ಏಷ್ಯಾದ 2ನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶಕ್ಕೆ ಬಸ್ ಬಿಡಿ.. ಓಳ್ ಬಿಡ್ಬೇಡಿ ಸಾರ್; ಕಾರ್ಮಿಕರ ಅಳಲು
ರಾಮರಾನಗರ, ಡಿಸೆಂಬರ್, 10: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಕೈಗಾರಿಕೆ ಪ್ರದೇಶಕ್ಕೆ ತೆರಳಲು ತುಂಬಾ ಹರಸಾಹಸಪಡಬೇಕಿದೆ. ಇದು ಹೋಗಲಿ, ಏಷ್ಯದಲ್ಲೇ 2ನೇ ಅತೀ ದೊಡ್ಡ ಈ ಕೈಗಾರಿಕಾ ಪ್ರದೇಶಕ್ಕೆ ಒಂದೇ.. ಒಂದು ಬಸ್ ವ್ಯವಸ್ಥೆ ಇಲ್ಲ. ಇದರಿಂದ ಕಾರ್ಮಿಕರು ಪ್ರತಿನಿತ್ಯವೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯ ಕೈಗಾರಿ ಪ್ರದೇಶಗಳ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕಾದ ಜವಾಬ್ದಾರಿ ಸಾರಿಗೆ ಇಲಾಖೆಯದ್ದಾಗಿದೆ. ಇದರಿಂದ ಸಾವಿರಾರು ಕಾರ್ಮಿಕರಿಗೆ ತುಂಬಾ ಅನುಕೂಲ ಆದಂತಾಗಲಿದೆ. ಆದರೆ, ಕೆಲವು ಕೈಗಾರಿಕೆ ಪ್ರದೇಶಗಳಿಗೆ ಈಗಲೂ ಸೂಕ್ತ ಸಾರಿಗೆಯ ವ್ಯವಸ್ಥೆಯಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಇದೀಗ ಏಷ್ಯಾದ 2ನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ರಾಜನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಸ್ ವ್ಯವಸ್ಥೆ ಇಲ್ಲದೆ, ಪ್ರತಿನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಹೈರಾಣಾಗಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 3 ಹಂತಗಳಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಕಾರ್ಖನೆಗಳು ಕಾರ್ಯನಿರ್ವಹಿಸುತ್ತಿವೆ. 15,000ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೆಲವು ಕಾರ್ಖನೆಗಳ ಕಾರ್ಮಿಕರು ಬಸ್ ವ್ಯವಸ್ಥೆಯಿಲ್ಲದೆ, ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ. ಹಾರೋಹಳ್ಳಿಯಿಂದ ಕೈಗಾರಿಕಾ ಪ್ರದೇಶ 5 ಕಿ.ಮೀ ದೂರವಿದೆ. ಹಾರೋಹಳ್ಳಿ, ಕನಕಪುರ ಮತ್ತು ಜಿಲ್ಲಾ ಕೇಂದ್ರ ರಾಮನಗರದಿಂದ ಪ್ರತಿನಿತ್ಯ ನೂರಾರು ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಈ ಸ್ಥಳಗಳಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬುದು ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.
ಯಾವುದೇ ಬಸ್‌ಗಳಿಲ್ಲದ ಹಿನ್ನೆಲೆ ಬೇಕೆಯಾವುದೇ ಪರ್ಯಾಯ ಮಾರ್ಗವಿಲ್ಲದೆ, ಕೈಗಾರಿಕಾ ಪ್ರದೇಶಕ್ಕೆ ತೆರಳುವ ಕಾರ್ಮಿಕರು ಖಾಸಗಿ ಟ್ಯಾಕ್ಸಿ, ಆಟೋಗಳನ್ನ ಏರುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ. ತಾವು ಸಂಪಾದನೆ ಮಾಡಿದ ಹಣದಲ್ಲಿಯೇ ಖಾಸಗಿ ವಾಹನಗಳಿಗೆ ನೀಡುವಂತಾಗಿದೆ. ಅದರಲ್ಕೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹ ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಪ್ರತಿನಿತ್ಯವೂ ಬೇರೆ ಯಾವುದೇ ದಾರಿಯಿಲ್ಲದೆ, ಗೂಡ್ಸ್ ವಾಹನ, ಆಟೋ ರಿಕ್ಷಗಳಲ್ಲಿ ಸಂಚರಿಸಿ ಕಾರ್ಮಿಕರು ಕೈಗಾರಿಕೆ ತಲುಪುಯತ್ತಿದ್ದಾರೆ. ಒಬ್ಬರಲ್ಲ.. ಇಬ್ಬರಲ್ಲ ಸಾವಿರಾರು ಕಾರ್ಮಿಕರದ್ದು ಇದೇ ಗೋಳಾಗಿವೆ. ಈ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಹಿಂದೇಟು ಹಾಕುತ್ತಿದೆ. ಇದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಮನಗರ ಜಿಲ್ಲಾ ಕೇಂದ್ರದಿಂದ ಬೆಳಗ್ಗೆ ಹಾಗೂ ಸಂಜೆ ರಾಮನಗರ ಮಾರ್ಗದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಕಾರ್ಮಿಕರು, ಶಾಲಾ ಮಕ್ಕಳು, ಆಸ್ಪತ್ರೆ, ರೈತರು, ಮಾರುಕಟ್ಟೆಗೆ ತೆರಳುವವರಿಗೆ ತುಂಬಾ ಸಹಾಯ ಆದಂತಾಗಲಿದೆ ಎಂದು ಸ್ಥಳೀಯರು ಹೇಳುವ ಮಾತಾಗಿದೆ.
ರಾಷ್ಟ್ರೀಯ ಹೆದ್ದಾರಿವರೆಗೆ ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅಲ್ಲಿಂದ ಕಾರ್ಮಿಕರು ಮುಂದಕ್ಕೆ ಕಾಗಾರಿಕೆಗಳನ್ನು ತಲುಪಲು ಹೆಚ್ಚೆಚ್ಚು ಹಣವನ್ನು ತೆತ್ತು ಖಾಸಗಿ ವಾಹದನಲ್ಲಿ ಹೋಗಬೇಕಿದೆ. ಆದ್ದರಿಂದ ಕೈಗಾರಿಕಾ ಪ್ರದೇಶಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ರಾಮನಗರ ಶಾಸಕ ಇಕ್ಬಾಸ್ ಹುಸೇನ್ ಅವರಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೂ ಅವರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರ.











Click it and Unblock the Notifications