ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕೆ 47 ರೈಫಲ್ ವಶ: ಜಾರ್ಖಂಡ್‌ನ ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

|
Google Oneindia Kannada News

ರಾಂಚಿ, ಆಗಸ್ಟ್ 25: ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕ ಎಂದು ಹೇಳಲಾದ ಪ್ರೇಮ್ ಪ್ರಕಾಶ್ ಅವರನ್ನು ಬಂಧಿಸಿದೆ. ಇಡಿ ತಂಡ ಪ್ರೇಮ್ ಪ್ರಕಾಶ್ ನಿವಾಸದಿಂದ 2 ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಂಡಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಯ ನಂತರ ಪ್ರೇಮ್ ಪ್ರಕಾಶ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಯಿತು. ಅವರನ್ನು ಮನಿ ಲಾಂಡರಿಂಗ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಂಚಿಯಲ್ಲಿ ಬಂಧಿಸಲಾಗಿದೆ.

ಬುಧವಾರ ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಎರಡು ಎಕೆ-47 ರೈಫಲ್‌ಗಳು ಮತ್ತು 60 ಕಾಟ್ರಿಡ್ಜ್‌ಗಳನ್ನು ಇಡಿ ವಶಪಡಿಸಿಕೊಂಡಿತ್ತು. 100 ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಅವರ ಜಾರ್ಖಂಡ್ ನಿವಾಸವನ್ನು ಶೋಧಿಸುವಾಗ ಇಡಿ ಅಧಿಕಾರಿಗಳು ಕಬ್ಬಿಣದ ಅಲ್ಮಿರಾದಲ್ಲಿ ಎರಡು ಎಕೆ -47 ಗಳನ್ನು ಇರಿಸಿರುವುದು ಪತ್ತೆಯಾಗಿದೆ.

ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಟ್ವೀಟ್‌ನಲ್ಲಿ, "ಪ್ರೇಮ್ ಪ್ರಕಾಶ್ ಅವರನ್ನು ಇಡಿ ಬಂಧಿಸಿದೆ. ಪ್ರಕಾಶ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಕುಟುಂಬ ಸ್ನೇಹಿತ ಅಮಿತ್ ಅಗರ್ವಾಲ್ ಅವರ ಸಹವರ್ತಿಯಾಗಿದ್ದು, ಅವರ (ಪ್ರಕಾಶ್) ಲಿಂಕ್‌ಗಳನ್ನು ತನಿಖೆ ಮಾಡಬೇಕು" ಎಂದಿದ್ದಾರೆ.

ಜಾರ್ಖಂಡ್‌ನ ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

ಜಾರ್ಖಂಡ್‌ನ ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

ಪ್ರೇಮ್ ಪ್ರಕಾಶ್ ಅವರ ನಿವಾಸದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು (ಎಎಲ್ -47) ಪೊಲೀಸರೊಂದಿಗೆ ಭದ್ರತಾ ಸಿಬ್ಬಂದಿಗೆ ಸೇರಿವೆ ಎಂದು ಎಸ್‌ಎಚ್‌ಒ ಅರ್ಗೋರಾ ಪೊಲೀಸ್ ಠಾಣೆ ವಿನೋದ್ ಕುಮಾರ್ ತಿಳಿಸಿದ್ದಾರೆ. ಪ್ರೇಮ್ ಪ್ರಕಾಶ್ ಅವರ ಮನೆಯಲ್ಲಿ ರೈಫಲ್‌ಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ರಾಂಚಿ ಪೊಲೀಸರು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ಪ್ರೇಮ್ ಪ್ರಕಾಶ್ ಅವರನ್ನು ಮೇ ತಿಂಗಳಲ್ಲಿ ಸಂಸ್ಥೆ ವಿಚಾರಣೆ ನಡೆಸಿತ್ತು.

ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ನಂಟು

ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ನಂಟು

100 ಕೋಟಿ ಗಣಿ ಹಗರಣದ ತನಿಖೆಯ ಭಾಗವಾಗಿ ನಡೆಯುತ್ತಿರುವ ದಾಳಿಯ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್‌ನ ರಾಂಚಿಯ ಮನೆಯೊಂದರಿಂದ ಎರಡು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿತ್ತು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಪ್ರೇಮ್ ಪ್ರಕಾಶ್ ಅವರಿಗೆ ಹಗರಣದಲ್ಲಿ ನಂಟು ಇದೆ ಎಂದು ಹೇಳಲಾಗಿದ್ದು, ದಾಳಿ ವೇಳೆ (ಆಗಸ್ಟ್ 24) ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಇಡಿ ಎಕೆ 47 ಅನ್ನು ವಶಪಡಿಸಿಕೊಂಡಿದೆ.

16 ಸ್ಥಳಗಳಲ್ಲಿ ಸಹ ಇಡಿ ಶೋಧ ಕಾರ್ಯ

16 ಸ್ಥಳಗಳಲ್ಲಿ ಸಹ ಇಡಿ ಶೋಧ ಕಾರ್ಯ

ಪ್ರೇಮ್ ಪ್ರಕಾಶ್ ಮತ್ತು ಹೇಮಂತ್ ಸೊರೆನ್ ಅವರೊಂದಿಗಿನ ಸಂಬಂಧದ ಬಗ್ಗೆ ನಿರ್ದಿಷ್ಟ ಮಾಹಿತಿಯ ನಂತರ, ಅವರ ನಿವಾಸದಲ್ಲಿ ಶೋಧ ನಡೆಸಲಾಗಿದೆ ಎಂದು ಇಡ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಪ್ರೇಮ್ ಪ್ರಕಾಶ್ ಅವರ ನಿವಾಸ ಹೊರತುಪಡಿಸಿ ಇತರ 16 ಸ್ಥಳಗಳಲ್ಲಿ ಸಹ ಇಡಿ ಶೋಧ ಕಾರ್ಯ ನಡೆಸುತ್ತಿದೆ. ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೆನ್ ಕೂಡ ಇಡಿ ಪರಿಶೀಲನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

19.76 ಕೋಟಿ ರೂಪಾಯಿ ವಶ

19.76 ಕೋಟಿ ರೂಪಾಯಿ ವಶ

ಮೇ ತಿಂಗಳಲ್ಲಿ ಇಡಿ ಎಂಎನ್‌ಆರ್‌ಇಜಿಎ ಹಗರಣಕ್ಕೆ ಸಂಬಂಧಿಸಿದ 36 ಸ್ಥಳಗಳನ್ನು ಶೋಧಿಸಿ 19.76 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು ಈ ವೇಳೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಅವರ ಸಹಚರರ ಜಾಗವನ್ನು ಶೋಧಿಸಲಾಗಿತ್ತು. "ವಿವಿಧ ವ್ಯಕ್ತಿಗಳ ಹುಡುಕಾಟ ಮತ್ತು ಹೇಳಿಕೆಗಳ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಸೇರಿದಂತೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು, ವಶಪಡಿಸಿಕೊಂಡ ನಗದು ಪ್ರಮುಖ ಭಾಗವು ಅಕ್ರಮ ಗಣಿಗಾರಿಕೆಯಿಂದ ಪಡೆಯಲಾಗಿದೆ ಮತ್ತು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸೇರಿದೆ ಎಂದು ಬಹಿರಂಗಪಡಿಸಿದೆ" ಎಂದು ಇಡಿ ತನ್ನ ಈ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು. ಪೂಜಾ ಸಿಂಘಾಲ್ ಮತ್ತು ಆಕೆಯ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ಇವರು ಜೈಲಿನಲ್ಲಿದ್ದಾರೆ. ಇದುವರೆಗೆ ಗಣಿಗಾರಿಕೆಯಿಂದ ಅಕ್ರಮವಾಗಿ ಸಂಪಾದನೆಯಾಗಿದೆ ಎನ್ನಲಾದ 36.58 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ ಸಂಸ್ಥೆ ವಶಪಡಿಸಿಕೊಂಡಿದೆ.

English summary
The Enforcement Directorate (ED) has arrested Prem Prakash, who is said to be a close aide of Jharkhand Chief Minister Hemant Soren. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X