ಮಹಿಳೆ ಮೇಲೆ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಲೋಟ ತುರುಕಿದ ದುಷ್ಕರ್ಮಿಗಳು

ರಾಂಚಿ, ಜನವರಿ 09: ಮೊನ್ನೆ ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ 50 ವರ್ಷದ ಅಂಗನವಾಡಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ ನಡೆಸಲಾಗಿತ್ತು. ಈ ಘಟನೆ ಬೆನ್ನಲ್ಲೇ ಜಾರ್ಖಂಡ್ ನಲ್ಲೂ ಅಂಥದ್ದೇ ಘಟನೆ ವರದಿಯಾಗಿದೆ.

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಗುಪ್ತಾಂಗಕ್ಕೆ ಸ್ಟೀಲ್ ಲೋಟ ತುರುಕಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಜಾರ್ಖಂಡ್ ನ ಛಾತ್ರ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ. ಹಂಟರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಳೆ ಜಗಳವನ್ನೇ ಮುಂದಿಟ್ಟುಕೊಂಡು ಮಹಿಳೆಯೊಂದಿಗೆ ಗುರುವಾರ ರಾತ್ರಿ ಮತ್ತೆ ಜಗಳ ತೆಗೆದ ಮೂವರು, ಮಾತಿಗೆ ಮಾತು ಬೆಳೆದು ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಡಿಐಜಿ ಅಮೋಲ್ ಹೋಂಕಾರ್ ತಿಳಿಸಿದ್ದಾರೆ.

50 Year Old Woman Raped And Brutally Assualted By Gang In Jarkhand

"ಈ ಹಿಂದೆ ಮೇಕೆ ವಿಷಯಕ್ಕೆ ಜಗಳವಾಗಿತ್ತು. ನನ್ನ ಮನೆ ಸಮೀಪ ಗುರುವಾರ ರಾತ್ರಿ ಜಮೀನಿಗೆ ತೆರಳಿದ್ದ ಸಂದರ್ಭ ನನ್ನ ಮೇಲೆ ಮೂವರು ಅತ್ಯಾಚಾರ ನಡೆಸಿದ್ದಾರೆ. ನನ್ನ ಗುಪ್ತಾಂಗಕ್ಕೆ ಲೋಟ ತುರುಕಿ ಹಿಂಸೆ ನೀಡಿದರು" ಎಂದು ಮಹಿಳೆ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ. ನರಳಾಡುತ್ತಿದ್ದ ಆಕೆಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ನಿರ್ಭಯಾ, ಹತ್ರಾಸ್ ಅತ್ಯಾಚಾರದ ಕ್ರೌರ್ಯ ಘಟನೆ ಇನ್ನೂ ಕಣ್ಣ ಮುಂದಿರುವಾಗಲೇ ಮತ್ತೆ ಮತ್ತೆ ಇಂಥ ಘಟನೆಗಳು ಮರುಕಳಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+