Get Updates
Get notified of breaking news, exclusive insights, and must-see stories!

ಬೆಂಗಳೂರು ಐಟಿ ಕಂಪನಿ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ: 7 ಆರೋಪಿಗಳ ಬಂಧನ

ರಾಂಚಿ, ಅಕ್ಟೋಬರ್, 23: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಮೇಲೆ 10 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳ ಪೈಕಿ 7ಮಂದಿ ಬಂಧಿಸಿದ ಘಟನೆ ಝಾರ್ಖಂಡ್ ರಾಜ್ಯದ ಪಶ್ಚಿಮ್ ಸಿಂಗ್ ಭೂಮ್ ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ 26 ವರ್ಷದ ಮಹಿಳಾ ಐಟಿ ಉದ್ಯೋಗಿ ಮೇಲೆ ಸುಮಾರು 10 ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳಿಯ ಪೊಲೀಸರು ತನಿಖೆ ಚುರುಕುಗೊಳಿಸಿ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಸಿನ ಆರೋಪಿಗಳು ಇದ್ದಾರೆ ಎಂದು ಪೊಲೀಸರು ಮೂಲಗಳು ಭಾನುವಾರ ತಿಳಿಸಿವೆ.

Bengaluru IT company employee gang raped 7 arrested in Jharkhand
ಜಾರ್ಖಂಡ್: ಬುಡಕಟ್ಟು ಮಹಿಳೆಗೆ ಟಾಯ್ಲೆಟ್ ನೆಕ್ಕಲು ಒತ್ತಾಯಿಸಿದ ಬಿಜೆಪಿ ನಾಯಕಿಯ ಬಂಧನ

ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಅತ್ಯಾಚಾರ ಘಟನೆ ಜರುಗಿದ ಸ್ಥಳದ ಸುತ್ತಲೂ ಪರಿಶೀಲನೆ ನಡೆಸಿದ್ದಾರೆ, ಜೊತೆಗೆ ಸ್ಥಳೀಯರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳೀಯವಾಗಿ ಸಿಕ್ಕಿ ಮಾಹಿತಿ ಮೇರೆಗೆ ಏಳು ಮಂದಿಯ ಬಂಧನವಾಗಿದೆ. ಬಂಧಿತ ಆರೋಪಿಗಳ ಬಳಿ ಸಂತ್ರಸ್ತ ಮಹಿಳೆಯ ಮೊಬೈಲ್‌ ಮತ್ತು ಪರ್ಸ್ ಇದ್ದು, ಅವುಗಳನ್ನು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಶುತೋಷ್ ಶೇಖರ್‌ ಮಾಹಿತಿ ನೀಡಿದ್ದಾರೆ.

26 ವರ್ಷದ ಸಂತ್ರಸ್ತ ಮಹಿಳೆಯು ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿ ಒಂದರಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಕಂಪನಿಯು ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿತ್ತು. ಆಗಿನಿಂದಲೂ ಸಂತ್ರಸ್ತೆ ಊರಲ್ಲಿದ್ದುಕೊಂಡೆ ಕೆಲಸ ಮಾಡುತ್ತಿದ್ದರು.

Bengaluru IT company employee gang raped 7 arrested in Jharkhand

ಸಂತ್ರಸ್ತೆ ತನ್ನ ಸ್ನೇಹಿತನ ಜೊತೆ ಕಳೆದ ಗುರುವಾರ ಸಂಜೆ ಬೈಕ್‌ನಲ್ಲಿ ಅಲ್ಲಿನ ಹಳೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಳೆ. ಈ ಸಂಧರ್ಭದಲ್ಲಿ ಅವರಿದ್ದ ಸ್ಥಳಕ್ಕೆ ಬಂದ 8ರಿಂದ 10 ಮಂದಿ ದುಷ್ಕರ್ಮಿಗಳ ಗುಂಪು ಆಕೆಯ ಸ್ನೇಹಿತನನ್ನು ಮೊದಲು ಥಳಿಸಿದ್ದಾರೆ. ನಂತರ ಮಹಿಳಾ ಉದ್ಯೋಗಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಿಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+