ಡಿಕೆಶಿ- ಯೋಗೇಶ್ವರ್ ಬೈಯ್ದಾಟಕ್ಕೆ ಛೀ ಎನ್ನುತ್ತಿರುವ ಚನ್ನಪಟ್ಟಣ ಜನ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ಚನ್ನಪಟ್ಟಣ, ಜನವರಿ 8: ರಾಜಕೀಯ ನಾಯಕರ ಪರಸ್ಪರ ಬೈದಾಟ, ಕೀಳು ಭಾಷೆ ಬಳಕೆ, ಜವಾಬ್ದಾರಿ ರಹಿತ ಹೇಳಿಕೆಗಳ ವಿರುದ್ಧ ಕ್ಷೇತ್ರದ ಜನರು ತಿರುಗಿ ಬಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಚನ್ನಪಟ್ಟಣದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಮತ್ತು ಸಿ.ಪಿ ಯೋಗೇಶ್ವರ್ ರಾಜಕೀಯ ಕೆಸೆರೆರಚಾಟದಿಂದ ಬೇಸತ್ತು, ಇಬ್ಬರು ನಾಯಕರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕರ ಪತ್ರ ಹಂಚಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು

ಹಲವು ಸಜ್ಜನ ನಾಯಕರು ಚನ್ನಪಟ್ಟಣವನ್ನು ಪ್ರತಿನಿಧಿಸಿದ್ದಾರೆ. ಆದರೆ ಈಗ ಪೊರಕೆ ಹಾಗೂ ಮದುವೆ ಎಂದೆ ಪರಸ್ಪರ ಕೀಳು ಮಟ್ಟದಲ್ಲಿ ಮೂದಲಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ಆಗುವ ಸಂದರ್ಭವನ್ನು ಸಿಪಿವೈ ಹಾಗೂ ಡಿಕೆಶಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

protest in Chenpatna against political leaders irresponsible politics

ಜಿಲ್ಲೆಯಲ್ಲಿ ರಾಜೀಗಾಂಧಿ ವಿವಿ, ಬೈರಮಂಗಲ ಕೆರೆ ಶುದ್ಧೀಕರಣ, ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳು ಹಳ್ಳ ಹಿಡಿದಿವೆ. ಒಬ್ಬರ ಮೇಲೊಬ್ಬರು ಹೇಳಿಕೆಗಳನ್ನು ನೀಡುವ ಬದಲು ಚನ್ನಪಟ್ಟಣದ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಡಿಕೆ ಶಿವಕುಮಾರ್ ಮತ್ತು ಸಿಪಿ ಯೋಗೇಶ್ವರ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಪರಸ್ಪರ ಮೇಲೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿದ್ದಾರೆ. ಇದು ಚನ್ನಪಟ್ಟಣದ ಕೆಲವು ಪ್ರಜ್ಞಾವಂತ ಮತದಾರರಿಗೆ ಬೇಸರ ತರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chenpatna's Kasthuri Karnataka Janapara Vedike members protest against minister DK Shivakumar and MLA CP Yogeshwar for irresponsible political statements.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ