ಕೊರೊನಾ ಹೆಸರಲ್ಲಿ ಸರ್ಕಾರ ಜನರನ್ನು ಕತ್ತಲಲ್ಲಿ ಇಟ್ಟಿದೆ: ಸಂಸದ ಡಿ.ಕೆ ಸುರೇಶ್

ರಾಮನಗರ, ಆಗಸ್ಟ್ 04: ರಾಜ್ಯ ಸರ್ಕಾರ ಕೋವಿಡ್-19 ವಿಚಾರದಲ್ಲಿ ಜನರನ್ನು ಕತ್ತಲಲ್ಲಿ ಇಟ್ಟು, ಹಣ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

Recommended Video

      Sushant ತಂದೆ ಪ್ರಕಾರ ಕೊಲೆ, Police report ಪ್ರಕಾರ ಆತ್ಮಹತ್ಯೆ | Oneindia Kannada

      ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಸರ್ಕಾರ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿಯನ್ನು ಹಂಚುವ ಮೂಲಕ ಜನರನ್ನು ಕತ್ತಲಲಿನಲ್ಲಿ ಇಟ್ಟಿದೆ. ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 17 ಎಂದು ಸರ್ಕಾರ ಹೇಳುತ್ತಿದೆ. ಆದರೆ ಈ ಜಿಲ್ಲೆಯೂಂದರಲ್ಲೇ ಸುಮಾರು 80 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸರ್ಕಾರ ಸತ್ಯವನ್ನು ಎಲ್ಲೂ ಹೇಳುತ್ತಿಲ್ಲ ಎಂದರು.

      ರಾಜ್ಯದಲ್ಲಿ ಪ್ರತಿ ದಿನ 5 ಸಾವಿರದಿಂದ 6 ಸಾವಿರ ಕೊರೊನಾ ವೈರಸ್ ಗೆ ತುತ್ತಾಗುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ, ಆದರೆ ಸರ್ಕಾರದ ಹೇಳುವ ಸಂಖ್ಯೆಗಿಂತ ಮೂರು ಪಟ್ಟು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈಗಾಗಲೇ ಸಚಿವರು ಜನರನ್ನು ದೇವರೇ ಕಾಪಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಜನರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದರು.

      The Government Has Put People In The Dark Under The Name Of Coronavirus: DK Suresh Allegation

      ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಲ್ಲ, ಅಧಿಕಾರ ಮುಖ್ಯ. ಯಾರನ್ನು ಎಂಎಲ್ಸಿ, ಛೇರ್ಮೆನ್ ಮಾಡಬೇಕು, ಮಂತ್ರಿ ಮಂಡಲ ರಚನೆ ಮಾಡಬೇಕು ಹಾಗೂ ಕೊರೊನಾ ಹೆಸರಿನಲ್ಲಿ ಹಣ ಮಾಡೋದು ಅಷ್ಟೆ ಗೊತ್ತಿರೋದು, ಈ ಸರ್ಕಾರ ವರ್ಗಾವಣೆ ಧಂದೆಯಲ್ಲಿ ಮುಳುಗಿದೆ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+