ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್19 ವಾರ್ ರೂಮ್: ಡಿಜಿಟಲ್ ವೇದಿಕೆಯಲ್ಲಿ ದಾಖಲೆ ಬರೆದ ರಾಮನಗರ

|
Google Oneindia Kannada News

ರಾಮನಗರ, ಮೇ 11: ಇಡೀ ಜಿಲ್ಲೆಯ ಜನರ ಆರೋಗ್ಯ ಸಮೀಕ್ಷೆ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್‌ ವೇದಿಕೆಯಲ್ಲಿ ದಾಖಲಿಸಿರುವ ದೇಶದ ಮೊದಲ ಜಿಲ್ಲೆ ನಮ್ಮ ರಾಮನಗರವಾಗಿದ್ದು, ಕೋವಿಡ್ 19 ವಾರ್ ರೂಂನಲ್ಲಿ ಈ ಕುರಿತಂತೆ ರಿಯಲ್‌ ಟೈಮ್‌ ಮಾಹಿತಿ ಲಭ್ಯ ಎಂದು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

Recommended Video

ಆಟೋ, ಕ್ಯಾಬ್ ಚಾಲಕರಿಗೆ 5ಸಾವಿರ ಹಣ , ಆದರೆ ಇದರ ಹಿಂದಿನ ಅಸಲಿ ಸತ್ಯ ಏನು? | Oneindia Kannada

ಕೋವಿಡ್ 19 ಪರಿಸ್ಥಿತಿ ನಿರ್ವಹಣೆಗಾಗಿ ಸ್ಥಾಪಿಸಿರುವ ವಾರ್ ರೂಂಗೆ ಸೋಮವಾರ ಭೇಟಿ ನೀಡಿ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ, ವ್ಯವಸ್ಥೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಶಿವಮೊಗ್ಗಗೂ ವಕ್ಕರಿಸಿದ ಕೊರೊನಾ: ಅನಗತ್ಯ ಓಡಾಟ ಬೇಡ ಎಂದ ಈಶ್ವರಪ್ಪಶಿವಮೊಗ್ಗಗೂ ವಕ್ಕರಿಸಿದ ಕೊರೊನಾ: ಅನಗತ್ಯ ಓಡಾಟ ಬೇಡ ಎಂದ ಈಶ್ವರಪ್ಪ

"ಮುಂದೆ ಎದುರಾಗಬಹುದಾದ ಆರೋಗ್ಯ ಸಂಬಂಧಿ ಸಂಕಷ್ಟಗಳನ್ನು ಎದುರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ 19 ವಾರ್ ರೂಂ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭಿಸಿ ಕೋವಿಡ್ 19 ಆಸ್ಪತ್ರೆವರೆಗಿನ ಮಾಹಿತಿ ಈ ವಾರ್ ರೂಂನಲ್ಲಿ ಲಭ್ಯವಿದೆ. ಆಸ್ಪತ್ರೆಯಲ್ಲಿರುವ ಆಕ್ಸಿಜನ್ ವ್ಯವಸ್ಥೆ, ಒಟ್ಟು ಹಾಸಿಗೆ ಸಾಮರ್ಥ್ಯ ಇನ್ನಿತರ ಮೂಲ ಸೌಕರ್ಯ, ವೈದ್ಯಕೀಯ ಉಪಕರಣಗಳ ದಾಸ್ತಾನು, ಔಷಧ ಸಂಗ್ರಹ, ವೈದ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಸಂಖ್ಯೆ, ಚಿಕಿತ್ಸೆ ಪಡೆದವರ ಮಾಹಿತಿ ವಾರ್ ರೂಂನ ಡ್ಯಾಶ್‌ ಬೋರ್ಡ್‌ನಲ್ಲಿ ಲಭ್ಯವಿದೆ.

Real Time Updates Available In Covid 19 War Room In Ramanagar

ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಸುಮಾರು 3 ಲಕ್ಷ ಮನೆಗಳಿಗೆ ತೆರಳಿ 12 ಲಕ್ಷಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಅವರ ಆರೋಗ್ಯ ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ಪೈಕಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎಷ್ಟು ಮಂದಿ, ಅಧಿಕ ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆ, ಹೃದ್ರೋಗ, ಮೂತ್ರಪಿಂಡದ ಸಮಸ್ಯೆ ಎಷ್ಟು ಮಂದಿಗೆ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಈ ಎಲ್ಲ ಮಾಹಿತಿ ವಾರ್ ರೂಂನ ಡ್ಯಾಶ್‌ ಬೋರ್ಡ್‌ನಲ್ಲಿ ದಾಖಲಾಗಿದೆ.

* ಆಂಬ್ಯುಲೆನ್ಸ್ ಟ್ರ್ಯಾಕಿಂಗ್‌ ವ್ಯವಸ್ಥೆ

"ಎಲ್ಲಾ ಆಂಬ್ಯುಲೆನ್ಸ್ ಚಾಲಕರಿಗಾಗಿ 'ಸೂಪರ್ ಹೀರೋ' ಹೆಸರಿನ ಹೊಸ ಅಪ್ಲಿಕೇಶನ್ ರೂಪಿಸಲಾಗಿದ್ದು, ಇದು ಓಲಾ / ಉಬರ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ಆಂಬ್ಯುಲೆನ್ಸ್ ಗಾಗಿ ಕರೆ ಮಾಡಿದಾಗ, ಕಮಾಂಡ್‌ ಸೆಂಟರ್‌ಗೆ ಮಾಹಿತಿ ಹೋಗುತ್ತದೆ. ಅಲ್ಲಿಂದ ಸಮೀಪದಲ್ಲಿರುವ ಚಾಲಕರಿಗೆ ಮಾಹಿತಿ ತಲುಪುವುದು. ಜಿಪಿಎಸ್ ಆಧರಿತ ತಂತ್ರಜ್ಞಾನದ ನೆರವಿನೊಂದೊಗೆ ಆಂಬುಲೆನ್ಸ್ ಇರುವ ಸ್ಥಳವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ವಾರ್ ‌ರೂಂನಿಂದಲೇ ತಿಳಿದುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು" ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

English summary
Real time updates available in Covid 19 War room in Ramanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X