ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಗುಡುಗು ಸಹಿತ ಮಳೆ; ಬಾಳೆ, ರೇಷ್ಮೆ ನಾಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 18: ರಾಮನಗರ ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ನಿರಂತರ ಮಳೆಯಾಗಿದೆ. ಗುಡುಗು ಸಹಿತ ಬಿರುಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಹಾನಿ ಸಂಭವಿಸಿದೆ. ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ.

ನಿನ್ನೆ ಸಂಜೆ 5 ಗಂಟೆಯಿಂದ ಜಿಲ್ಲೆಯಲ್ಲಿ ಮಳೆ ಆರಂಭವಾಗಿ ನಿರಂತರವಾಗಿ ಸುರಿದಿದೆ. ಮಳೆಯಿಂದಾಗಿ ಪಟ್ಟಣದಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತಗೊಂಡಿತ್ತು. ರಾತ್ರಿಯೂ ಮಳೆ ಮುಂದುವರೆದಿದ್ದು, ಮಳೆ, ಬಿರುಗಾಳಿಗೆ ಸಿಲುಕಿ ಹಲವು ಕಡೆ ಬಾಳೆ ತೋಟಗಳು ನಾಶವಾಗಿವೆ. ಹಲವೆಡೆ ರೇಷ್ಮೆ ಸಾಕಾಣಿಕೆ ಮನೆಯೂ ಮಳೆಯಿಂದಾಗಿ ಧ್ವಂಸಗೊಂಡಿವೆ.

Silk And Banana Trees Destroyed By Heavy Rain In Ramanagar

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿಯಲ್ಲಿ ರೈತರ ರೇಷ್ಮೆ ಗೂಡಿಗೂ ಹಾನಿಯಾಗಿದೆ. ಜೋರು ಗಾಳಿಯಿಂದಾಗಿ ಕೆಂಪೇಗೌಡ ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಮನೆಯ ಹೆಂಚುಗಳು ಹಾರಿಹೋಗಿ, ಮನೆಯೊಳಗಿದ್ದ ರೇಷ್ಮೆ ಗೂಡುಗಳು ಧ್ವಂಸಗೊಂಡಿವೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ರೈತನಿಗೆ ನಷ್ಟ ಸಂಭವಿಸಿದೆ.

Silk And Banana Trees Destroyed By Heavy Rain In Ramanagar

ಅದೇ ಗ್ರಾಮದ ನಾಗವೇಣಿ ಎಂಬುವರಿಗೆ ಸೇರಿದ ಮನೆಯ ಶೀಟ್ ಗಳೂ ಗಾಳಿಯಿಂದಾಗಿ ಹಾರಿಹೋಗಿವೆ. ಮಳೆಯ ಅಬ್ಬರ ಇನ್ನೂ ಮುಂದುವೆರೆಯುವ ಲಕ್ಷಣಗಳಿದ್ದು, ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದೆ.

English summary
Silk and banana trees destroyed by heavy rain yesterday in ramanagar district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X