ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಳೆಯ ಅಬ್ಬರಕ್ಕೆ ರಾಮನಗರದಲ್ಲಿ ಶುರುವಾಗಿದೆ ಪ್ರವಾಹ ಭೀತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 6: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಬೆಂಗಳೂರು ಮಳೆಯ ನೀರು ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿ ಅಲ್ಲಿಂದ ಮಂಚನಬೆಲೆ ಜಲಾಶಯ ಸೇರಿ ನಂತರ ಅರ್ಕಾವತಿ ನದಿಯಲ್ಲಿ ಹರಿಯುತ್ತಿದೆ.

ರಾಜಧಾನಿಯಲ್ಲಿನ ಬಾರಿ ಮಳೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದ್ದು, ಇಲ್ಲಿನ ನೀರು ಹರಿದು ‌ಮಂಚನಬೆಲೆ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಮಂಚನಬೆಲೆ ಜಲಾಶಯದಿಂದ ನೀರನ್ನು ಅರ್ಕಾವತಿ ನದಿಗೆ ಬಿಡುತ್ತಿರುವುದರಿಂದ ನಗರದಲ್ಲಿ ನೆರೆ ಬೀತಿ ಹೆಚ್ಚಿದೆ.

ರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿ

ಈಗಾಗಲೇ ಕಳೆದ ರಾತ್ರಿಯಿಂದಲೇ ಮಂಚನಬೆಲೆ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರನ್ನು ಅರ್ಕಾವತಿ ನದಿಗೆ ಬಿಡಲಾಗಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾದಲ್ಲಿ ನದಿಗೆ ಮತ್ತೆ ಹೆಚ್ಚಿನ ನೀರು ಹರಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

People of Ramanagara Living Fear to flood due to Heavy Raining in Bengaluru

ಮಂಗಳವಾರ ತಿಪ್ಪಗೊಂಡನಹಳ್ಳಿ ಜಲಾಶಯದ ಸಮೀಪದ ಬೆಂಗಳೂರಿನ ಬಡಾವಣೆಗಳಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯದಿಂದ ನೀರನ್ನು ಬಿಡಲಾಗುತ್ತದೆ. ಈ ನೀರು ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳಲ್ಲಿ ಹರಿದು ಬರುತ್ತಿರುವ ನೀರು ಮಂಚನಬೆಲೆ ಜಲಾಶಯ ಸೇರಿ, ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ಗಿಂತ ಹೆಚ್ಚಿನ ನೀರನ್ನು ಅರ್ಕಾವತಿ ನದಿಗೆ ಬಿಟ್ಟರೆ ರಾಮನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ಕಥೆ ಗೋವಿಂದ ಗೋವಿಂದ ಎಂದಿದ್ದೇಕೆ ಡಿಕೆಶಿ?ಬಿಜೆಪಿ ಆಡಳಿತದಲ್ಲಿ ಬೆಂಗಳೂರಿನ ಕಥೆ ಗೋವಿಂದ ಗೋವಿಂದ ಎಂದಿದ್ದೇಕೆ ಡಿಕೆಶಿ?

ಅರ್ಕಾವತಿ ನದಿ ಪಾತ್ರದ ಜನರಿಗೆ ಎಚ್ಚರಿಕೆ

ಮಂಚನಬೆಲೆ ಜಲಾಶದಿಂದ ಅರ್ಕಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆಯ ಸಂಭವ ಇರುವುದರಿಂದ ಅರ್ಕಾವತಿ ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ರಾಮನಗರ ನಗರಸಭೆಯ ಕಮಿಷನರ್ ನಂದಕುಮಾರ್ ಸೂಚನೆ ನೀಡಿದ್ದಾರೆ.

People of Ramanagara Living Fear to flood due to Heavy Raining in Bengaluru

ಕಳೆದ 40 ವರ್ಷಗಳ ನಂತರ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ. ಒಂದು ಕಡೆ ಬಹಳ ವರ್ಷಗಳ ನಂತರ ಅರ್ಕಾವತಿ ನದಿಯಲ್ಲಿ ನೀರಿನ ಹರಿವನ್ನು ಜನರು ಸೇತುವೆಗಳ ಮೇಲೆ ನಿಂತು ಕಣ್ಣತುಂಬಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ನದಿ ಪಾತ್ರದಲ್ಲಿ ವಾಸವಾಗಿರುವ ಜನರು ಯಾವ ಕ್ಷಣದಲ್ಲಿ ಪ್ರವಾಹ ತಮ್ಮ ಬದುಕನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕದಲ್ಲಿದ್ದಾರೆ.

ಅರ್ಕಾವತಿ ನದಿ ರಾಮನಗರ ಮಧ್ಯಬಾಗದಲ್ಲಿ ಸುಮಾರು ನಾಲ್ಕು ಕಿಮೀ ಹರಿದು ಹೋಗಿದ್ದು, ನಗರ ಪ್ರದೇಶದ ಜನರು ತಕ್ಷಣವೇ ಜಾಗ ಖಾಲಿ ಮಾಡುವಂತೆಹಾಗೂ? ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅರ್ಕಾವತಿ ಪ್ರವಾಹ ಪರಿಸ್ಥಿತಿ ನಿಬಾಯಿಸುಯವ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಹಾಗೂ ಅಂಬೇಡ್ಕರ್ ಭವನದ ಕಾಳಜಿ ಕೇಂದ್ರ ತೆರೆಯಲಾಗಿದೆ. ಅರ್ಕಾವತಿ ನದಿ ಪಾತ್ರದ ಜನರು ಕಾಳಜಿ ಕೇಂದ್ರಗಳಿಗೆ ತೆರಳಿ‌ ಆಶ್ರಯ ಪಡೆಯುವಂತೆ ಪೌರಾಯುಕ್ತ ಹಾಗೂ ಸ್ಥಳೀಯ ಮುಖಂಡರ ಮನವಿ ಮಾಡಿದ್ದಾರೆ. ಅಲ್ಲದೇ ನಗರಸಭೆಯ ಅಟೋಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಮೂಲ ಜನರನ್ನು ಎಚ್ಚರಿಕೆ ರವಾನಿಸಿದ್ದಾರೆ.

English summary
People in city of Ramanagara Living Fear to flood due to Heavy Raining in Bengaluru last 2 day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X