ಸಾಮಂದಿಪುರ ಗ್ರಾಮಕ್ಕೆ ಯೋಗೇಶ್ವರ್ ಪ್ರವೇಶಿಸದಂತೆ ತಡೆದ ಗ್ರಾಮಸ್ಥರು

Recommended Video

      ರಾಮನಗರದಲ್ಲಿ ಸಿ ಪಿ ಯೋಗೇಶ್ವರ್ ಗೆ ಮುಖಭಂಗ | oneindia Kannada

      ರಾಮನಗರ, ಮೇ 2: ಕೆಲ ದಿನಗಳ ಹಿಂದೆ ಚನ್ನಪಟ್ಟಣದ ಮುಸ್ಲಿಂ ಬಡಾವಣೆಗಳಲ್ಲಿ ಬಿಜೆಪಿ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಪ್ರವೇಶವಿಲ್ಲ ಎನ್ನುವ ಬಿತ್ತಿಪತ್ರ ಅಂಟಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಗಿತ್ತು.

      ಆದರೆ ಬುಧವಾರ ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆ ಗ್ರಾಮ ಪ್ರವೇಶಿಸದಂತೆ ತಡೆದ ಘಟನೆ ಚನ್ನಪಟ್ಟಣದ ಸಾಮಂದಿಪುರ ಗ್ರಾಮದಲ್ಲಿ ನಡೆದಿದೆ. ಚುನಾವಣಾ ಪ್ರಚಾರಕ್ಕೆಂದು ಸಾಮಂದಿಪುರ ಗ್ರಾಮಕ್ಕೆ ಸಿ.ಪಿ.ಯೋಗೇಶ್ವರ್ ಬಂದ ಸಂದಂರ್ಭದಲ್ಲಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ನೀವು ಏನು ಅಭಿವೃದ್ಧಿ ಮಾಡಿಲ್ಲ ಪ್ರಚಾರಕ್ಕೆ ಬರಬೇಡಿ ಎಂದು ಹೇಳಿದ್ದಾರೆ.

      ಯೋಗೇಶ್ವರ್ ಬರದಂತೆ ತಡೆ ಮಾಡಿ, ನೂರಾರು ಮಂದಿ ಗ್ರಾಮಸ್ಥರು ಸಿಪಿವೈಗೆ ದಿಗ್ಬಂಧನ ವಿಧಿಸಿದ್ದಾರೆ. ಆಗ ಗ್ರಾಮಸ್ಥರ ವರ್ತನೆಯಿಂದ ತಬ್ಬಿಬ್ಬಾದ ಸಿ.ಪಿ.ಯೋಗೇಶ್ವರ್ ಗ್ರಾಮಸ್ಥರಿಗೆ ಅವಾಜ್ ಹಾಕಿ, ನಿಮ್ಮ ಉದ್ದೇಶ ಏನು ಎಂದು ಕೈ ತೋರಿಸಿ, ಗ್ರಾಮಸ್ಥರನ್ನೆ ಗದರಿಸಿ ಸುಮ್ಮನಿರಿಸಲು ಮುಂದಾಗಿದ್ದಾರೆ.

      villagers prevented cp yogeshwar from entering the village

      ಇದರಿಂದ ಸಿಟ್ಟಾದ ಜನರು ಪ್ರಶ್ನೆಗಳ ಮಳೆಗರೆದಿದ್ದಾರೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸದೆ ಯೋಗೇಶ್ವರ್ ಗ್ರಾಮದಿಂದ ಹೊರ ನಡೆದಿದ್ದಾರೆ. ಕೆಲ ತಿಂಗಳ‌ ಹಿಂದೆ ಸಾಮಂದಿಪುರ ಗ್ರಾಮದ ಜನರು ಶಾಸಕರನ್ನು ಭೇಟಿ ಮಾಡಿ ತಮ್ಮ ಗ್ರಾಮದಲ್ಲಿ ಶಾಲಾಕಟ್ಟಡ ಮತ್ತು ಕುಡಿಯುವ ನೀರಿನ ತೊಂದರೆ ಇದೆ ಎಂದು ತಮ್ಮ ಅವಾಹಲು ಹೇಳಿದ್ದರು.

      ಆಗ ಸಿಪಿವೈ ತಮಗೆ ಸರಿಯಾಗಿ ಸ್ಪಂದಿಸದೆ, ಬೇಜವಾಬ್ದಾರಿ ನಡೆದುಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+