ಆಗಸ್ಟ್ 12 ಹಾಗೂ 13ರಂದು ರಾಮನಗರ ಜಿಲ್ಲೆಯ ಹಲವೆಡೆ ಕರೆಂಟ್ ಕಟ್, ಸಮಯ, ಏರಿಯಾಗಳ ವಿವರ ತಿಳಿಯಿರಿ
ರಾಮನಗರ, ಆಗಸ್ಟ್, 11: ರೇಷ್ಮೆನಗರಿ ರಾಮನಗರ ಹಾಗೂ ಬೊಂಬೆನಾಡು ಚನ್ನಪಟ್ಟಣದ ಕೆಲ ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ಆಗಸ್ಟ್ 12 ಹಾಗೂ 13 ರಂದು ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಚಿಕ್ಕೇನಹಳ್ಳಿ-ಚನ್ನಪಟ್ಟಣ ವಿದ್ಯುತ್ ಉಪಕೇಂದ್ರ ಮಾರ್ಗದಲದಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಆಗಸ್ಟ್ 12 ಮತ್ತು 13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ ಎಂದು ಬೆಸ್ಕಾಂ ತಿಳಿಸಿದೆ. ಕೆ.ವಿ.ಚನ್ನಪಟ್ಟಣ, ಕೆ.ವಿ. ಶಿವನಹಳ್ಳಿ, ಕೆ.ವಿ.ವಂದಾರೆಗುಪ್ಪೆ ವಿದ್ಯುತ್ ಉಪಕೇಂದ್ರದ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ?
ಅವೇರಹಳ್ಳಿ, ಕೈಲಾಂಚ, ಹುಲಿಕೆರೆ ಗೊನ್ನೂರು, ಚನ್ನಪಟ್ಟಣ ನಗರ, ಮಹದೇಶ್ವರ ನಗರ, ಅಂಬೇಡ್ಕರ್ ನಗರ, ಕೆ.ಎಚ್.ಬಿ.ಟಿಪ್ಪು ನಗರ, ಅಪ್ಪಗೆರೆ, ಮಂಗಳವಾರಪೇಟೆ, ಚಿಕ್ಕಮಳ್ಳೂರು, ಬ್ರಹ್ಮಣೀಪುರ, ಹೊಂಗನೂರು, ಕೂಡ್ಲೂರು, ಎಸ್.ಎಸ್.ಮಿಲ್, ಮುದುಗೆರೆ, ಬನ್ನಿಕುಪ್ಪೆ, ಅಂಕನಹಳ್ಳಿ, ಕವಣಪುರ, ಕಾಡನಕುಪ್ಪೆ, ನಂಜಾಪುರ, ಹೊಸದೊಡ್ಡಿ, ವಂದಾರಗುಪ್ಪೆ, ದೇವರಹೊಸಹಳ್ಳಿ, ಪಾರೆದೊಡ್ಡಿ ಹಾಗೂ ಸುತ್ತಮುತ್ತಿಲಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.












Click it and Unblock the Notifications