ಮಂಗಗಳ ಮರಣಕ್ಕೆ ಮರುಗಿದ ಮಾನವರಿಂದ ಅಂತ್ಯ ಸಂಸ್ಕಾರ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್.13 : ಮಾನವರ ಮಂಗಗಳ ಸಂಬಂಧ ಇಂದು ನಿನ್ನೆಯದಲ್ಲ, ಪುರಾತನ ಕಾಲದಿಂದಲೂ ನಡೆದು ಬಂದ ಅವಿನಾಭಾವ ಭಾವ ನಂಟಿದು.

ಆಗುಂಬೆ ಘಾಟಿಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಮಾರಣ ಹೋಮ

ಮಾನವರ ಪೂರ್ವಜರೇ ಆಗಿರುವ ಮಂಗಗಳಿಗೆ ಪೂಜ್ಯ ಸ್ಥಾನ ಇದೆ. ಹಾಗಾಗಿ ಅವುಗಳನ್ನು ಕೇವಲ ಪ್ರಾಣಿಗಳಂತೆ ಕಾಣದೆ ತಮ್ಮ ಧಾರ್ಮಿಕ ಸಂಪ್ರದಾಯಗಳ ಪರಿಧಿಯೊಳಕ್ಕೆ ಅವನ್ನೂ ಸೇರಿಸಿಕೊಂಡು ಬಿಟ್ಟಿದ್ದಾರೆ ಮಾನವರು. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.

villagers did death rituals for monkeys

ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿ ಮನುಷ್ಯರ ಜೊತೆ ಮಂಗಗಳು ಒಡನಾಟ ಬೆಳೆಸಿಕೊಂಡಿದ್ದವು, ಕೊಟ್ಟಿದ್ದನ್ನು ತಿಂದು ಅಲ್ಲಿಯೇ ಓಡಾಡಿಕೊಂಡಿದ್ದವು. ಆದರೆ ಕೆಲ ದಿನಗಳ ಹಿಂದೆ ವಿದ್ಯುತ್ ಶಾಕ್‌ಗೆ 6 ಮಂಗಗಳು ಸಾವನ್ನಪ್ಪಿದವು. ಮಂಗಗಳ ಮರಣಕ್ಕೆ ಮರುಗಿದ ಗ್ರಾಮಸ್ಥರು ಅಂದು ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಿದರು. ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿ ಮಂಗಗಳಿಗೆ ಸಲ್ಲಬೇಕಾದ ಶಾಂತಿಗಳನ್ನು ಸಲ್ಲುವಂತೆ ಮಾಡಿದರು.

ಯಾದಗಿರಿ : ಹುಣಸಿಹೊಳೆ ಗ್ರಾಮದಲ್ಲಿ ಕೋತಿಗಳ ಕಾಟ

villagers did death rituals for monkeys

ಮಡಿದ ಮಂಗಗಳ ಸಮಾಧಿ ಮೇಲಿನ ತಿಂಡಿ ತಿನಿಸುಗಳನ್ನು ಇಡಲಾಯಿತು. ವ್ಯಕ್ತಿಯೊಬ್ಬ ಕೇಶ ಮುಂಡನ ಮಾಡಿಸಿಕೊಂಡು ಧಾರ್ಮಿಕ ವಿದಿ ವಿಧಾನಗಳನ್ನು ಪೂರೈಸಿದರು. ತಿಥಿ ಕಾರ್ಯ ನೆರವೇರಿಸಿದ ನಂತರ ಜನರಿಗೆ ಊಟದ ವ್ಯವಸ್ಥೆಯೂ ಇತ್ತು.

villagers did death rituals for monkeys

ಕಳೆದ 4 ನೇ ತಾರೀಕು ಮನೆಗಳ ಮೇಲೆ ಓಡಾಡುತ್ತಿದ್ದ ಆರು ಕೋತಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ವು. ಮಂಗಗಳ ಮಾರಣಹೋಮದಿಂದ ಮನನೊಂದ ಸ್ಥಳೀಯರು ಮಂಗಗಳ ಅಂತ್ಯಸಂಸ್ಕಾರ ಕಾರ್ಯವನ್ನು ನೆರವೇರಿಸಿದರು. ಇಂದು ಮನುಷ್ಯರಂತೆ ಕೋತಿಗಳಿಗೂ ಸಮಾಧಿ ಮೇಲೆ ನೈವೇದ್ಯವನ್ನಿಟ್ಟು ತಿಥಿಕಾರ್ಯವನ್ನ ಶ್ರಧ್ಧಾಭಕ್ತಿಯಿಂದ ನೆರವೇರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Chennapatana's Mangalavara pete 6 monkeys died by electric shock. villagers complete monkeys death rituals.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ