• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ನೀಡಿದ ಲಾಕ್‌ಡೌನ್‌ ವಿನಾಯಿತಿ ರದ್ದು ಮಾಡಿದ ಜಾರ್ಖಂಡ್

|

ರಾಂಚಿ, ಮೇ 4: ಮೇ 4ರ ನಂತರ ದೇಶಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ವಿಸ್ತರಣೆಯಾಗುತ್ತಿದೆ. ಮೇ 17ರವರೆಗೂ ಲಾಕ್‌ಡೌನ್‌ ಮುಂದುವರಿಯಲಿದೆ. ರೆಡ್‌ ಜೋನ್, ಗ್ರೀನ್ ಜೋನ್, ಆರೆಂಜ್‌ ಜೋನ್‌ ಎಂದು ಜಿಲ್ಲೆಗಳನ್ನು ವಿಭಜನೆ ಮಾಡಿರುವ ಕೇಂದ್ರ ಸರ್ಕಾರ ಹಲವು ವಿಚಾರದಲ್ಲಿ ವಿನಾಯಿತಿ ನೀಡಿದೆ.

ಆದರೆ, ಕೇಂದ್ರ ಸರ್ಕಾರ ಘೋಷಿಸಿರುವ ವಿನಾಯಿತಿ ನಮ್ಮ ರಾಜ್ಯಕ್ಕೆ ಅನ್ವಯವಾಗಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

ಮೇ 4ರ ಬಳಿಕ ರಾಜ್ಯಗಳು ಅನುಸರಿಬೇಕಾದ ವಿಚಾರಗಳನ್ನು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ. ಮದ್ಯ ಮಾರಾಟ, ಕೈಗಾರಿಕೆಗಳಿಗೆ ಅನುಮತಿ, ಖಾಸಗಿ ಕಂಪನಿಗಳಿಗೆ ಅನುಮತಿ, ಬೈಕು-ಕಾರಿಗೆ ಅನುಮತಿ ಸೇರಿ ಹಲವು ವಿಭಾಗಗಳಲ್ಲಿ ವಿನಾಯಿತಿ ಘೋಷಿಸಿದೆ.

''ಜಾರ್ಖಂಡದಲ್ಲಿ ಇನ್ನು ಎರಡು ವಾರಗಳು ಕಾಲ ಲಾಕ್‌ಡೌನ್ ಮುಂದುವರಿಯಲಿದೆ. ರಾಜ್ಯಗಳಿಗೆ ಸಹೋದರ, ಸಹೋದರಿಯರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ವ್ಯಕ್ತಿಗಳು ಹಿಂತಿರುಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹೊಸ ಮಾರ್ಗಸೂಚಿ ಜಾರ್ಖಂಡದಲ್ಲಿ ಅನ್ವಯವಾಗಲ್ಲ'' ಎಂದು ಸಿಎಂ ಹೇಮಂತ್ ಸೊರೆನ್ ಹೇಳಿದ್ದಾರೆ.

ಅಲ್ಲಿಗೆ, ಜಾರ್ಖಂಡದ ಮೂರು ವಲಯಗಳಲ್ಲಿಯೂ ವಿನಾಯಿತಿ ಇಲ್ಲ. ಈಗಿರುವಂತೆ ಲಾಕ್‌ಡೌನ್‌ ಮುಂದುವರಿಯಲಿದೆ. ಅಂಗಡಿ, ಉದ್ಯಮ, ಕೈಗಾರಿಕೆ, ಪ್ರಯಾಣ, ಮದ್ಯ ಮಾರಾಟ ಯಾವುದಕ್ಕೂ ವಿನಾಯಿತಿ ಇಲ್ಲ.

ಅಂದ್ಹಾಗೆ, ಜಾರ್ಖಂಡದ ಈವರೆಗೂ 115 ಕೊರೊನಾ ಸೋಂಕಿತರು ವರದಿಯಾಗಿದ್ದಾರೆ. 95 ಜನರು ಸಕ್ರಿಯರಾಗಿದ್ದಾರೆ. 22 ಜನರು ಚೇತರಿಸಿಕೊಂಡಿದ್ದು, 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
The Centre's fresh instructions regarding relaxations will not be applicable in Jharkhand: CM Hemant Soren.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X