ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣವಿಲ್ಲ: ದೇವೇಗೌಡ ಸ್ಪಷ್ಟನೆ

By: ರಾಮನಗರ ಪ್ರತಿನಿಧಿ
Subscribe to Oneindia Kannada
   ನನ್ನ ರಾಜಕೀಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ- ದೇವೇಗೌಡ | Oneindia Kannada

   ರಾಮನಗರ, ಡಿಸೆಂಬರ್.02: 'ನನ್ನ ರಾಜಕೀಯಕ್ಕೆ ಅಡ್ಡಿಮಾಡಲು ಯಾರಿಂದಲೂ ಆಗುವುದಿಲ್ಲ, ಹಾಗೇಯೇ ಜೆಡಿಎಸ್ ಬೆಳವಣಿಗೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರವರು ರಾಮನಗರದಲ್ಲಿ ಅಬ್ಬರಿಸಿದ್ದಾರೆ.

   ರಾಮನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು. ನಂತರ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೊಂದಾಣಿಕೆ ರಾಜಕಾರಣ ಹಿಂದೆಯೂ ಮಾಡಿಲ್ಲ ಮುಂದೆಯೂ ಮಾಡಲ್ಲ, ಅದರ ಪ್ರಶ್ನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

   ಪ್ರಜ್ವಲ್ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ಕೊಟ್ಟ ದೇವೇಗೌಡ

   ಯುದ್ದಕ್ಕೆ ನಿಂತಮೇಲೆ ಇಂಟ್ರನಲ್ ಮತ್ತು ಎಕ್ಸಟ್ರನಲ್ ಅಂಡರ್ ಸ್ಟಾಂಡಿಂಗ್ ಇಲ್ಲ ರಾಜಕೀಯಕ್ಕೆ ಬಂದು 57 ವರ್ಷಗಳಾಗಿವೆ ನನ್ನ ರಾಜಕೀಯವನ್ನು ನಿಲ್ಲಿಸಲು ಆಗುವುದಿಲ್ಲ ಹಾಗೇಯೇ ಜೆಡಿಎಸ್ ಬೆಳವಣಿಗೆಯನ್ನು ಸಹ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

   No One can end my political career : Devegowda

   ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನ ಎಚ್ ಡಿ ಕುಮಾರಸ್ವಾಮಿಯವರು ತಯಾರು ಮಾಡುತ್ತಿದ್ದಾರೆ. ಇಂದು ಸಹ ಅದೇ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಲೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ರೆ ಹಲವಾರು ಗೊಂದಲಗಳು ಉಂಟಾಗಿ ಕುತ್ತಿಗೆಗೆ ಬರುತ್ತೆ. ಹಾಗಾಗಿ ಎಲ್ಲವನ್ನು ಸಿದ್ದಪಡಿಸಿದ ಬಳಿಕ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

   ಹಲವು ವದಂತಿಗಳಿಗೆ ತೆರೆ ಎಳೆದ ದೇವೇಗೌಡರು!

   ಇದೇ ವೇಳೆ ಚನ್ನಪಟ್ಟಣ ಶಾಸಕ ಯೋಗೇಶ್ವರ್‌ಗೆ ಟಾಂಗ್ ನೀಡಿದ ಎಚ್.ಡಿ ದೇವೇಗೌಡರು 'ಅವರನ್ನು ಆಧುನಿಕ ಭಗೀರಥ ಅಂತಾರೆ. ಅವರು ನೀರನ್ನು ಎಲ್ಲಿಂದ ತಂದ್ದಿದಾರೆ, ಅದರ ಮೂಲ ಯಾರು, ಅದರ ಹಿಂದೆ ಯಾರಿದ್ದಾರೆ ಅಂತಾ ಹೇಳುತ್ತಾರ. ಅದು ಅವರಿಂದ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Devegowda participated in a private programm in ramanagara. while talking to media Devegowda said 'No one can end my political career, and no one can stop jds growth in Karnataka'. he also said Kumaraswamy preparing jds contestants list.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ