ಯಾಗ್‌ನಲ್ಲಿ ಹಣವನ್ನು ಇಟ್ಟುಕೊಂಡು ಹೊರಟರು. ಇಷ್ಟೆ ಅಲ್ಲದೆ ಅವರು ಹೊರಡುವ ಮುನ್ನ ಮುಖ್ಯ ಗೇಟ್‌ಗೆ ಬೀಗ ಹಾಕಿ, ಎಲ್ಲಾ ಮೊಬೈಲ್ ಫೋನ್‌ಗಳನ್ನು ಅಲ್ಲಿಯೇ ಎಸೆದರು" ಎಂದಿದ್ದಾರೆ.

ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಜಮ್‌ಶೆಡ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆ ಮಾಹಿತಿಯಂತೆ ಬ್ಯಾಂಕ್ ಒಳಗೆ ನಾಲ್ವರು ದರೋಡೆಕೋರರು ಇದ್ದರು ಎಂದು ಅಲ್ಲಿದ್ದವರು ತಿಳಿಸಿದ್ದಾರೆ. ನಿಖರವಾದ ಲೂಟಿ ಮೊತ್ತವನ್ನು ಇನ್ನೂ ಖಚಿತಪಡಿಸಬೇಕಾಗಿದೆ. ಆದರೆ, ಸುಮಾರು 30-35 ಲಕ್ಷದ ನಡುವೆ ಇದೆ ಎಂದು ಸಿಬ್ಬಂದಿ ಹೇಳಿದ್ದಾರೆ. ದರೋಡೆಕೋರರು ಶಸ್ತ್ರಸಜ್ಜಿತರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನಿಖೆ ಮುಗಿದ ನಂತರ ನಾವು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+