ಕಾಡಿನ ಸಂರಕ್ಷಣೆ ಸಂದೇಶದೊಂದಿಗೆ ಮಗುವಿನ ಫೋಟೋಶೂಟ್ ಮಾಡಿಸಿದ ಅಪ್ಪು ಅಭಿಮಾನಿ
ಚನ್ನಪಟ್ಟಣ, ನವೆಂಬರ್ 15: ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ತಮ್ಮ ಒಂದು ತಿಂಗಳ ಪುಟ್ಟ ಮಗುವನ್ನು ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಭಾವಚಿತ್ರದೊಂದಿಗೆ ಪೋಟೋ ಶೂಟ್ ಮಾಡಿಸುವ ಮೂಲಕ ಚನ್ನಪಟ್ಟಣದ ದಂಪತಿ ತಮ್ಮ ನೆಚ್ಚಿನ ನಟ ಪುನೀತ್ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
ನವೆಂಬರ್ 14ರಂದು ಮಕ್ಕಳ ದಿನಾಚರಣೆ ಸಂಭ್ರಮ, ಒಂದು ಕಾಲದಲ್ಲಿ ಚಿತ್ರರಂಗಕ್ಕೆ ಬಾಲ ನಟನಾಗಿ ಪ್ರವೇಶ ಮಾಡಿದ ಪುನೀತ್ ರಾಜ್ ಕುಮಾರ್ ನಟಿಸಿದ ಮಕ್ಕಳ ಪಾತ್ರಗಳು ಮಕ್ಕಳಿಂದ ಮುದುಕರ ವರೆಗೆ ಎಲ್ಲಾ ವಯಸ್ಸಿನ ಚಿತ್ರ ರಸಿಕರನ್ನು ಸೂರೆಗೊಂಡಿದೆ. ಪುನೀತ್ ಅಭಿಮಾನಿ ದಂಪತಿ ತಮ್ಮ ಮಗುವಿನ ಪೋಟೋ ಶೂಟ್ ವಿಭಿನ್ನವಾಗಿ ಮಾಡಲು ನಿರ್ಧರಿಸಿ, ಅಪ್ಪು ಭಾವಚಿತ್ರದೊಂದಿಗೆ ಮಗುವಿನ ಚಿತ್ರ ತೆಗೆಸಿ ಎಲ್ಲರ ಗಮನ ಸೆಳೆಯುತ್ತಿದೆ.
ಅಪ್ಪು ಅಭಿನಯದ ಕೊನೆಯ ಸಾಕ್ಷ್ಯಚಿತ್ರ ಗಂಧದಗುಡಿ ಈಗಾಗಲೇ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರಮುಖವಾಗಿ ಕಾಡಿನ ರಕ್ಷಣೆ, ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಬೇಕು ಎಂಬ ಸಂದೇಶವನ್ನು ಗಂಧದಗುಡಿ ಚಿತ್ರದ ಮೂಲಕ ಪುನೀತ್ ಅಭಿಮಾನಿಗಳಿಗೆ ಸೇರಿದ್ದಾರೆ.

ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರದ ಸಂದೇಶಕ್ಕೆ ಮನ ಸೋತ ಚನ್ನಪಟ್ಟಣ ಮನು-ಭಾನು ದಂಪತಿ ತಮ್ಮ ಒಂದು ತಿಂಗಳ ಮಗು ದಿಶಾಂತ್.ಎಂ ಗೌಡನಿಗೆ ಫೋಟೋ ಶೂಟ್‌ನಲ್ಲಿ ಕಾಡಿನ ಸಂರಕ್ಷಣೆ ಸಂದೇಶದೊಂದಿಗೆ ಪುನೀತ್ ಭಾವಚಿತ್ರ ಪ್ರದರ್ಶನ ಮಾಡುವ ಮೂಲಕ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
ಕರುನಾಡಿನ ಪುತ್ರ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ವರ್ಷ ಉರುಳಿದರೂ ಸಹ ಅವರ ಮೇಲಿನ ಅಭಿಮಾನ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ರಾಜ್ಯದ ಯಾವುದೇ ಮೂಲೆಮೂಲೆಯಲ್ಲೂ ಯಾವುದೇ ಕಾರ್ಯಕ್ರಮವಿರಲಿ ಅದು ಊರಹಬ್ಬ, ಜಾತ್ರೆ, ಉತ್ಸವ ಸೇರಿದಂತೆ ಜನರ ತಮ್ಮ ಮನೆಯ ಖಾಸಗಿ ಕಾರ್ಯಕ್ರವೇ ಇರಲಿ ಅಲ್ಲಿ ಪುನೀತ ಭಾವಚಿತ್ರ ಇರಲೇಬೇಕು.
ಪುನೀತ್ ಮೇಲಿನ ಅದಮ್ಯ ಅಭಿಮಾನಕ್ಕೆ ಸಾಕ್ಷಿ ತಾಲೂಕಿನ ತಗಚಗೆರೆ ಗ್ರಾಮದ ಮನುಭಾನು ದಂಪತಿಗಳು. ಇಬ್ಬರೂ ಸಹ ನಟ ಪುನೀತ್ ರಾಜಕುಮಾರ್ ರವರ ಅಪಟ್ಟ ಅಭಿಮಾನಿಗಳು. ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಿಶಿಷ್ಟ ರೀತಿ ಸಾಮಾಜಿಕ ತಾಣ ಸೇರಿದಂತೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಕಿಮ್ಸ್ ನಲ್ಲಿ ಅರ್ಥಪೂರ್ಣ ಮಕ್ಕಳ ದಿನಾಚರಣೆ
ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರೆಯಿಸಿಕೊಳ್ಳುವ ಕಿಮ್ಸ್ ಸದಾ ಚಟುವಟಿಕೆಯಲ್ಲಿ ತೊಡಗಿರುವ ಇಲ್ಲಿನ ವೈದ್ಯಕೀಯ ಸಿಬ್ಬಂದಿ ನವೆಂಬರ್ 14 ರಂದು ರಿಲ್ಯಾಕ್ಸ್ ಆಗಿ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕೇಕ್ ತಂದು ಕಿಮ್ಸ್‌ಗೆ ಚಿಕಿತ್ಸೆಗಾಗಿ ಆಗಮಿಸಿದ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸುವ ಮೂಲಕ ಮಕ್ಕಳೊಂದಿಗೆ ವೈದ್ಯಕೀಯ ಸಿಬ್ಬಂದಿ ಸಂಭ್ರಮಿಸಿದರು. ಕೊಠಡಿಯನ್ನು ಸುಂದರವಾಗಿ ತಳಿರು ತೋರಣಗಳಿಂದ ಸಿಂಗರಿಸಿ ಕಿಮ್ಸ್‌ಗೆ ಬಂದಿದ್ದ ಮಕ್ಕಳು ಪೋಷಕರನ್ನು ಕರೆಯಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಹಿರಿಯ ವೈದ್ಯರು, ಕಿಮ್ಸ್ ಸಿಬ್ಬಂದಿ ಎಲ್ಲರೂ ಸೇರಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿಯಾದರು.












Click it and Unblock the Notifications